ಸವಣೂರು : ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸವಣೂರು ವಲಯ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸವಣೂರು ವಲಯ, ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲ ಇವುಗಳ ಸಹಯೋಗದಲ್ಲಿ ಸ್ವಾಸ್ಥ್ಯ ಸಂಕಲ್ಪ ಕುರಿತು ಉಪನ್ಯಾಸ ಮಾಲಿಕೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಇದರ ಸರಣಿ ಕಾರ್ಯಕ್ರಮದ ಮೊದಲ ಕಾರ್ಯಕ್ರಮ ನ.2 ರಂದು ಸರ್ವೆ ಭಕ್ತಕೋಡಿ ಎಸ್.ಜಿ.ಎಂ ಪ್ರೌಢಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪುತ್ತೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಯುವ ಪೀಳಿಗೆಯು ಮೋಜು, ಮಸ್ತಿಗಾಗಿ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುವಂತಾಗಿದೆ. ದುಶ್ಚಟಗಳನ್ನು ದೂರವಿಟ್ಟು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಪಣತೊಡಬೇಕು. ಆರೋಗ್ಯ ಪೂರ್ಣ ವ್ಯಕ್ತಿತ್ವ ಹಾಗೂ ಸಮಾಜದಲ್ಲಿ ನೆಮ್ಮದಿ ಸಹಬಾಳ್ವೆ ಸಾಧ್ಯ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಸವಣೂರು ಸ.ಪ.ಪೂ.ಕಾಲೇಜಿನ ಉಪನ್ಯಾಸಕ ಬಿ.ವಿ.ಸೂರ್ಯನಾರಾಯಣ ಅವರು ಸ್ವಾಸ್ಥ್ಯ ಶೈಕ್ಷಣಿಕ ಒಳಹರಿವಿನಲ್ಲಿ ನಮ್ಮ ಪಾತ್ರದ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಎಸ್.ಜಿ.ಎಂ ಪ್ರೌಢಶಾಲೆಯ ಮುಖ್ಯಗುರು ಎಚ್.ಬಿ.ಶ್ರೀನಿವಾಸ ವಹಿಸಿದ್ದರು.
ಜನ ಜಾಗೃತಿ ವೇದಿಕೆಯ ವತಿಯಿಂದ ಸಾಧಕ ವಿದ್ಯಾರ್ಥಿನಿ ಆಯಿಶತ್ ಶಮಾ ಭಕ್ತಕೋಡಿ ಅವರಿಗೆ ನಗದು ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಮುಂಡೂರು ಗ್ರಾ.ಪಂ.ಅಧ್ಯಕ್ಷ ಎಸ್.ಡಿ ವಸಂತ ಸರ್ವೆದೋಳಗುತ್ತು ಅವರು ವಿದ್ಯಾರ್ಥಿನಿಯನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸವಣೂರು ವಲಯದ ಅಧ್ಯಕ್ಷ ರಾಧಾಕೃಷ್ಣ ರೈ ಸೊರಕೆ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಚೇತನ್ ಕುಮಾರ್ ಕೋಡಿಬೈಲು , ಕಲ್ಲಮೆ ಶ್ರೀಗುರುರಾಘವೇಂದ್ರ ಸ್ವಾಮಿ ಮಠದ ಅಧ್ಯಕ್ಷ ಡಾ.ಸೀತಾರಾಮ ಭಟ್ ಕಲ್ಲಮೆ, ಸಾಧಕ ವಿದ್ಯಾರ್ಥಿನಿ ಆಯಿಶತ್ ಶಮಾ ಅವರ ತಂದೆ ಅಬ್ದುಲ್ ರಹಿಮಾನ್ ಭಕ್ತಕೋಡಿ ಉಪಸ್ಥಿತರಿದ್ದರು.
ಶಿಕ್ಷಕಿ ಜಯಶ್ರೀ ಅವರು ಅಭಿನಂದನಾ ಪತ್ರ ವಾಚಿಸಿದರು. ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ಕಮಲೇಶ್ ಎಸ್.ವಿ, ಪದಾಧಿಕಾರಿಗಳಾದ ಡಾ.ಪ್ರವೀಣ್ ಎಸ್.ಡಿ, ಅಶೋಕ್ ಎಸ್.ಡಿ, ಜಯಪ್ರಕಾಶ್ ಅಲೇಕಿ, ರಮೇಶ್, ಚಿತ್ರಾ ಸರ್ವೆ ಅತಿಥಿಗಳನ್ನು ಗೌರವಿಸಿದರು. ಜನಜಾಗೃತಿ ವೇದಿಕೆ ಸವಣೂರು ವಲಯದ ಅಧ್ಯಕ್ಷ ಮಹೇಶ್ ಕೆ.ಸವಣೂರು ಸ್ವಾಗತಿಸಿದರು. ಸವಣೂರು ಯುವಕ ಮಂಡಲದ ಅಧ್ಯಕ್ಷ ತಾರಾನಾಥ ಪಿ. ಪ್ರಸ್ತಾವನೆಗೈದರು. ಶ್ರೀ ಕ್ಷೇ.ಧ.ಗ್ರಾ.ಯೋ.ಸವಣೂರು ವಲಯ ಮೇಲ್ವಿಚಾರಕಿ ಅಶ್ವಿನಿ ಎಂ.ಜಿ ವಂದಿಸಿದರು. ಶಿಕ್ಷಕ ಮೋಹನ್ ಕಾರ್ಯಕ್ರಮ ನಿರೂಪಿಸಿದರು.
ನ.7 ರಂದು ಕಾಣಿಯೂರಿನಲ್ಲಿ: ನ.7ರಂದು ಕಾಣಿಯೂರು ಸ.ಪ.ಪೂ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾ.ಯೋಜನಾಧಿಕಾರಿ ಜನಾರ್ಧನ ಎಸ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಜನಜಾಗೃತಿ ವೇದಿಕೆ ಸವಣೂರು ವಲಯದ ಅಧ್ಯಕ್ಷ ಮಹೇಶ್ ಕೆ.ಸವಣೂರು ವಹಿಸುವರು. ಕಾಣಿಯೂರು ಕಾಲೇಜಿನ ಪ್ರಾಂಶುಪಾಲ ಕೃಷ್ಣ ಪಿ ಸಾಧಕ ವಿದ್ಯಾರ್ಥಿಗೆ ಅಭಿನಂದನೆ ಸಲ್ಲಿಸವರು. ಅತಿಥಿಗಳಾಗಿ ಜನಜಾಗೃತಿ ವೇದಿಕೆ ಉಪ್ಪಿನಂಗಡಿ ವಲಯದ ಅಧ್ಯಕ್ಷ ಮೋಹನ ಪಕ್ಕಳ, ಜನಜಾಗೃತಿ ವೇದಿಕೆಯ ಸವಣೂರು ವಲಯದ ಸದಸ್ಯ ಅರವಿಂದ ಪುಣ್ಚತ್ತಾರು, ದೋಳ್ಪಾಡಿ ಗ್ರಾಮ ಸಮಿತಿ ಅಧ್ಯಕ್ಷ ಮೋಹನದಾಸ್ ಬಲ್ಕಾಡಿ, ಕುದ್ಮಾರು ಗ್ರಾಮ ಸಮಿತಿ ಅಧ್ಯಕ್ಷ ಲೋಕನಾಥ ವಜ್ರಗಿರಿ ಪಾಲ್ಗೊಳ್ಳುವರು. ಸಂಪನ್ಮೂಲ ವ್ಯಕ್ತಿಯಾಗಿ ಜನಜಾಗೃತಿ ವೇದಿಕೆ ಸವಣೂರು ವಲಯದ ಮಾಜಿ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಅವರು ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ನಮ್ಮ ಪಾತ್ರ ವಿಷಯದ ಕುರಿತು ಮಾತನಾಡುವರು.
ನ.9 ರಂದು ಸವಣೂರಿನಲ್ಲಿ: ನ.9ರಂದು ಸವಣೂರು ಪ.ಪೂ.ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮವನ್ನು ವಕೀಲರ ಸಂಘದ ಮಾಜಿ ಅಧ್ಯಕ್ಷ ಮಹೇಶ್ ಕಜೆ ಉದ್ಘಾಟಿಸುವರು. ಸವಣೂರು ಪ್ರಾ.ಕೃ.ಪ.ಸ.ಸಂ.ದ ಸಿಇಓ ಚಂದ್ರಶೇಖರ್ ಪಿ. ಸಾಧಕ ವಿದ್ಯಾರ್ಥಿಗೆ ಅಭಿನಂದನೆ ಸಲ್ಲಿಸುವರು. ಅಧ್ಯಕ್ಷತೆಯನ್ನು ಕಾಲೇಜಿನ ಕಾರ್ಯಾಧ್ಯಕ್ಷ ಗಿರಿಶಂಕರ ಸುಲಾಯ ವಹಿಸುವರು. ಅತಿಥಿಗಳಾಗಿ ಕಾಲೇಜಿನ ಪ್ರಾಚಾರ್ಯೆ ಪದ್ಮಾವತಿ, ಸವಣೂರು ಪ್ರೌಢಶಾಲೆಯ ಮುಖ್ಯಗುರು ರಘು ಬಿ.ಎಸ್, ವಕೀಲರ ಸಂಘದ ಕಾರ್ಯದರ್ಶಿ ಮಂಜುನಾಥ ಎನ್.ಎಸ್, ಜನಜಾಗೃತಿ ವೇದಿಕೆಯ ಪುತ್ತೂರು ವಲಯದ ಅಧ್ಯಕ್ಷ ಶೀನಪ್ಪ ಕುಲಾಲ್, ಸವಣೂರು ಗ್ರಾಮ ಸಮಿತಿ ಅಧ್ಯಕ್ಷ ತಾರಾನಾಥ ಕಾಯರ್ಗ ಪಾಲ್ಗೊಳ್ಳುವರು. ಸಂಪನ್ಮೂಲ ವ್ಯಕ್ತಿಯಾಗಿ ವಕೀಲ ಮನೋಹರ ಎ ಅವರು ಸ್ವಾಸ್ಥ್ಯ ಪರಿಸರ ಮತ್ತು ಕಾನೂನು ಚೌಕಟ್ಟು ವಿಷಯದ ಕುರಿತು ಮಾತನಾಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…