ಸುಳ್ಯ: ಭಾರತೀಯ ಕಿಸಾನ್ ಸಂಘ ಸುಳ್ಯ ಘಟಕದ ವತಿಯಿಂದ ಮಾಡಾವು 110 ಕೆವಿ ಸಬ್ ಸ್ಟೇಷನ್ ಕಾಮಗಾರಿ ವೀಕ್ಷಣೆ ಸೋಮವಾರ ನಡೆಯಿತು.
ಸುಳ್ಯ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ವಿಪರೀತ ಇದ್ದು ಈ ನಿಟ್ಟಿನಲ್ಲಿ ವಿದ್ಯುತ್ ಸರಬರಾಜು ವ್ಯವಸ್ಥೆಗೆ ಬೇಕಾದ ಕಾರ್ಯಗಳ ಬಗ್ಗೆ ಒತ್ತಡ ತರಲು ಹಾಗೂ ಆ ನಿಟ್ಟಿನಲ್ಲಿ ಕೆಲಸ ಮಾಡಲು ಭಾ ಕಿ ಸಂ ಈಗ ಕೆಲಸ ಆರಂಭಿಸಿದೆ. ಇದರ ಭಾಗವಾಗಿ ಮಾಡಾವು ಸಬ್ ಸ್ಟೇಶನ್ ಕಾಮಗಾರಿ ವೀಕ್ಷಣೆ ಮಾಡಲಾಯಿತು. ಈ ಮಳೆಗಾಲಕ್ಕೆ ಮೊದಲೇ ಹೆಚ್ಚಿನೆಲ್ಲ ಕೆಲಸಗಳು ಮುಕ್ತಾಯಗೊಳ್ಳುವ ಸಾಧ್ಯತೆ ಇದೆ ಎಂಬ ಅಂಶ ಮೇಲ್ನೋಟಕ್ಕೆ ಕಂಡುಬಂದಿದೆ.
ಈ ಸಂದರ್ಭದಲ್ಲಿ ಕಿಸಾನ್ ಸಂಘ ಸುಳ್ಯ ಘಟಕದ ಅಧ್ಯಕ್ಷ ಎನ್ ಜಿ ಪ್ರಭಾಕರ್ ರೈ, ಕಾರ್ಯದರ್ಶಿ ಎನ್ ಗೋಪಾಲಕೃಷ್ಣ ಭಟ್, ಡಾ ಪಿ ಆರ್ ಭಟ್, ಪಿ ಜಿ ಎಸ್ ಎನ್ ಪ್ರಸಾದ್, ರಾಧಾಕೃಷ್ಣ ರಾವ್,ಕೆ.ವಿ.ಶರ್ಮಾ, ಸೀತಾರಾಮ ಕಂಚಿಕಾರಮೂಲೆ,ವೆಂಕಟ್ರಾಜ ಎನ್, ಜಗನ್ನಾಥ ರೈ ಎ.ಎಂ.ಮುಂತಾದವರು ಉಪಸ್ಥಿತರಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel