ನಮ್ಮ ಇಂಜಿನಿಯರ್ ಗಳು ಚಾರ್ಮಾಡಿ ರಸ್ತೆ ದುರಸ್ತಿ ಮಾಡುತ್ತಾರೆ…..

August 14, 2019
8:00 AM

ಕಳೆದ ಬಾರಿಯ ಮೇಘಸ್ಫೋಟಕ್ಕೆ ಸಂಪಾಜೆ- ಮಡಿಕೇರಿ ಸಂಪರ್ಕ ಕಡಿತಗೊಂಡಿತ್ತು. ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ವಿವಿದೆಡೆ ರಸ್ತೆ ಕುಸಿತಗೊಂಡು ಒಂದು ವರ್ಷದ ಅವಧಿಗೆ ರಸ್ತೆ ಸಂಚಾರವೇ ಕಷ್ಟ ಎಂದು ಜನ ಮಾತನಾಡಿದ್ದರು. ಆದರೆ ನಮ್ಮ ಇಂಜಿನಿಯರ್ ಗಳು ಈ ಮಾತನ್ನು ಸುಳ್ಳಾಗಿಸಿ ಕೆಲವೇ ದಿನದಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದರು. ಈ ಬಾರಿ ಮೇಘಸ್ಪೋಟಗೊಂಡದ್ದು ಚಾರ್ಮಾಡಿ ಪ್ರದೇಶದಲ್ಲಿ. ಚಾರ್ಮಾಡಿ ಘಾಟಿಯ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಸುಮಾರು 7 ಕಡೆ ಕುಸಿತಗೊಂಡಿದೆ. ಇದನ್ನು ನೋಡಿದರೆ ಇಲ್ಲಿ ಸಂಚಾರವೇ ಇನ್ನು ಕಷ್ಟ ಎಂದು ಜನ ಮಾತನಾಡುತ್ತಾರೆ. ವಾಹನ ಓಡಾಟವೇ ಇನ್ನು ಆಗದು ಎನ್ನುತ್ತಾರೆ. ಆದರೆ ನಮ್ಮ ಇಂಜಿನಿಯರ್ ಗಳು ಈ ಮಾತನ್ನು ಸುಳ್ಳಾಗಿಸುತ್ತಾರೆ ಎಂಬ ಭರವಸೆ ಇದೆ…. ಈ ಕಡೆಗೆ ನಮ್ಮ ಫೋಕಸ್…

Advertisement
Advertisement
Advertisement

ಎರಡು ಜಿಲ್ಲೆಗಳನ್ನು ಸಂಪರ್ಕಿಸುವ ಮಂಗಳೂರು-ವಿಲ್ಲುಪುರಂ ರಸ್ತೆಯ ಅದಕ್ಕಿಂತಲೂ ಮುಖ್ಯವಾಗಿ  ಚಿಕ್ಕಮಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಚಾರ್ಮಾಡಿ ಘಾಟಿ ರಸ್ತೆಯಲ್ಲಿ  ಭಾರೀ ಭೂ ಕುಸಿತಗಳಾಗಿದ್ದು ರಸ್ತೆ ತಾತ್ಕಾಲಿಕವಾಗಿ ದುರಸ್ಥಿ ಮಾಡಲಾಗದ ಸ್ಥಿತಿಯನ್ನು ತಲುಪಿದೆ. ಈಗ ಘಾಟಿಯಲ್ಲಿ ನಡೆದಿರುವ ಭೂಕುಸಿತಗಳನ್ನು ನೋಡಿದರೆ ಚಾರ್ಮಾಡಿ ಘಾಟಿ ರಸ್ತೆ ಯಾವುದಾದರೂ ಪರ್ಯಾಯ ಕ್ರಮಗಳನ್ನು ಮಾಡದಿದ್ದರೆ ಶಾಶ್ವತವಾಗಿ ಮುಚ್ಚಿ ಹೋಗುವ ಭೀತಿ ಮೂಡಿದೆ. ಒಂದೊಮ್ಮೆ ಚಾರ್ಮಾಡಿ ನೆನಪು…! ಅಂತ ಅನಿಸಿದರೂ ತಪ್ಪಲ್ಲ.

