Advertisement
MIRROR FOCUS

ಮಂಗಳೂರು ಪ್ರಯಾಣದ ಡೈಲಿ ಪಾಸ್ ರದ್ದುಪಡಿಸಿದ ಕೇರಳ

Share

ಸುಳ್ಯ: ಕಾಸರಗೋಡಿನಿಂದ ಮಂಗಳೂರಿಗೆ ಉದ್ಯೋಗ ಮತ್ತಿತರ ಅಗತ್ಯಕ್ಕಾಗಿ ಪ್ರಯಾಣಕ್ಕೆ ದಿನ ನಿತ್ಯದ ಪಾಸ್ ನೀಡುವುದನ್ನು ಕಾಸರಗೋಡು ಜಿಲ್ಲಾಡಳಿತ ಸ್ಥಗಿತಗೊಳಿಸಿದೆ. ಇದು ದಿನ ನಿತ್ಯದ ಅಗತ್ಯಕ್ಕಾಗಿ ಗಡಿಯ ಮೂಲಕ ಪ್ರಯಾಣಿಸುವವರಿಗೆ ಆತಂಕ ಸೃಷ್ಠಿಸಿದೆ. ಹೊಸ ನಿರ್ಧಾರದ ಹಿನ್ನಲೆಯಲ್ಲಿ ತಲಪಾಡಿ ಗಡಿಯಲ್ಲಿ ನೂರಾರು ಮಂದಿ ಗಡಿ ದಾಟಲಾಗದೆ ಸಿಲುಕಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದಿನ ನಿತ್ಯದ ಪಾಸ್ ಸ್ಥಗಿತಗೊಳಿಸಲು ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆಯಲ್ಲಿ ಕಾಸರಗೋಡಿನಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಕಾಸರಗೋಡಿನಿಂದ ಹೋಗಿ ಮಂಗಳೂರಿನಲ್ಲಿ ಉದ್ಯೋಗ ಮಾಡುವವರು ಅಲ್ಲೇ ಉಳಿದು ಉದ್ಯೋಗ ಮಾಡಬೇಕು.‌ ಅದೇ ರೀತಿ ಕಾಸರಗೋಡಿನಲ್ಲಿ ವೃತ್ತಿ ನಿರ್ವಹಿಸುವವರು ದಕ್ಷಿಣ ಕನ್ನಡ ಜಿಲ್ಲೆಯವರು ಕೂಡ ಕಾಸರಗೋಡಿನಲ್ಲಿಯೇ ಉಳಿದುಕೊಳ್ಳಬೇಕಾಗಿದೆ. ಹೀಗೆ ಕನಿಷ್ಟ 28 ದಿನಗಳ ಕಾಲ ಅಲ್ಲಲ್ಲಿಯೇ ಉಳಿದುಕೊಳ್ಳಲು ಸೂಚಿಸಲಾಗಿದೆ. ಅಲ್ಲದೆ ಎಲ್ಲಾ ಗಡಿಯ ಮೂಲಕವೂ ಕೇರಳ ಭೇಟಿಯನ್ನು ನಿಷೇಧಿಸಲಾಗಿದೆ. ಗಡಿ ಪ್ರದೇಶದಲ್ಲಿ ಬ್ಯಾರಿಕೇಡ್ ಅಳವಡಿಸಿ ಚೆಕ್ ಪೋಸ್ಟ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಕೇರಳದ ಹೊಸ ನಿರ್ಧಾರದಿಂದ ಡೈಲಿ ಪಾಸ್ ಪಡೆದು ದಿನ ನಿತ್ಯ ಪ್ರಯಾಣಿಸುವ ಗಡಿ ಪ್ರದೇಶದ ಜನ ತ್ರಿಶಂಕು ಸ್ವರ್ಗದಲ್ಲಿ ಸಿಲುಕಿದಂತಾಗಿದೆ.

ಕೊರೋನಾಕ್ಕಿಂತ ದೊಡ್ಡ ಆತಂಕವಾದ ಗಡಿ: ಅತ್ಯಂತ ನಿಕಟ ಸಂಪರ್ಕ ಇರುವ ಎರಡು ಜಿಲ್ಲೆಗಳ ಗಡಿಪ್ರದೇಶಗಳ ಗಡಿಯನ್ನು ಕಳೆದ ನಾಲ್ಕು ತಿಂಗಳಿನಿಂದ ಮುಚ್ಚಿರುವುದು ಗಡಿ ಪ್ರದೇಶದ ಜನರ ಬದುಕನ್ನು ದುಸ್ತರವಾಗಿಸಿದೆ. ಕೊರೋನಾ ಆತಂಕದ ಜೊತೆಗೆ ಗಡಿ ಸಮಸ್ಯೆಯೂ ಎರಡೂ ಜಿಲ್ಲೆಗಳ ಜನರಿಗೆ ದೊಡ್ಡ ಆತಂಕ ಮತ್ತು ತಲೆ ನೋವನ್ನು ತಂದಿರಿಸಿದೆ.

ಕಳೆದ ಮಾರ್ಚ್ ನಲ್ಲಿ ಕಾಸರಗೋಡಿನಲ್ಲಿ ಕೊರೋನಾ ಪ್ರಕರಣಗಳು ಅಧಿಕ ಇದೆ ಎಂದು ದಕ್ಷಿಣ ಕನ್ನಡ-ಕಾಸರಗೋಡು ಜಿಲ್ಲೆ ಗಡಿ ರಸ್ತೆಯಲ್ಲಿ ಮಣ್ಣು ಹಾಕಿ ಗಡಿಯನ್ನು ದ.ಕ.ಜಿಲ್ಲಾಡಳಿತ ಮುಚ್ಚಿತ್ತು. ಅದು ಇನ್ನೂ ತೆರೆದುಕೊಂಡಿಲ್ಲ.‌ ಅಂದು ಭಾರೀ ಪ್ರತಿರೋಧ ಒಡ್ಡಿದ್ದ ಕೇರಳಿಗರು ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಪ್ರಕರಣ ಅಧಿಕ ಇದೆ ಎಂದು ಎಂದು ಗಡಿ ನಿಯಂತ್ರಣವನ್ನು ಬಿಗುಗೊಳಿಸಿದೆ. ಗಡಿಯನ್ನು ಮುಚ್ಚಿದಾಗ ಎರಡು ಜಿಲ್ಲೆಯ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಪರಸ್ಪರ ರಾಜಕೀಯ ಆರೋಪ- ಪ್ರತ್ಯಾರೋಪ ನಡೆಸಿದರೇ ಹೊರತು ಪರಸ್ಪರ ಸಹಕಾರ, ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿ ಒಟ್ಟಾಗಿ ಕೊರೋನಾವನ್ನು ಪ್ರತಿರೋಧಿಸುವ ಪ್ರಬುದ್ಧತೆಯನ್ನು ತೋರಿಲ್ಲ ಎಂಬ ಕೊರಗು ಗಡಿನಾಡ ಜನತೆಯದ್ದು. ವ್ಯವಹಾರಿಕ, ಶೈಕ್ಷಣಿಕ, ಸಾಮಾಜಿಕ ಎಲ್ಲಾ ರೀತಿಯಲ್ಲಿಯೂ ಅನ್ಯೂನ್ಯತೆಯ ಬದುಕು ಸಾಗಿಸಿದ್ದ ಜನರಿಗೆ ಕೊರೋನಾ ಮತ್ತು ಗಡಿ ಮುಚ್ಚುವಿಕೆ ಬಲು ದೊಡ್ಡ ಆತಂಕ ಮತ್ತು ನೋವನ್ನು ತಂದೊಡ್ಡಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ರಾಜ್ಯದಲ್ಲಿ ನೈಋತ್ಯ ಮುಂಗಾರು ಸಕ್ರಿಯ ; ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ಭಾರೀ ಮಳೆ

ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿದ್ದು, ಕರಾವಳಿ ಮತ್ತು ಮಲೆನಾಡು ಸೇರಿದಂತೆ ಹಲವೆಡೆ ಉತ್ತಮ…

6 hours ago

ರಾಜ್ಯದಲ್ಲಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ: ಇಂಧನ ಸಚಿವ ಕೆ.ಜೆ.ಜಾರ್ಜ್

ರಾಜ್ಯದಲ್ಲಿ ಸದ್ಯ ಯಾವುದೇ ರೀತಿಯ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ ಎಂದು ಇಂಧನ ಸಚಿವ…

6 hours ago

ನವೋದಯ ವಿದ್ಯಾಲಯದ 9, 11ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ – ಅ.15 ಕೊನೆಯ ದಿನ

2027-28ನೇ ಸಾಲಿನಲ್ಲಿ ನವೋದಯ ವಿದ್ಯಾಲಯಗಳ 9 ಮತ್ತು 11ನೇ ತರಗತಿಯ ಖಾಲಿ ಸ್ಥಾನಗಳಿಗೆ…

6 hours ago

1973 ರ ಅಡಿಕೆ ಬಿಕ್ಕಟ್ಟು 2026ಕ್ಕೆ ನೀಡುವ ಎಚ್ಚರಿಕೆ ಏನು..?

1973ರ ಅಡಿಕೆ ಮಾರುಕಟ್ಟೆ ಬಿಕ್ಕಟ್ಟು ಉತ್ಪಾದನೆ ಹೆಚ್ಚಳಕ್ಕೆ ತಕ್ಕಂತೆ ಮಾರುಕಟ್ಟೆ ಹೀರಿಕೊಳ್ಳುವ ಸಾಮರ್ಥ್ಯವೂ…

16 hours ago

ಹವಾಮಾನ ವರದಿ | 05-10-2026 | ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದ ಮಳೆ – ಅ.6 ರ ಬಳಿಕ ಏನಾಗಲಿದೆ?

ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…

1 day ago

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?

ಅಡಿಕೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಕೃಷಿ ಕೂಲಿ ದರ ನಿರಂತರವಾಗಿ ಏರುತ್ತಿರುವುದು ಮಲೆನಾಡಿನ…

2 days ago