ಭಾರತೀಯರು ಸಹೋದರತ್ವದ ಪ್ರತಿಪಾದಕರು – ಮೋಹನ್ ಭಾಗವತ್

October 8, 2019
2:42 PM

ನಾಗಪುರ: ಭಾರತವು ದೇಶದ ಎಲ್ಲಾ ಭಾರತೀಯರಿಗೆ, ಎಲ್ಲಾ ಧರ್ಮದವರಿಗೆ ಸೇರಿದ್ದಾಗಿದೆ. ಭಾರತ ಎನ್ನುವುದೇ ಒಂದು ಪ್ರೀತಿ. ಭಾರತೀಯರು ಸೋದರತ್ವವವನ್ನು ನಂಬಿರುವವರಾಗಿದ್ದಾರೆ. ಹೀಗಾಗಿ ಪ್ರತೀ ವ್ಯಕ್ತಿಯಲ್ಲಿ ಪ್ರೀತಿ ಅಡಗಿದೆ. ವಿರೋಧ ಎನ್ನುವುದು ಇಲ್ಲ. ಆದರೆ ಪ್ರತ್ಯೇಕ ಧಾರ್ಮಿಕ ಪಠ್ಯದಲ್ಲಿನ ವಿಷಯಗಳಿಂದ ಇಂದು ಕೆಲ ಪದಗಳ ಹೇರಿಕೆಯಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಜಿ ಭಾಗವತ್ ಹೇಳಿದರು.

Advertisement

ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜನೆಗೊಂಡಿದ್ದ ವಿಜಯದಶಮಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹತ್ಯೆ ಎಂಬ ಪದ ಭಾರತೀಯ ನೀತಿಗಳಲ್ಲೇ ಇಲ್ಲ. ಭಾರತೀಯತೆ ಒಪ್ಪುವವರು ಹತ್ಯೆಯನ್ನು ಒಪ್ಪಲಾರರು.  ಈ ಪದದ ಮೂಲ, ಪ್ರತ್ಯೇಕ ಧಾರ್ಮಿಕ ಪಠ್ಯದಲ್ಲಿನ ಕಥೆಯಿಂದ ಬಂದಿರುವುದಾಗಿದೆ. ಭಾರತೀಯರು ಸೋದರತ್ವವವನ್ನು ನಂಬಿರುವವರಾಗಿದ್ದೇವೆ. ಭಾರತೀಯರು ಹಾಗೂ ಹಿಂದೂಗಳ ಮೇಲೆ ಇಂತಹ ಪದಗಳನ್ನು ಹೇರಿಕೆ ಮಾಡಬೇಡಿ ಎಂದರು.ಸಂವಿಧಾನ ವಿರೋಧ ಚಟುವಟಿಕೆಗಳ ವಿರುದ್ಧ ಜನರನ್ನು ಸಂಘ ಪರಿವಾರ ಎಂದಿಗೂ ಬೆಂಬಲಿಸಿಲ್ಲ. ಯಾವುದೇ ಹಲ್ಲೆ ಪ್ರಕರಣಗಳ ವಿರುದ್ಧ ಸಂಘ ಪರಿವಾರ ನಿಂತಿದೆ. ಈ ನಿಟ್ಟಿನಲ್ಲಿ ಸಂಘ ಪರಿವಾರ ಕೆಲಸ ಮಾಡುತ್ತಿದೆ. ಭಾರತ ಎಲ್ಲಾ ಭಾರತೀಯರಿಗೆ, ಎಲ್ಲಾ ಧರ್ಮದವರಿಗೆ ಸೀಮಿತವಾಗಿದೆ. ಧರ್ಮ, ಜಾತಿ ಮೇಲೆ ಯಾರೊಬ್ಬರೂ ತಾರತಮ್ಯ ಮಾಡದಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯವಾಗಿದೆ ಎಂದರು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370 ವಿಧಿ ರದ್ದುಗೊಳಿಸುವ ಮೂಲಕ ಕೇಂದ್ರ ಸರಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಇದರಂತೆ ಜನರನ್ನು ನಿರೀಕ್ಷೆಯನ್ನು ಈಡೇರಿಸಿದೆ. ಈ ಮೂಲಕ ಜನರ ಆಶೋತ್ತರಗಳನ್ನು ಈಡೇರಿಸುವ ಧೈರ್ಯವಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.

ವ್ಯಾಪಾರ ಮತ್ತು ಇತರ ಸಂಬಂಧಿತ ವಿಚಾರಗಳ ಕುರಿತು ವ್ಯಾಪಾರ ಒಪ್ಪಂದಗಳನ್ನು ನಮ್ಮದೇ ಆದ ನಿಯಮಗಳಿಗೆ ಅನುಗುಣವಾಗಿ ರೂಪಿಸಬೇಕು. ನಾವು ಸ್ವದೇಶಿಯನ್ನು ನಂಬುತ್ತೇವೆ. ಆದರೆ, ಅಂತರಾಷ್ಟ್ರೀಯ ಸಂಬಂಧಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಭಾರತಕ್ಕೆ ಹೊಸ ಆರ್ಥಿಕತೆಯ ಮಾದರಿಯ ಅವಶ್ಯಕವಿದ್ದು, ಇದರಿಂದ ಕಡಿಮೆ ಶಕ್ತಿಯಿಂದ ಉತ್ತಮ ಕಾರ್ಯಗಳು ಹೊರಬೇಕಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಜಿ ಭಾಗವತ್ ಹೇಳಿದ್ದಾರೆ.
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

“ಬಯೋ” ಔಷಧಿಗಳ ಹೆಸರಿನಲ್ಲಿ ಅಡಿಕೆ ರೈತರ ವಂಚನೆ..? ರೋಗಕ್ಕಿಂತಲೂ ದೊಡ್ಡ ಸವಾಲಾಗಿ ಮೂಡಿದ ಕೆಲವು ಔಷಧಿಗಳು..!, ಆದರೂ ಇಲಾಖೆಗಳು, ಸರ್ಕಾರ ಮೌನ…!
February 23, 2026
9:21 PM
by: ಮಿರರ್‌ ಡೆಸ್ಕ್
ಅಡಿಕೆ ತೋಟದಲ್ಲಿ ಲೆಮನ್ ಗ್ರಾಸ್ ಬೆಳೆ | ‘ಕೃಷ್ಣ’ ಜಾತಿಗೆ ಹೆಚ್ಚು ಉತ್ಪಾದನೆ – ಐಸಿಎಆರ್ ಅಧ್ಯಯನ
February 23, 2026
8:39 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ| 23-02-2026 | ಕರಾವಳಿ–ಮಲೆನಾಡಿನಲ್ಲಿ ತುಂತುರು ಮಳೆ ಸಾಧ್ಯತೆ | ಫೆ.27ರವರೆಗೆ ಉಷ್ಣತೆ ಏರಿಕೆ ಲಕ್ಷಣ
February 23, 2026
7:59 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror