ಭೂಮಿ ಯೋಜನೆ ಸೇವೆ : ಇನ್ನು ಮುಂದೆ ಆನ್‍ಲೈನ್ ಅರ್ಜಿ

December 28, 2019
9:31 AM

ಮಂಗಳೂರು : ಭೂಮಿ ಯೋಜನೆಯಡಿ ನೀಡಲಾಗುತ್ತಿರುವ ಸೇವೆಗಳಿಗಾಗಿ ಸಾರ್ವಜನಿಕರು ಭೂಮಿ ಕೇಂದ್ರ ಮತ್ತು ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುತ್ತಿದ್ದು, ಇನ್ನು ಮುಂದೆ ಇಂಟರ್ ನೆಟ್ ವ್ಯವಸ್ಥೆ ಇರುವ ಯಾವುದೇ ಸ್ಥಳದಿಂದ http://landrecords.karnataka.gov.in/Service93/ url ನಲ್ಲಿ ಲಾಗ್ ಇನ್ ಆಗಿ ನಿಗದಿತ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಬಹುದಾದ ಸೇವೆಗಳ ವಿವರ ಇಂತಿವೆ : ಖಾತೆ ಬದಲಾವಣೆ (ವಿಲ್, ವಿಭಾಗ, ಫೌತಿ, ಮೈನರ್ ಗಾರ್ಡಿಯನ್), ಪೋಡಿ ವಿವರಗಳನ್ನು ಪಹಣಿಯಲ್ಲಿ ದಾಖಲಿಸಲು, ಭೂ ಪರಿವರ್ತನೆ ವಿವರಗಳನ್ನು ಪಹಣಿಯಲ್ಲಿ ಇಂಡೀಕರಣಗೊಳಿಸಲು, ಭೂ ಸ್ವಾಧೀನ ವಿವರಗಳನ್ನು ಪಹಣಿಯಲ್ಲಿ ಇಂಡೀಕರಣಗೊಳಿಸಲು, ಸಾಲ ತಿರುವಳಿ (release) ವಿವರಗಳನ್ನು ಪಹಣಿಯಲ್ಲಿ ಇಂಡೀಕರಣಗೊಳಿಸಲು.

ಸದರಿ ಪೋರ್ಟಲ್ ನಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿ ಲಾಗ್‍ಇನ್ ಆಗಬಹುದಾಗಿದೆ. ಸ್ಕಾನ್‍ಡ್ ಪಿಡಿಎಫ್ ದಾಖಲೆಗಳನ್ನು ಅಪ್‍ಲೋಡ್ ಮಾಡಿ ಆಧಾರ್ ಸಂಖ್ಯೆ ಬಳಸಿ ಇ-ಸೈನ್ ಮಾಡಿದ ನಂತರ ಸ್ವೀಕೃತಿ ಪಡೆಯಬಹುದಾಗಿದೆ. ಹಾಗೂ ಹೆಚ್ಚಿನ ಮಾಹಿತಿಯನ್ನು https://youtu.be/LqWiHroVfHI ಯುಟ್ಯೂಬ್ ಲಿಂಕ್‍ನಲ್ಲಿ ಪಡೆಯಬಹುದಾಗಿದೆ ಎಂದು ದ.ಕ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

‘ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ’ ನಕಲಿ ಸುದ್ದಿ : ಸಾರ್ವಜನಿಕರಿಗೆ ಕೇಂದ್ರ ಸಚಿವರಿಂದ ಮಾಹಿತಿ
August 18, 2026
7:25 AM
by: ದ ರೂರಲ್ ಮಿರರ್.ಕಾಂ
ಮಂಗಳೂರು, ಉಡುಪಿ, ಪುತ್ತೂರಿನಲ್ಲಿ ಉದ್ಯೋಗಾವಕಾಶ- 22 ಹುದ್ದೆಗಳಿಗೆ ಆಗಸ್ಟ್ 11ರಂದು ನೇರ ಸಂದರ್ಶನ
August 8, 2026
6:08 AM
by: ದ ರೂರಲ್ ಮಿರರ್.ಕಾಂ
ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ
July 24, 2026
9:05 PM
by: ದ ರೂರಲ್ ಮಿರರ್.ಕಾಂ
ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ | ಜುಲೈ 21ರಂದು ಕ್ರೆಡಿಟ್ ಕಾರ್ಡ್ ಸೇಲ್ಸ್ ಟೀಮ್ ಲೀಡರ್ ಹುದ್ದೆಗೆ ನೇರ ಸಂದರ್ಶನ
July 18, 2026
8:59 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror