ಭಾನುವಾರ ರಾತ್ರಿ ಭಾರತ ಬೆಳಗಿತು. ದೀಪಗಳಿಂದ ಭಾರತ ಬೆಳಗುತ್ತಲೇ ಅಂಧಕಾರ ದೂರವಾಯಿತು. ಒಬ್ಬರಿಗೊಬ್ಬರು ನಾವಿದ್ದೇವೆ ಎಂಬ ಜಾಗೃತಿ ಮೂಡಿತು. ಇದಕ್ಕೆ ಸಿಕ್ಕಿದ ಪ್ರತಿಕ್ರಿಯೆ ಉತ್ತಮವಾಗಿತ್ತು. ಇಡೀ ದೇಶದಲ್ಲಿ ವಿದ್ಯುತ್ ಬೇಡಿಕೆಯಲ್ಲಿ 9 ಗಂಟೆಯಿಂದ 9.10 ರ ವರೆಗೆ ಒಮ್ಮೆಲೇ 32 GW(ಗಿಗಾ ವ್ಯಾಟ್ ) ವಿದ್ಯುತ್ ಬೇಡಿಕೆ ಕಡಿತವಾಯಿತು.
ದೇಶದಲ್ಲಿ 9 ಗಂಟೆಯವರೆಗೆ 115 ಗಿಗಾ ವ್ಯಾಟ್ ವಿದ್ಯುತ್ ಬೇಡಿಕೆ ಇತ್ತು. 9 ಗಂಟೆಯ ನಂತರ 9.10 ರವರೆಗೆ ಒಮ್ಮೆಲೇ 85 ಗಿಗಾ ವ್ಯಾಟ್ ಗೆ ಇಳಿಕೆಯಾಯಿತು. 9.10 ರ ನಂತರ ಈ ಬೇಡಿಕೆ ಒಮ್ಮೆಲೇ 114.4 ಗಿಗಾ ವ್ಯಾಟ್ ಗೆ ತಲಪಿದೆ. ಅಂದರೆ ಸುಮಾರು 32 ಗಿಗಾ ವ್ಯಾಟ್ ನಷ್ಟು ವಿದ್ಯುತ್ ಕಡಿತವಾಗಿದೆ. ಇದು ಕೇವಲ ಲೈಟ್ ಗಳನ್ನು ಮಾತ್ರವೇ ಆಫ್ ಮಾಡಿರುವ ಬೇಡಿಕೆ ಎಂದು ರಾಷ್ಟ್ರೀಯ ವಿದ್ಯುತ್ ಸಚಿವಾಲಯದ ಅಡಿಯಲ್ಲಿ ಬರುವ ಪವರ್ ಸಿಸ್ಟಮ್ ಆಪರೇಷನ್ ಕಾರ್ಪೊರೇಶನ್ ಲಿಮಿಟೆಡ್ ತಿಳಿಸಿದೆ.
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಅನ್ವಯ, ಉತ್ತರ ಕನ್ನಡ…
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…