ಕಲಿಯುಗದಲ್ಲಿ ಭಗವಂತನ ಸಾಮೂಹಿಕ ಭಜನೆಗೆ ಹೆಚ್ಚು ಶಕ್ತಿ ಇದೆ. ಭಗವಂತ ನಮ್ಮ ಬೇಕು ಬೇಡಗಳಲ್ಲಿ ಸ್ಪಂದಿಸುತ್ತಾನೆ. ಕೀರ್ತನೆಗಳನ್ನು ದೇವರಿಗೆ ಸಮರ್ಪಿಸುವುದು, ಭಗವಂತನನ್ನು ಹಾಡಿ ಧನ್ಯತಾ ಭಾವ ಸಮರ್ಪನೆ ಮಾಡಿ ದೇವರ ಅನುಗ್ರಹ ಪಡೆಯಬಹುದು ಎಂದು ರಾಮಕೃಷ್ಣ ತಿಳಿಸಿದರು.
ಇವರು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರ ದುರ್ಗಾನಗರ-ಅಜ್ಜಿನಡ್ಕ ಇಲ್ಲಿ ನಡೆದ ಭಜನಾ ಮಂಡಳಿಯ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಭಾಧ್ಯಕ್ಷತೆಯನ್ನು ರಾಮಕೃಷ್ಣ ಮೂಡಂಬೈಲು ವಹಿಸಿದರು. ವೇದಿಕೆಯಲ್ಲಿ ಭಜನಾ ಮಂದಿರದ ಅಧ್ಯಕ್ಷರಾದ ಶ್ರೀ ವಿನಯಕೃಷ್ಣ ಹಾಗೂ ಭಜನಾ ತರಬೇತುದಾರರಾದ ಪ್ರಶಾಂತ ಎನ್. ಬಿ ದೊಡ್ಡಡ್ಕ ಉಪಸ್ಥಿತರಿದ್ದರು
.ಭಜನಾ ತರಬೇತುದಾರರಾದ ಪ್ರಶಾಂತ ಎನ್. ಬಿ ದೊಡ್ಡಡ್ಕ ಇವರಿಗೆ ಭಜನಾ ಮಂಡಳಿಯ ಪರವಾಗಿ ರಾಮಕೃಷ್ಣ ಕಾಟುಕುಕ್ಕೆ ಸನ್ಮಾನಿಸಿ ಕಿರುಕಾಣಿಕೆ ಸಮರ್ಪಿಸಲಾಯಿತು. ಶ್ರುಜನ, ಅಕ್ಷತಾ ಎ, ಲಿಖಿತಾ ಪ್ರಾರ್ಥನೆ ಹಾಡಿದರು. ಮಧುಶ್ರೀ ಸ್ವಾಗತಿಸಿ, ಸುಮನ. ಎನ್ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಅಕ್ಷತಾ.ಎಂ ಮಾಡಿದರು. ಕೊನೆಯಲ್ಲಿ ರಾಮಕೃಷ್ಣ ಕಾಟುಕುಕ್ಕೆ ಭಜನಾ ತಂಡಕ್ಕೆ ಕೀರ್ತನೆಯನ್ನು ಅಭ್ಯಸಿಸಿದರು.
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…