ಮಂಗಳೂರು: ಭಾರತವು ಅನಾದಿ ಕಾಲದಲ್ಲಿ ವಿಶ್ವಗುರುವಾಗಿತ್ತು.ಆಗ ಗೋವು, ಗ್ರಾಮ, ಗುರುಕುಲ,ಗಂಗೆ ಎಂಬ 4ಜಿ ಬಲಿಷ್ಠವಾಗಿತ್ತು. ಪ್ರತಿಯೊಂದು ಗ್ರಾಮವು ಸ್ವಾವಲಂಬಿಯಾಗಿತ್ತು ಮತ್ತು ಜನರು ಸುಖೀಗಳಾಗಿದ್ದರು.ಗಂಗೆ ಶುಧ್ದವಾಗಿತ್ತು, ಗುರುಕುಲ ವ್ಯವಸ್ಥೆಯಿಂದ ಉಚ್ಛ ಮಟ್ಟದ ಶಿಕ್ಷಣ ನೀಡಲಾಗುತ್ತಿತ್ತು, ಅಸಂಖ್ಯಾತ ಗೋವುಗಳಿದ್ದು ಸಂಪತ್ತು ಸಮೃದ್ಧವಾಗಿತ್ತು, ಆದರೆ ಇಂದು ಗೋ ಹತ್ಯೆಯಿಂದಾಗಿ ಗೋ ಸಂತತಿ ನಾಶವಾಗುತ್ತಿದೆ. ಮತ್ತೊಮ್ಮೆ ಭಾರತ ವಿಶ್ವಗುರುವಾಗಬೇಕಾದರೆ ಈ 4ಜಿ ಅಂಶಗಳು ಬಲಿಷ್ಠವಾಗಬೇಕು” ಎಂದು ನ್ಯಾಯವಾದಿ ಚಂದ್ರಶೇಖರ್ ರಾವ್ ಹೇಳಿದರು.
ಅವರು ಮಂಗಳೂರಿನಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಹಿಂದೂ ರಾಷ್ಟ್ರಅಧಿವೇಶನದ ಮೊದಲ ದಿನದ ಗೋಷ್ಟಿಯಲ್ಲಿ ಮಾತನಾಡಿದರು.
ಶ್ರೀ ರಾಮಚಂದ್ರಾಪುರ ಮಠದ ವಿದ್ಯಾಲಕ್ಮೀ ಮಾತನಾಡಿ ಸನಾತನ ಹಿಂದೂ ಧರ್ಮವೆಂದರೆ ಅವಿನಾಶಿ ಮತ್ತು ಅಜರಾಮರವೇ ಆಗಿದೆ. ಹಿಂದೂ ಧರ್ಮವು ಜೀವನದ ಅಂಗವಾಗಿದೆ.ಹಿಂದೂ ಧರ್ಮವು ಎಲ್ಲಾ ಜೀವಿಗಳಲ್ಲಿಯೂ ದೇವರನ್ನು ಕಾಣುವ ಅತ್ಯಂತ ಶ್ರೇಷ್ಠ ಧರ್ಮವಾಗಿದೆ.ಇಂದು ಇಂದಿನ ಪೀಳಿಗೆಗೆ ಧರ್ಮಶಿಕ್ಷಣವನ್ನು ನೀಡಬೇಕಾಗಿದೆ ಉಡುಪುಗಳಾಗಿರಲಿ, ಉತ್ಸವಗಳಾಗಿರಲಿ ಪಾಶ್ಚಾತ್ಯರಂತೆ ಅಲ್ಲ ಹಿಂದೂ ಧರ್ಮದಂತೆ ಆಚರಿಸಿ ಧರ್ಮದ ರಕ್ಷಣೆಯನ್ನು ಮಾಡಬೇಕಾಗಿದೆ ಎಂದರು.
ಬಂಟರ ಸಂಘದ ಆಶಾಜ್ಯೋತಿ ರೈ ಮಾತನಾಡಿ ಪ್ರಸ್ತುತ ಹಿಂದೂ ಧರ್ಮವು ಜಾತಿ ಎಂದು ವಿಭಜನೆ ಹೊಂದಿದೆ.ಆದರೆ ಹಿಂದೂ ರಾಷ್ಟ್ರ ಸ್ಥಾಪನೆಯಾಗಬೇಕಾದರೆ ಜಾತಿ ಎಂಬ ಬಂಧನವನ್ನು ತೆಗೆದು ಕೇವಲ ‘ಹಿಂದೂ’ ಎಂದು ಒಂದಾಗಬೇಕಾಗಿದೆ..ಹಿಂದೂ ಐಕ್ಯತೆ ಹೊಂದಬೇಕಾಗಿದೆ ಎಂದರು.
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel