ಮಂಗಳೂರು : ಭೂಮಿ ಯೋಜನೆಯಡಿ ನೀಡಲಾಗುತ್ತಿರುವ ಸೇವೆಗಳಿಗಾಗಿ ಸಾರ್ವಜನಿಕರು ಭೂಮಿ ಕೇಂದ್ರ ಮತ್ತು ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುತ್ತಿದ್ದು, ಇನ್ನು ಮುಂದೆ ಇಂಟರ್ ನೆಟ್ ವ್ಯವಸ್ಥೆ ಇರುವ ಯಾವುದೇ ಸ್ಥಳದಿಂದ http://landrecords.karnataka.gov.in/Service93/ url ನಲ್ಲಿ ಲಾಗ್ ಇನ್ ಆಗಿ ನಿಗದಿತ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಬಹುದಾದ ಸೇವೆಗಳ ವಿವರ ಇಂತಿವೆ : ಖಾತೆ ಬದಲಾವಣೆ (ವಿಲ್, ವಿಭಾಗ, ಫೌತಿ, ಮೈನರ್ ಗಾರ್ಡಿಯನ್), ಪೋಡಿ ವಿವರಗಳನ್ನು ಪಹಣಿಯಲ್ಲಿ ದಾಖಲಿಸಲು, ಭೂ ಪರಿವರ್ತನೆ ವಿವರಗಳನ್ನು ಪಹಣಿಯಲ್ಲಿ ಇಂಡೀಕರಣಗೊಳಿಸಲು, ಭೂ ಸ್ವಾಧೀನ ವಿವರಗಳನ್ನು ಪಹಣಿಯಲ್ಲಿ ಇಂಡೀಕರಣಗೊಳಿಸಲು, ಸಾಲ ತಿರುವಳಿ (release) ವಿವರಗಳನ್ನು ಪಹಣಿಯಲ್ಲಿ ಇಂಡೀಕರಣಗೊಳಿಸಲು.
ಸದರಿ ಪೋರ್ಟಲ್ ನಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿ ಲಾಗ್‍ಇನ್ ಆಗಬಹುದಾಗಿದೆ. ಸ್ಕಾನ್‍ಡ್ ಪಿಡಿಎಫ್ ದಾಖಲೆಗಳನ್ನು ಅಪ್‍ಲೋಡ್ ಮಾಡಿ ಆಧಾರ್ ಸಂಖ್ಯೆ ಬಳಸಿ ಇ-ಸೈನ್ ಮಾಡಿದ ನಂತರ ಸ್ವೀಕೃತಿ ಪಡೆಯಬಹುದಾಗಿದೆ. ಹಾಗೂ ಹೆಚ್ಚಿನ ಮಾಹಿತಿಯನ್ನು https://youtu.be/LqWiHroVfHI ಯುಟ್ಯೂಬ್ ಲಿಂಕ್‍ನಲ್ಲಿ ಪಡೆಯಬಹುದಾಗಿದೆ ಎಂದು ದ.ಕ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.