Advertisement

Advertisement

 

ಕಳೆದ ಎರಡು ಮೂರು ವರ್ಷಗಳಿಂದ ಪ್ರತಿ ಬಾರಿಯೂ ಚಾರ್ಮಾಡಿ ಘಾಟಿಯಲ್ಲಿ ನಿರಂತರ ಭೂಕುಸಿತವಾಗುತ್ತಾ ಬಂದಿದ್ದು ಈ ಬಾರಿ ದೊಡ್ಡ ಪ್ರಮಾಣದ ಕುಸಿತ ಕಂಡುಬಂದಿದೆ. ವಿಶೇಷವೆಂದರೆ ಈ ಬಾರಿ ಘಾಟಿಯ ಮೇಲ್ಭಾದಲ್ಲಿ ಮೂಡಿಗೆರೆ ತಾಲೂಕಿಗೆ ಸೇರಿದ ಭಾಗದಲ್ಲಿ ಭೂಕುಸಿತ ಹೆಚ್ಚಾಗಿ ಸಂಭವಿಸಿದ್ದು ಕುಸಿತದ ತೀವ್ರತೆ ಅತ್ಯಂತ ಹೆಚ್ಚಿನದಾಗಿದೆ.
ಚಾರ್ಮಾಡಿ ಘಾಟ್‍ನಲ್ಲಿ 11 ಹೇರ್ ಪಿನ್ ತಿರುವುಗಳಿದ್ದು,  3ನೇ ತಿರುವಿನಿಂದ 11 ತಿರುವಿನ ವರೆಗೂ ಅಲ್ಲಲ್ಲಿ ಗುಡ್ಡಕುಸಿತಗಳಾಗಿದ್ದು ಅದನ್ನುತೆರವು ಮಾಡುವ ಕಾರ್ಯಾಚರಣೆ ನಡೆಯುತ್ತಿದೆ. ಸುಮಾರು 7 ಕಡೆಗಳಲ್ಲಿ ಇಂತಹ ಕುಸಿತಗಳು ಕಂಡು ಬಂದಿದೆ. ಘಾಟಿಯಲ್ಲಿ ಅಣ್ಣಪ್ಪ ದೇವಸ್ಥಾನದಿಂದ ಆ ಕಡೆಗೆ ಮಲೆಯ ಮಾರುತದವರೆಗೂ ವಿವಿದೆಡೆಗಳಲ್ಲಿ ಭೂ ಕುಸಿತವಾಗಿರುವುದು ವರದಿಯಾಗಿದ್ದು ಇದು ಅಪಾಯಕಾರಿ ರೀತಿಯಲ್ಲಿ ಆಗರುವುದಾಗಿ ತಿಳಿದು ಬರುತ್ತಿದೆ. ಭೂ ಕುಸಿತದಿಂದಾಗಿ ಭಾರೀ ಪ್ರಮಾಣದಕಲ್ಲು ಮಣ್ಣುಗಳು, ಮರಗಳು ರಸ್ತೆಯಲ್ಲಿ ತುಂಬಿಕೊಂಡಿದೆ. ಅದೇ ರೀತಿ ಕೆಲವೆಡೆ ರಸ್ತೆಯ ಅರ್ಧಬಾಗವೇ ಕುಸಿದು ಹೋಗಿದ್ದು ಇಡೀ ರಸ್ತೆಯೇ ಕುಸಿತು ಹೋಗುವ ಸ್ಥಿತಿ ನಿರ್ಮಾಣವಾಗಿದೆ.

Advertisement

 

