ಬಳ್ಪ: ಬುಧವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಸುಬ್ರಹ್ಮಣ್ಯ – ಪಂಜ ರಸ್ತೆಯ ಬಳ್ಪ ಬಳಿಯ ಎಣ್ಣೆಮಜಲು ಕ್ರಾಸ್ ಬಳಿ ಚಲಿಸುತ್ತಿದ್ದ ಸ್ಕೂಟರ್ ಹಾಗೂ ಕಾರಿನ ಮೇಲೆ ಮರ ಬಿದ್ದು ಕಾರು ಚಾಲಕ ಗಣೇಶ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬುಧವಾರ ಸಂಜೆ ಭಾರೀ ಗುಡುಗು ಸಹಿತ ಮಳೆಯಾಗಿದೆ. ಸುಮಾರು 6 ಗಂಟೆಯಿಂದ ಆರಂಭವಾದ ಭಾರಿ ಸಿಡಿಲು,ಗುಡುಗು,ಗಾಳಿ ಸಹಿತವಾದ ಮಳೆ ಬಳ್ಪ, ಗುತ್ತಿಗಾರು, ಏನೇಕಲ್ಲು ಆಸುಪಾಸಿನಲ್ಲಿ ಆರಂಭವಾಗಿತ್ತು. ಈ ಸಂದರ್ಭ ಎಣ್ಣೆಮಜಲು ಕ್ರಾಸ್ ಬಳಿ ಸುಬ್ರಹ್ಮಣ್ಯ ಕಡೆಗೆ ಸಂಚರಿಸುತ್ತಿದ್ದ ಬಡೆಕ್ಕೋಡಿಯ ಜನಾರ್ಧನ ಎಂಬವರ ಕಾರಿನ ಮೇಲೆ ಹಾಗೂ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಕೂಟರ್ ಮೇಲೆ ಮರ ಉರುಳಿ ಬಿದ್ದಿದೆ. ಈ ಸಂದರ್ಭ ಕಾರು ಚಲಾಯಿಸುತ್ತಿದ್ದ ಗಣೇಶ್ ಎಂಬವರು ಗಂಭೀರ ಗಾಯಗೊಂಡರು. ಅವರನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಲಾಗಿದೆ.
ಬಡೆಕ್ಕೋಡಿಯಿಂದ ಸುಬ್ರಹ್ಮಣ್ಯದ ಬಳಿಯ ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಜನಾರ್ಧನ ಅವರ ಕಾರನ್ನು ಗಣೇಶ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದರು.
ಸುಗಮ ವಾಹನ ಸಂಚಾರಕ್ಕೆ ಅರಣ್ಯ ಇಲಾಖಾ ಸಿಬಂದಿಗಳು ವ್ಯವಸ್ಥೆ ಮಾಡಿದರು.
ಒಂಬತ್ತು ತಿಂಗಳ ಹಿಂದೆ ಜೂನ್ 5 ರಂದು ISS ಅಂದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ…
ಮಂಗನಕಾಯಿಲೆ ಸೋಂಕು ಮಲೆನಾಡು ಕಡೆಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕೆಲವು ಕಡೆ…
ರೈತರ ಪಂಪ್ ಸೆಟ್ ಗಳಿಗೆ ಪ್ರತಿನಿತ್ಯ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ…
ಅಮೆರಿಕದ ಹಲವು ರಾಜ್ಯಗಳಲ್ಲಿ ಅತ್ಯಂತ ಪ್ರಬಲ ಚಂಡಮಾರುತ ಹಾಗೂ ಸುಳಿಗಾಳಿ ಉಂಟಾಗಿದ್ದು, ಈವರೆಗೆ…
ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಾ. 20 ರವರೆಗೆ ಬಿಸಿ ಗಾಳಿ ಬೀಸುವ…
ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಿಮಪಾತ ಆರಂಭವಾಗಿದೆ. ಕಾಶ್ಮೀರದ ಹಲವು ಭಾಗಗಳಲ್ಲಿ ಎರಡು ದಿನಗಳ…