ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೋಮವಾರ ಪತ್ತೆಯಾದ ಬಾಂಬ್ ಬಗ್ಗೆ ನನಗೆ ಇನ್ನೂ ಪೊಲೀಸರ ಮೇಲೆ ಅನುಮಾನವಿದೆ. ಇದರ ಹಿಂದೆ ಏನೋ ಉದ್ದೇಶ ಇದ್ದಂತೆ ಕಾಣುತ್ತದೆ. ಹೀಗಾಗಿ ಘಟನೆಯ ಸಿಸಿಟಿವಿ ವಿಡಿಯೋ ಹಾಗೂ ಸತ್ಯಾಸತ್ಯತೆಯ ಬಗ್ಗೆ ಪೊಲೀಸರು ಜನರ ಮುಂದೆ ಸಮಗ್ರ ಮಾಹಿತಿ ಇಡಬೇಕು ಎಂದು ಶೃಂಗೇರಿಯಲ್ಲಿ ಸೋಮವಾರ ಹೇಳಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಂಗಳವಾರ ಮತ್ತೆ ಪ್ರತಿಕ್ರಿಯೆ ನೀಡಿ ಇದು ಪೊಲೀಸರು ಜಾಗೃತಿಗಾಗಿ ಮಾಡಿಸುವ ಅಣಕು ಪ್ರದರ್ಶನದಂತೆ ಕಾಣುತ್ತದೆ, ಇದು ಬಾಂಬ್ ಅಲ್ಲ ಪಟಾಕಿ ಎಂದು ವ್ಯಂಗ್ಯವಾಡಿದ್ದಾರೆ. ಇಂತಹ ವಿಷಯದಲ್ಲಿ ಸರ್ಕಾರ ಘನತೆ ಮತ್ತು ಗಂಭೀರತೆಯಿಂದ ವರ್ತಿಸಬೇಕು ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮಂಗಳೂರು ಅತ್ಯಂತ ಸೂಕ್ಷ್ಮ ಪ್ರದೇಶ. ಕಳೆದ ಎರಡು ವಾರದ ಹಿಂದೆ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ದ ನಡೆದ ಹಿಂಸಾಚಾರದಲ್ಲೂ ಪೊಲೀಸರ ಪಾತ್ರ ಇತ್ತು ಎಂದು ಹೇಳಲಾಗಿದೆ. ಹೀಗಾಗಿ ಈಗ ಪತ್ತೆಯಾದ ಬಾಂಬ್ ಹಿಂದೆಯೂ ಅಂತಹದ್ದೇ ಕೈವಾಡ ಏಕಿರಬಾರದು ಎಂದು ಪ್ರಶ್ನಿಸಿದ್ದಾರೆ. ಈ ಸಂದೇಹ ದೂರವಾಗಲು ಪೊಲೀಸರು ಸತ್ಯಾಸತ್ಯತೆಯನ್ನು ತೆರೆದಿಡಬೇಕು ಎಂದು ಹೇಳಿದರು. ಇಲ್ಲಿ ಆರ್‌ಎಸ್‌ಎಸ್ ಅಣತಿಯಂತೆ ಸರಕಾರ ನಡೆಸಬಾರದು. ಜನರ ಭಾವನೆಗಳ ಜತೆ ಚೆಲ್ಲಾಟ ಆಡುವುದು ಸರಿಯಲ್ಲ ಎಂದು ಟೀಕಿಸಿದರು. ಘಟನೆಯ ಬಗ್ಗೆ ಮಂಗಳೂರು ಕಮೀಶನರ್ ಜೊತೆ ಮಾತನಾಡಿದ್ದೇನೆ, ಅವರ ಮಾಹಿತಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…