ರಸ್ತೆಯೇ ಕುಸಿದು ಹೋಗಿರುವಲ್ಲಿ ತಾತ್ಕಾಲಿಕ ಪರಿಹಾರವನ್ನುಕಾಣುವುದು ಸುಲಭದಲ್ಲಿ ಸಾಧ್ಯವಿಲ್ಲವಾಗಿದ್ದು ರಸ್ತೆ ಸುರಕ್ಷತೆಗೆ ಸರಿಯಾಗಿ ಕ್ರಮ ಕೈಗೊಳ್ಳದೆ ರಸ್ತೆಯನ್ನು ಸಂಚಾರಕ್ಕೆ ತೆರವುಗೊಳಿಸುವ ಸಾಧ್ಯತೆ ತೀರಾ ಕಡಿಮೆಯಾಗಿದೆ. ಇದೇ ರೀತಿಯಲ್ಲಿ ಮಳೆ ಹಾಗೂ ಭೂಕುಸಿತಗಳು ಮುಂದುವರಿದರೆ ಚಾರ್ಮಾಡಿ ಘಾಟ್‍ ರಸ್ತೆ ಶಾಶ್ವತವಾಗಿ ಬಂದ್ ಆಗುವ ಸಾಧ್ಯತೆಗಳು ಇದೆ ಎಂದು ಅಭಿಪ್ರಾಯ ಪಡುತ್ತಿದ್ದಾರೆ ಪರಿಸರ ತಜ್ಞರುಗಳು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಹಾಗೂ ಅರಣ್ಯ ಇಲಾಖಾ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಮಣ್ಣು, ಕಲ್ಲು ತೆರವು ಕಾರ್ಯ ನಿರಂತರ ನಡೆಯುತ್ತಿದ್ದು, 4 ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಯೇ ಕುಸಿದು ಬೃಹತ್‍ ಕಂದಕ ನಿರ್ಮಾಣಗೊಂಡಿದೆ. ಪಶ್ಚಿಮ ಘಟ್ಟದ ಗುಡ್ಡಗಾಡು ಪ್ರದೇಶಗಳಲ್ಲಿ ಚಾರ್ಮಾಡಿ ಘಾಟ್‍ಅರಣ್ಯ ವ್ಯಾಪ್ತಿಯಲ್ಲಿ ಕಳೆದ 6 ದಿನಗಳಿಂದ ಬೆಟ್ಟದ ಬೆನ್ನಿನ ಭಾಗದಲ್ಲಿ ಹಲವೆಡೆ ಬಂಡೆ, ಮಣ್ಣುಜಾರಿದ ಸ್ಥಿತಿಯಲ್ಲಿರುವುದು ಶನಿವಾರ ರಾತ್ರಿಯಿಂದ ಘಾಟ್ ಕುಸಿಯಲು ಆರಂಭಗೊಂಡಿದೆ. ಚಾರ್ಮಾಡಿ ಘಾಟ್ ಪ್ರದೇಶದ ಏರಿಕಲ್ಲು, ಕೊಡೆಕಲ್ಲು, ಮಿಂಚುಕಲ್ಲು, ಬಾರೆಕಲ್ಲು ಬೆಟ್ಟಗಳು ಬೃಹತ್ ಬಂಡೆಗಳೊಂದಿಗೆ ಕುಸಿದಿದ್ದು, ಘಾಟ್ ಪ್ರದೇಶದಲ್ಲಿ ಬೃಹತ್ ಕಂದಕಗಳು ನಿರ್ಮಾಣಗೊಂಡಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬರ ಹಿನ್ನೆಲೆ | ಮೈಸೂರು ಜಿಲ್ಲೆಯಲ್ಲಿ ಪಂಪ್‌ಸೆಟ್ ಬಳಸಿ ಕೃಷಿಗೆ ನದಿ ನೀರು ಬಳಕೆ ನಿಷೇಧ |
March 27, 2024
10:01 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಆಮದು ಪ್ರಕರಣಗಳಲ್ಲಿ ದೂರು ದಾಖಲಾಗುತ್ತಿಲ್ಲವೇಕೆ…? | ಆರೋಪಿಗಳು ಪತ್ತೆಯಾಗುತ್ತಿಲ್ಲವೇಕೆ…? |
March 27, 2024
9:32 PM
by: ದ ರೂರಲ್ ಮಿರರ್.ಕಾಂ
ಅರಣ್ಯ ಸುತ್ತಮುತ್ತ ಕೃಷಿ ಮಾಡುವ ರೈತರಿಗೆ ಕೃಷಿ ಭೂಮಿ ಮಂಜೂರಾತಿ : ಕೆಲ ಜಿಲ್ಲೆಗಳ ರೈತರಿಗೆ ಹಕ್ಕುಪತ್ರ ಬಿಡುಗಡೆ ಮಾಡಲಿರುವ ಕಂದಾಯ ಇಲಾಖೆ
March 26, 2024
11:59 PM
by: The Rural Mirror ಸುದ್ದಿಜಾಲ
ಈ ಭಾರಿ ಭಾರತದಲ್ಲೇ ನಡೆಯಲಿದೆ ಐಪಿಎಲ್‌ : ವೇಳಾಪಟ್ಟಿಯಲ್ಲಿ ಯಾವ ದಿನ ಯಾವ ಮ್ಯಾಚ್‌ ಸಂಪೂರ್ಣ ವಿವರ
March 25, 2024
11:07 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror