ಗುತ್ತಿಗಾರು: ದೇಶಕ್ಕಾಗಿ ನಾವು ಏನು ಮಾಡಬೇಕು ಎಂಬುದನ್ನು ಶ್ರೀಕೃಷ್ಣ ಪರಮಾತ್ಮ ಈ ಹಿಂದೆಯೇ ಹೇಳಿದ್ದಾನೆ.ಈಗ ಆಗಬೇಕಿರುವುದು ಅದರ ಪಾಲನೆ ಮತ್ತು ನೆನಪು ಮಾತ್ರಾ. ಭಗವದ್ಗೀತೆ ಓದಿದರೆ ಎಲ್ಲವೂ ಅರ್ಥವಾಗುತ್ತದೆ. ಬದುಕು ಹೇಗೆ ನಡೆಸಬೇಕು ಎಂದೂ ಅದರೊಳಗೆ ಇದೆ. ಹೀಗಾಗಿ ಭಗವದ್ಗೀತೆ ಅರ್ಥಮಾಡಿಕೊಂದರೆ ಯಶಸ್ವೀ ಬದುಕು, ಯಶಸ್ವೀ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಖ್ಯಾತ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.
ಅವರು ಬಾಂಧವ್ಯ ಗೆಳೆಯರ ಬಳಗದ ವತಿಯಿಂದ ಕಮಿಲದ ಶ್ರೀ ರಕ್ತೇಶ್ವರಿ ಸಾನ್ನಿಧ್ಯದ ವಠಾರದಲ್ಲಿ ನಡೆದ ಶ್ರೀಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಯಾವಾಗಲೂ ಪರಿಶ್ರಮದ ಬದುಕು ಮಾದರಿಯಾಗಿರುತ್ತದೆ. ಅಂತಹ ಬದುಕು ಎಲ್ಲರದೂ ಆಗಬೇಕು ಎಂದ ಅವರು ಒಡನಾಡಿಯಾದವನಿಗೆ ವ್ಯಕ್ತಿತ್ವವೂ ಅರ್ಥವಾಗುತ್ತದೆ. ಹೀಗಾಗಿ ಶ್ರೀಕೃಷ್ಣನ ಒಡನಾಡಿಯಾದವನಿಗೆ ಅವನ ಬಗ್ಗೆಯೂ ತಿಳಿಯುತ್ತದೆ ಎಂದರು.
ಸಭಾಧ್ಯಕ್ಷತೆಯನ್ನು ಬಾಂಧವ್ಯ ಗೆಳೆಯರ ಬಳಗದ ಅಧ್ಯಕ್ಷ ಪ್ರಸನ್ನ ಮುಳುಬಾಗಿಲು ವಹಿಸಿದ್ದರು. ವೇದಿಕೆಯಲ್ಲಿ ರಕ್ತೇಶ್ವರಿ ಸಾನ್ನಿಧ್ಯದ ಆಡಳಿತ ಮಂಡಳಿ ಅಧ್ಯಕ್ಷ ತುಂಗನಾಥ ಕಾಯನಕೋಡಿ, ಗ್ರಾಪಂ ಮಾಜಿ ಸದಸ್ಯ ರಾಧಾಕೃಷ್ಣ ತುಪ್ಪದಮನೆ , ದೈಹಿಕ ನಿರ್ದೇಶಕ ರಾಧಾಕೃಷ್ಣ ಏನೆಕಲ್ಲು, ತೀರ್ಥರಾಮ ಕಮಿಲ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಏನೆಕಲ್ಲಿನ ನಾಟಿ ವಿಷ ವೈದ್ಯ ನಾಗೇಶ್ ನೆಕ್ರಾಜೆ, ಶ್ರೀಕಣಿಲ ನಾಟಿ ವೈದ್ಯ ಶ್ರೀನಿವಾಸ ಮುಗುಳಿ , ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಇವರನ್ನು ಸನ್ಮಾನಿಸಲಾಯಿತು.
ಸಭಾಕಾರ್ಯಕ್ರಮದಲ್ಲಿ ವಿವಿಧ ಸ್ಫರ್ಧೆಗಳ ಬಹುಮಾನ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಬಾಂಧವ್ಯ ಗೆಳೆಯರ ಬಳಗದ ಲೋಕೇಶ್ ಕಾಂತಿಲ ಸ್ವಾಗತಿಸಿ ಪುರುಷೋತ್ತಮ ಪುಚ್ಚಪ್ಪಾಡಿ ವಂದಿಸಿದರು. ದಾಮೋದರ ನೇರಳ ಕಾರ್ಯಕ್ರಮ ನಿರೂಪಿಸಿದರು.
ಪರಿಶುದ್ಧ ಮನಸ್ಸಿನಿಂದ ಶಿವನ ಧ್ಯಾನ, ಉಪಾಸನೆ ಮಾಡಿದಾಗ ಸಕಲ ಪಾಪ ಕರ್ಮಗಳ ಕೊಳೆ…
ತಮಿಳುನಾಡಿನ ಕೊಯಮತ್ತೂರಿನ ಈಶಾ ಫೌಂಡೇಷನ್ ಆದಿ ಯೋಗಿ ಪ್ರತಿಮೆಯ ಬಳಿ ಹಮ್ಮಿಕೊಂಡಿದ್ದ ಶಿವರಾತ್ರಿ…
ಮಹಾಶಿವರಾತ್ರಿಯ ಹಿನ್ನಲೆಯಲ್ಲಿ ನೇಪಾಳದ ಕಠ್ಮಂಡುವಿನಲ್ಲಿರುವ ಪಶುಪತಿನಾಥ ಮಂದಿರಕ್ಕೆ ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡಿ…
ರೈಲ್ವೆ ಇಲಾಖೆ ಪ್ರಯಾಗ್ರಾಜ್ನಿಂದ 350 ಕ್ಕೂ ಹೆಚ್ಚು ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ಮ್ಯಾನ್ಮಾರ್ ಅಡಿಕೆ ಮಾರುಕಟ್ಟೆ ವಲಯದಲ್ಲಿ ಈ ಬಾರಿ ಭಾರತವು ಅಡಿಕೆ ಖರೀದಿಯನ್ನು ಪುನರಾರಂಭ…
ಅಡಿಕೆ ವ್ಯಾಪಾರ ನಡೆಸಿ ಹಣ ಕೊಡದೆ ವಂಚನೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ. ಈ…