ಭಾಷೆಯ ಬೆಳವಣಿಗೆಗೆ ತಂತ್ರಜ್ಞಾನದ ಬಳಕೆ- ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ

November 26, 2019
10:01 PM

ಧರ್ಮಸ್ಥಳ: ಭಾಷೆ, ಲಿಪಿಯ ಬೆಳವಣಿಗೆಗೆ ಇರುವ ಸವಾಲುಗಳನ್ನು ನಿವಾರಿಸಲು ತಂತ್ರಜ್ಞಾನವನ್ನು ಉಪಯೋಗಿಸಿಕೊಳ್ಳುವ ಇರಾದೆ ಸರಕಾರಕ್ಕಿದೆ. ಭಾಷೆಯ ಬಳಕೆ ಹೆಚ್ಚಬೇಕು. ಅಧ್ಯಯನ ಕೇಂದ್ರದ ಮೂಲಕ ಮೂರು ವರ್ಷಗಳಲ್ಲಿ ದೇಶಕ್ಕೇ ಮಾದರಿಯಾಗುವಂತೆ ಯೋಜನೆಯನ್ನೊಂದನ್ನು ರೂಪಿಸಲಾಗುವುದು.

Advertisement

ಕನ್ನಡ ಭಾಷೆಯ ಬೆಳವಣಿಗೆಗೆ ಐಟಿ ವಿಭಾಗದಿಂದ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ರಾಜ್ಯದ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಪ್ರಕಟಿಸಿದರು. ಧರ್ಮಸ್ಥಳ ಲಕ್ಷದೀಪೋತ್ಸವದ ಕೊನೆಯ ದಿನ ಮಂಗಳವಾರ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ 87 ನೇ ಸಾಹಿತ್ಯ ಸಮ್ಮೇಳನವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಕೇವಲ ಆರ್ಥಿಕ ಉನ್ನತಿಯಿಂದ ನಮ್ಮತನ ಉಳಿಯಲು ಸಾಧ್ಯವಿಲ್ಲ. ಇಂಗ್ಲೀಷ್ ವ್ಯಾಮೋಹದ ಮಧ್ಯೆ ಭಾಷೆ ಉಳಿಸಿಕೊಳ್ಳುವ ಪ್ರಯತ್ನ ಆಗಬೇಕಾಗಿದೆ. ಭಾಷೆ, ಸಂಸ್ಕೃತಿ ಬಿಟ್ಟು ಬಿಟ್ಟರೆ ನಮ್ಮತನ ಹೋದಂತೆ. ಇದು ಆಗಬಾರದು ಎಂಬ ಉದ್ದೇಶದಿಂದ ಇಂತಹ ಸಮ್ಮೇಳನ ಅಗತ್ಯವಾಗಿದೆ ಎಂದರು.

ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಜನಪದ ವಿದ್ವಾಂಸ ಡಾ. ಬಿ.ಎ.ವಿವೇಕ ರೈ ಅವರು ಜನಮಾನಸವನ್ನು ಎಚ್ಚರಿಸುವ, ಸಾಮರಸ್ಯವನ್ನು ಮೂಡಿಸುವ ಸಾಹಿತ್ಯ ಇಂದು ಬರಬೇಕಾಗಿದೆ. ಸಾಹಿತ್ಯ ಎಂಬುದು ಕೇವಲ ಕಥೆ, ಕಾದಂಬರಿ,ನಾಟಕ ಮಾತ್ರ ಅಲ್ಲ. ಅದು ಬದುಕನ್ನು ಉದ್ದೀಪನಗೊಳಿಸಬೇಕು. ಅದಕ್ಕಾಗಿ ಆಹಾರ, ಪರಿಸರ, ಮನೋ, ಸಾಮಾಜಿಕ ವಿಜ್ಞಾನದ ಬಗ್ಗೆ ಸಾಹಿತ್ಯ ಕನ್ನಡದಲ್ಲಿ ಬೇಕು‌ ಎಂದರು.

ಸ್ವಾಗತಿಸಿದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಇಂದಿನ ಸಾಹಿತ್ಯಕ್ಕೆ ನೈತಿಕತೆಯ ಸ್ಪರ್ಶ ಬೇಕಾಗಿದೆ. ನಮ್ಮ ನಡೆ- ನುಡಿಯಲ್ಲಿ ನೈತಿಕತೆಯೆಂದು ನಮ್ಮ ಸಂಸ್ಕೃತಿ ಹೇಳುತ್ತದೆ. ಒಳ್ಳೆಯ ಸಾಹಿತ್ಯವನ್ನು ಓದುವ ವರ್ಗ ನಮ್ಮ ನಡುವೆ ಯಾವತ್ತೂ ಇದೆ. ಅದಕ್ಕನುಗುಣವಾಗಿ ಸಾಹಿತ್ಯ ರಚಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಅನಿಸುತ್ತದೆ. ಈ ಕುರಿತ ಚಿಂತನೆ ಈ ಸಮ್ಮೇಳನದಲ್ಲಿ ನಡೆಯುತ್ತದೆ. ಸಮ್ಮೇಳನಗಳು ಧರ್ಮ, ವಿಜ್ಞಾನ ಮತ್ತು ಸಾಹಿತ್ಯದ ಸದಾಶಯಗಳ ಸ್ವರೂಪ ತಿಳಿದುಕೊಳ್ಳಲು ಪೂರಕವಾಗುತ್ತದೆ ಎಂದರು. ಬಳಿಕ ಸಾಹಿತ್ಯ ಮತ್ತು ವಿಶ್ವಮಾನವ ಪ್ರಜ್ಞೆಯ ಬಗ್ಗೆ ಸಾಹಿತಿ ಶ್ರೀಧರ ಬಳಗಾರ, ಅಕ್ಷರ ಪ್ರಪಂಚ ಮತ್ತು ಸತ್ಯದರ್ಶನದ ಕುರಿತು ಡಾ. ವೀಣಾ ಬನ್ನಂಜೆ, ರಂಗಭೂಮಿಯಲ್ಲಿ ಹಾಸ್ಯದ ಬಗ್ಗೆ ವಾಗ್ಮಿ ರಿಚರ್ಡ್ ಲೂಯಿಸ್ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಹೇಮಾವತಿ ವೀ. ಹೆಗ್ಗಡೆ, ಫ್ರೋ. ಪ್ರಭಾಕರ, ಹರ್ಷೇಂದ್ರ ಕುಮಾರ್, ಡಿ. ಸುರೇಂದ್ರ ಕುಮಾರ್ ಇದ್ದರು. ಉದ್ಘಾಟಕರ ಸಮ್ಮಾನ ಪತ್ರವನ್ನು ಡಾ. ಬಿ. ಯಶೋವರ್ಮ, ಅಧ್ಯಕ್ಷರ ಸಮ್ಮಾನ ಪತ್ರವನ್ನು ಡಿ. ಶ್ರೇಯಸ್ ಕುಮಾರ್ ವಾಚಿಸಿದರು. ರುಡ್ ಸೆಟ್ ನಿರ್ದೇಶಕ ವಿನಯಕುಮಾರ್ ವಂದಿಸಿದರು. ಡಾ. ಬಿ.ಪಿ‌. ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹರಿಯಾಣ | 800 ಮೆ.ವ್ಯಾ.ವಿದ್ಯುತ್ ಉತ್ಪಾದನಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ
April 14, 2025
7:40 PM
by: The Rural Mirror ಸುದ್ದಿಜಾಲ
ಚಾಮರಾಜನಗರ ಜಿಲ್ಲೆ ಸಿದ್ದಾಪುರ ಜಮೀನು ವಿವಾದ | ರೈತರು ಆತಂಕಪಡುವ ಅಗತ್ಯವಿಲ್ಲ
April 14, 2025
7:28 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ |14.04.2025 | ಕರಾವಳಿ ಕೆಲವು ಕಡೆ ಗುಡುಗು ಸಹಿತ ಮಳೆ | ಎ.19ರ ನಂತರ ಮಳೆಯ ಪ್ರಮಾಣ ತೀರಾ ಕಡಿಮೆ |
April 14, 2025
12:45 PM
by: ಸಾಯಿಶೇಖರ್ ಕರಿಕಳ
ಅನುಭವದ ಕೃಷಿಯಿಂದ ಡಾಟಾ ಆಧಾರಿತ “ಸ್ಮಾರ್ಟ್ ಫಾರ್ಮಿಂಗ್ “‌ ಕಡೆಗೆ ಆಧುನಿಕ ಕೃಷಿ
April 14, 2025
7:28 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group