ಮಂಗಳೂರು : ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹುದ್ದೆ ವಿವರ : ಬಜಾಲ್ ಗ್ರಾಮದ ಶಾಂತಿನಗರ 2 ಅಂಗನವಾಡಿ ಕೇಂದ್ರ .
ಖಾಲಿ ಇರುವ ಅಂಗನವಾಡಿ ಸಹಾಯಕಿಯರ ಹುದ್ದೆ ವಿವರ :
ಉರ್ವಗಾಂಧಿ ನಗರ ವಾರ್ಡ್ ನಂ. 26 ರ ಅಂಗನವಾಡಿ ಕೇಂದ್ರ,
ಸೈಂಟ್ ಮೇರಿಸ್ ಫಳ್ನೀರ್ ವಾರ್ಡ್ ನಂ. 47 ರ ಅಂಗನವಾಡಿ ಕೇಂದ್ರ,
ಗ್ರೀನ್ ವ್ಯೂ ಅಳಪೆ ವಾರ್ಡ್ ನಂ. 50 ರ ಅಂಗನವಾಡಿ ಕೇಂದ್ರ,
ಗಾರ್ಡಿಯನ್ ಏಂಜೆಲ್ಸ್ ವಾರ್ಡ್ ನಂ. 49 ರ ಅಂಗನವಾಡಿ ಕೇಂದ್ರ,
ಮರೋಳಿ ಯುವಕ ಮಂಡಲ ವಾರ್ಡ್ ನಂ.37,ಅಂಗನವಾಡಿ ಕೇಂದ್ರ,
ಸಿರಿಯನ್ ಮಿಶನ್ ವಾರ್ಡ್ ನಂ. 55, ಅಂಗನವಾಡಿ ಕೇಂದ್ರ,
ಪೋಲೀಸ್ ಲೈನ್ 1 ವಾರ್ಡ್ ನಂ. 40 ರ ಅಂಗನವಾಡಿ ಕೇಂದ್ರ,
ಬರ್ಕೆ ನಡುಪಳ್ಳಿ ವಾರ್ಡ್ ನಂ. 43 ರ ಅಂಗನವಾಡಿ ಕೇಂದ್ರ,
ಕೊಟ್ಟಾರ ಶಾಲೆ ವಾರ್ಡ್ ನಂ. 24 ರ ಅಂಗನವಾಡಿ ಕೇಂದ್ರ,
ಸುರತ್ಕಲ್ ಶಾಲೆ ವಾರ್ಡ್ ನಂ.1 ರ ಅಂಗನವಾಡಿ ಕೇಂದ್ರ.
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಎಸ್‍ಎಸ್‍ಎಲ್‍ಸಿ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗೆ 4ನೇ ತರಗತಿ (ಉತ್ತೀರ್ಣ) ಯಿಂದ 9ನೇ ತರಗತಿ ವರೆಗೆ ಕಲಿತ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಅರ್ಜಿಯನ್ನು ಆನ್‍ಲೈನ್ ವೆಬ್‍ಸ್ಶೆಟ್ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ ಫೆಬ್ರವರಿ 11.
ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಸಿಲ್ವಾ ಕ್ರಾಸ್ ರೋಡ್, ವೆಲೆನ್ಸಿಯಾ, ಬಿಷಪ್ ವಿಕ್ಟರ್ ಅಡ್ಡರಸ್ತೆ, ಮಂಗಳೂರು ಇಲ್ಲಿಗೆ ಸಂಪರ್ಕಿಸಲು ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಮಂಗಳೂರು ನಗರ ಇವರ ಪ್ರಕಟಣೆ ತಿಳಿಸಿದೆ.