ಭಾರತ-ನ್ಯೂಝಿಲ್ಯಾಂಡ್ ಸೆಮಿ ಫೈನಲ್‌ ಪಂದ್ಯ ಇಂದು ಮುಂದುವರಿಯಲಿದೆ

July 10, 2019
8:38 AM

ಮ್ಯಾಂಚೆಸ್ಟರ್:  ಭಾರತ ಹಾಗೂ ನ್ಯೂಝಿಲ್ಯಾಂಡ್ ನಡುವೆ ಮಂಗಳವಾರ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ ಸೆಮಿ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಪಂದ್ಯವನ್ನು ಮೀಸಲು ದಿನವಾದ ಬುಧವಾರಕ್ಕೆ ಮುಂದೂಡಲಾಗಿದೆ.

Advertisement
Advertisement
Advertisement

ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಾಗ ನ್ಯೂಝಿಲ್ಯಾಂಡ್ 46.1 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 211 ರನ್ ಗಳಿಸಿದೆ. ರಾಸ್ ಟೇಲರ್(ಔಟಾಗದೆ 67, 85 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ಟಾಮ್ ಲಥಾಮ್(ಔಟಾಗದೆ 3)ಕ್ರೀಸ್ ಕಾಯ್ದುಕೊಂಡಿದ್ದರು. ಕಿವೀಸ್ ಸ್ಪರ್ಧಾತ್ಮಕ ಮೊತ್ತದತ್ತ ಸಾಗುತ್ತಿದ್ದಾಗ ಮಳೆ ಆಗಮಿಸಿ ಪಂದ್ಯ ಸ್ಥಗಿತಗೊಂಡಿದೆ.

Advertisement

ನ್ಯೂಝಿಲ್ಯಾಂಡ್ ಬುಧವಾರ ತನ್ನ ಬ್ಯಾಟಿಂಗ್ ಮುಂದುವರಿಸಿ ಇನ್ನೀಂಗ್ಸ್ ನ ಉಳಿದ 23 ಬಾಲ್ ಆಡಿದ ಬಳಿಕ ಭಾರತ ತನ್ನ ಇನ್ನೀಂಗ್ಸ್ ಆರಂಭಿಸಲಿದೆ. ಬುಧವಾರದ ಪಂದ್ಯದಲ್ಲೂ ಫಲಿತಾಂಶ ಬಾರದಿದ್ದರೆ 10 ತಂಡಗಳಿದ್ದ ಗ್ರೂಪ್ ಹಂತದ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿರುವ ಭಾರತ ಫೈನಲ್‌ಗೆ ತೇರ್ಗಡೆಯಾಗಲಿದೆ.

ಇಲ್ಲಿನ ಎಮಿರೇಟ್ಸ್​​​ ಓಲ್ಡ್​​​​​​​ ಟ್ರಾಫೋರ್ಡ್​ ಕ್ರೀಡಾಂಗಣದಲ್ಲಿ ಟಾಸ್​​ ಗೆದ್ದು ಬ್ಯಾಟಿಂಗ್​ ಮಾಡಿದ ನ್ಯೂಜಿಲೆಂಡ್​​​ 46.1 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 211 ರನ್​ ಗಳಿಸಿ ಬ್ಯಾಟಿಂಗ್​​ ಮಾಡುವ ವೇಳೆ ಮಳೆಯಿಂದ ಪಂದ್ಯ ಸ್ಥಗಿತಗೊಂಡಿತು.
5 ಗಂಟೆಗಳಾದರೂ ಮಳೆ ನಿಲ್ಲದ ಕಾರಣ, ಐಸಿಸಿ ಹಾಗೂ ವಿಶ್ವಕಪ್​​ ಆಡಳಿತ ಮಂಡಳಿ ಬುಧವಾರದ ಮೀಸಲು ದಿನಕ್ಕೆ ಪಂದ್ಯವನ್ನು ಮುಂದೂಡಿದೆ. ಬುಧವಾರ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 3.00ಕ್ಕೆ ಪಂದ್ಯ ಆರಂಭವಾಗಲಿದೆ. ರಾಸ್​​ ಟೇಲರ್​​​ (67*) ಹಾಗೂ ಟಾಮ್​​ ಲಾಥಮ್​ (3*)ಬ್ಯಾಟಿಂಗ್ ಮುಂದುವರಿಸುವರು.

Advertisement

ಭಾರತದ ಪರ ಜಸ್ಪ್ರೀತ್​ ಬುಮ್ರಾ, ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್​ ಹಾಗೂ ಭುವನೇಶ್ವರ್​​ ಕುಮಾರ್ ​ತಲಾ ಒಂದು ವಿಕೆಟ್​ ಪಡೆದಿದ್ದಾರೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಸಾಯನಿಕ ಕೃಷಿಯಿಂದಾಗುವ ಪರಿಣಾಮಗಳ ಬಗ್ಗೆ ಭಾರತದ ರೈತರಲ್ಲೂ ಅರಿವು | ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಕಾರ್ಯಕ್ರಮದಲ್ಲಿ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್
January 10, 2025
6:56 AM
by: The Rural Mirror ಸುದ್ದಿಜಾಲ
ಅಡಿಕೆ ಅಕ್ರಮ ಸಾಗಾಟಕ್ಕೆ ತಡೆ | 10 ಸಾವಿರ ಕೆಜಿ ಅಡಿಕೆ ವಶಕ್ಕೆ |
January 8, 2025
7:34 AM
by: The Rural Mirror ಸುದ್ದಿಜಾಲ
ರಕ್ಷಣಾ ವಲಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ
January 7, 2025
10:36 PM
by: The Rural Mirror ಸುದ್ದಿಜಾಲ
ಪಿಎಂ ಫಸಲ್‌‌‌‌ಬಿಮಾ ಯೋಜನೆ ವಿಸ್ತರಣೆ | ಕೇಂದ್ರ ಸಚಿವ ಸಂಪುಟ ಒಪ್ಪಿಗೆ
January 2, 2025
6:34 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror