ಭಗವದ್ಗೀತೆ ಅರ್ಥ ಮಾಡಿಕೊಂಡಾದಾಗ ಯಶಸ್ವೀ ಜೀವನ – ಶ್ರೀಕೃಷ್ಣ ಉಪಾಧ್ಯಾಯ

August 26, 2019
12:30 PM

ಗುತ್ತಿಗಾರು: ದೇಶಕ್ಕಾಗಿ ನಾವು ಏನು ಮಾಡಬೇಕು ಎಂಬುದನ್ನು ಶ್ರೀಕೃಷ್ಣ ಪರಮಾತ್ಮ ಈ ಹಿಂದೆಯೇ ಹೇಳಿದ್ದಾನೆ.ಈಗ ಆಗಬೇಕಿರುವುದು  ಅದರ ಪಾಲನೆ ಮತ್ತು ನೆನಪು ಮಾತ್ರಾ. ಭಗವದ್ಗೀತೆ ಓದಿದರೆ ಎಲ್ಲವೂ ಅರ್ಥವಾಗುತ್ತದೆ. ಬದುಕು ಹೇಗೆ ನಡೆಸಬೇಕು ಎಂದೂ ಅದರೊಳಗೆ ಇದೆ. ಹೀಗಾಗಿ ಭಗವದ್ಗೀತೆ ಅರ್ಥಮಾಡಿಕೊಂದರೆ ಯಶಸ್ವೀ ಬದುಕು, ಯಶಸ್ವೀ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಖ್ಯಾತ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.

Advertisement
Advertisement

ಅವರು ಬಾಂಧವ್ಯ ಗೆಳೆಯರ ಬಳಗದ ವತಿಯಿಂದ ಕಮಿಲದ ಶ್ರೀ ರಕ್ತೇಶ್ವರಿ ಸಾನ್ನಿಧ್ಯದ ವಠಾರದಲ್ಲಿ  ನಡೆದ ಶ್ರೀಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಯಾವಾಗಲೂ ಪರಿಶ್ರಮದ ಬದುಕು ಮಾದರಿಯಾಗಿರುತ್ತದೆ. ಅಂತಹ ಬದುಕು ಎಲ್ಲರದೂ ಆಗಬೇಕು ಎಂದ ಅವರು ಒಡನಾಡಿಯಾದವನಿಗೆ ವ್ಯಕ್ತಿತ್ವವೂ ಅರ್ಥವಾಗುತ್ತದೆ. ಹೀಗಾಗಿ ಶ್ರೀಕೃಷ್ಣನ ಒಡನಾಡಿಯಾದವನಿಗೆ ಅವನ ಬಗ್ಗೆಯೂ ತಿಳಿಯುತ್ತದೆ ಎಂದರು.

Advertisement

ಸಭಾಧ್ಯಕ್ಷತೆಯನ್ನು ಬಾಂಧವ್ಯ ಗೆಳೆಯರ ಬಳಗದ ಅಧ್ಯಕ್ಷ ಪ್ರಸನ್ನ ಮುಳುಬಾಗಿಲು ವಹಿಸಿದ್ದರು. ವೇದಿಕೆಯಲ್ಲಿ ರಕ್ತೇಶ್ವರಿ ಸಾನ್ನಿಧ್ಯದ ಆಡಳಿತ ಮಂಡಳಿ ಅಧ್ಯಕ್ಷ ತುಂಗನಾಥ ಕಾಯನಕೋಡಿ, ಗ್ರಾಪಂ ಮಾಜಿ ಸದಸ್ಯ ರಾಧಾಕೃಷ್ಣ ತುಪ್ಪದಮನೆ , ದೈಹಿಕ ನಿರ್ದೇಶಕ ರಾಧಾಕೃಷ್ಣ ಏನೆಕಲ್ಲು, ತೀರ್ಥರಾಮ ಕಮಿಲ ಮೊದಲಾದವರು ಉಪಸ್ಥಿತರಿದ್ದರು.

Advertisement

ಈ ಸಂದರ್ಭ ಏನೆಕಲ್ಲಿನ ನಾಟಿ ವಿಷ ವೈದ್ಯ ನಾಗೇಶ್ ನೆಕ್ರಾಜೆ, ಶ್ರೀಕಣಿಲ ನಾಟಿ ವೈದ್ಯ ಶ್ರೀನಿವಾಸ ಮುಗುಳಿ , ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಇವರನ್ನು ಸನ್ಮಾನಿಸಲಾಯಿತು.

Advertisement

 

Advertisement

 

ಸಭಾಕಾರ್ಯಕ್ರಮದಲ್ಲಿ ವಿವಿಧ ಸ್ಫರ್ಧೆಗಳ ಬಹುಮಾನ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Advertisement

ಬಾಂಧವ್ಯ ಗೆಳೆಯರ ಬಳಗದ ಲೋಕೇಶ್ ಕಾಂತಿಲ ಸ್ವಾಗತಿಸಿ ಪುರುಷೋತ್ತಮ ಪುಚ್ಚಪ್ಪಾಡಿ ವಂದಿಸಿದರು. ದಾಮೋದರ ನೇರಳ ಕಾರ್ಯಕ್ರಮ ನಿರೂಪಿಸಿದರು.

Advertisement

 

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಿಸಾನ್‌ ಸಮ್ಮಾನ್‌ ನಿಧಿಯ ಮೂಲಕ ರೈತರಿಗೆ 21,000 ಕೋಟಿ ರೂಪಾಯಿ |
September 19, 2024
9:17 PM
by: ದ ರೂರಲ್ ಮಿರರ್.ಕಾಂ
ತುಮಕೂರು ಜಿಲ್ಲೆಯಲ್ಲಿ ದಾಖಲೆಯ ಹಾಲು ಉತ್ಪಾದನೆ
September 19, 2024
9:00 PM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಸಾವಿರಕ್ಕೂ ಅಧಿಕ ನಕಲಿ ವೈದ್ಯರ ವಿರುದ್ಧ ಪ್ರಕರಣ |
September 19, 2024
8:53 PM
by: ದ ರೂರಲ್ ಮಿರರ್.ಕಾಂ
ಪಶ್ಚಿಮ ಘಟ್ಟ ಸೂಕ್ಷ್ಮ ಪರಿಸರ ಪ್ರದೇಶ | ವಿವೇಚನಾತ್ಮಕ ನಿರ್ಧಾರ ಕೈಗೊಳ್ಳುವ ಅಗತ್ಯ | ಅರಣ್ಯ ಸಚಿವ ಈಶ್ವರ್ ಖಂಡ್ರೆ
September 19, 2024
8:35 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror