ಭಾರತಕ್ಕೆ ರಫೇಲ್ ಯುದ್ಧ ವಿಮಾನ ಹಸ್ತಾಂತರ

October 9, 2019
9:00 AM

ನವದೆಹಲಿ: ಫ್ರಾನ್ಸ್ ನ ಡಸಾಲ್ಟ್ ಏವಿಯೇಶನ್ಸ್ ​ ನಿರ್ಮಿತ ಅತ್ಯಾಧುನಿಕ ರಫೇಲ್ ಯದ್ಧ ವಿಮಾನವನ್ನು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಔಪಚಾರಿಕವಾಗಿ ಸ್ವೀಕರಿಸಿದರು.

Advertisement
Advertisement
Advertisement

ಮೂರು ದಿನಗಳ ಫ್ರಾನ್ಸ್ ಭೇಟಿಯಲ್ಲಿರುವ ರಾಜನಾಥ್ ಸಿಂಗ್ ರಫೇಲ್ ಯುದ್ಧ ವಿಮಾನ ಸ್ವೀಕರಿಸುವ ಮೊದಲು ಮಾತನಾಡಿ ಇದು ಐತಿಹಾಸಿಕ ದಿನ’ ಎಂದು ಬಣ್ಣಿಸಿದರು. 59 ಸಾವಿರ ಕೋಟಿ ರೂ. ಮೌಲ್ಯದ ಫೈಟರ್ ಜೆಟ್ ಡೀಲ್ ಎರಡೂ ದೇಶಗಳ ನಡುವಿನ ಕಾರ್ಯತಂತ್ರದ ಸಹಭಾಗಿತ್ವದಲ್ಲಿ ಹೊಸ ಮೈಲಿಗಲ್ಲು ಎಂದು ಅವರು ಈ ಸಂದರ್ಭ ಹೇಳಿದರು.
ಡಸಾಲ್ಟ್​ ಏವಿಯೇಷನ್​ನ ಸಿಇಒ ಎರಿಕ್ ಟ್ರಾಪ್ಪಿಯರ್ ರಫೇಲ್​ ವಿಮಾನವನ್ನು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಹಸ್ತಾಂತರಿಸಿದರು. ದಸರಾ ಹಾಗೂ ಭಾರತೀಯ ವಾಯುಪಡೆ ದಿನವಾದ ಇಂದು (ಅಕ್ಟೋಬರ್-8) ರಾಜನಾಥ್ ಸಿಂಗ್ ವಿಮಾನಕ್ಕೆ ಪೂಜೆ ನೆರವೇರಿಸಿದರು.

Advertisement

ರಫೇಲ್ ಅತ್ಯಾಧುನಿಕ ಯುದ್ಧ ವಿಮಾನವಾಗಿದ್ದು, ಭಾರತದ ಬೇಡಿಕೆಗೆ ಅನುಗುಣವಾಗಿ ವಿಮಾನದಲ್ಲಿ 13 ಮಾರ್ಪಾಡುಗಳು ಮಾಡಲಾಗಿದೆ. ಅತ್ಯಾಧುನಿಕ ಬಿಯಾಂಡ್ ವಿಜುವಲ್ ರೇಂಜ್​ನ ಮೆಟೆರೋ ಕ್ಷಿಪಣಿ ಹಾಗೂ ಸ್ಕಾಲ್ಫ್​ ಕ್ಷಿಪಣಿಗಳೊಂದಿಗೆ ರಫೇಲ್​ ಐಎಎಫ್ ಸೇರಿದೆ. ಅತ್ಯಾಧುನಿಕ ಎಇಎಸ್​ಎ ರೇಡಾರ್ ಹೊಂದಿರುವ ರಫೇಲ್, ಶತ್ರು ವಿಮಾನಗಳನ್ನು ಸುದೂರದಲ್ಲೇ ಪತ್ತೆಹಚ್ಚುತ್ತದೆ. 9,500 ಕೆಜಿ ಬಾಂಬ್​ಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ನ್ಯೂಕ್ಲಿಯರ್ ಬಾಂಬ್​ಗಳನ್ನು ಹೊತ್ತು ಗಂಟೆಗೆ 2000 ಕಿಮೀ ವೇಗದಲ್ಲಿ ಸಾಗುತ್ತದೆ.

Advertisement

ಭಾರತ 59,000 ಕೋಟಿ ರೂ ವೆಚ್ಚದಲ್ಲಿ 36 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಫ್ರಾನ್ಸ್​​ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಔಪಚಾರಿಕವಾಗಿ ಮೊದಲ ವಿಮಾನ ಅಕ್ಟೋಬರ್ 08 (ಇಂದು) ಐಎಎಫ್ ಸೇರಿದೆ. 2020 ಮೇ ಒಳಗೆ ಇನ್ನೂ ಉಳಿದ ವಿಮಾನಗಳು ವಾಯುಪಡೆಗೆ ಸೇರ್ಪಡೆಯಾಗಲಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆಯ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಹೇಗೆ ? | ವಿಜ್ಞಾನಿ ಡಾ.ಭವಿಷ್ಯ ಅವರಿಂದ ಮಾಹಿತಿ |
November 24, 2024
7:50 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಎಲೆಚುಕ್ಕಿರೋಗ ನಿರ್ವಹಣಾ ವಿಧಾನಗಳು ಹೇಗೆ..?
November 24, 2024
7:09 AM
by: ದ ರೂರಲ್ ಮಿರರ್.ಕಾಂ
ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ
November 23, 2024
6:06 AM
by: The Rural Mirror ಸುದ್ದಿಜಾಲ
ಅಡಿಕೆ ಹಳದಿರೋಗ ಪೀಡಿತ ಪ್ರದೇಶದಲ್ಲಿ ಗೇರುಕೃಷಿ ಹೇಗೆ..? | ಸಂಪಾಜೆಯಲ್ಲಿ ಪರ್ಯಾಯ ಕೃಷಿಯ ಬಗ್ಗೆ ಚಿಂತನೆ |
November 23, 2024
5:59 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror