ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ ಪತ್ತೆಯಾದ ಸಜೀವ ಬಾಂಬ್ ಸತತ ಕಾರ್ಯಾಚರಣೆ ಮೂಲಕ ಪೊಲೀಸರು ಹಾಗೂ ಭದ್ರತಾ ಸಿಬಂದಿಗಳು ಸ್ಫೋಟಿಸುವ ಮೂಲಕ ಬಾಂಬ್ ನಿಷ್ಕ್ರಿಯ ಮಾಡುತ್ತಿದ್ದಾರೆ. ಯೋಧ ಗಂಗಯ್ಯ ಅವರು ತೀವ್ರವಾದ ಸವಾಲುಗಳನ್ನು ತೆಗೆದುಕೊಂಡು ಮಣ್ಣಿನ ಆಳದಲ್ಲಿ ಬಾಂಬ್ ಇರಿಸಿ ಮರಳು ಮೂಟೆಗಳನ್ನು ಸುತ್ತಲೂ ಇಟ್ಟು ವೈಯರ್ ಹಾಗೂ ರಿಮೋಟ್ ಬಳಸಿ ಬಾಂಬ್ ಅನ್ನು ದೂರದಿಂದಲೇ ಸ್ಫೋಟಿಸುವ ಕಾರ್ಯ ನಡೆಸಿದ್ದಾರೆ. ಸ್ಫೋಟದ ವೇಳೆ ಅಲ್ಪ ಪ್ರಮಾಣದ ಬೆಂಕಿ ಹಾಗೂ ಹೊಗೆ ಕಾಣಿಸಿಕೊಂಡಿತು. ಈ ಮೂಲಕ ಭಾರೀ ಪ್ರಮಾಣದ ದುರಂತವೊಂದು ತಪ್ಪಿದಂತಾಗಿದೆ. ಹೀಗಾಗಿ ಇದೀಗ ಆತಂಕ ದೂರವಾಗಿದೆ. ತನಿಖೆ ಮುಂದುವರಿದಿದೆ.
ಈ ನಡುವೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರಬಹುದಾದ ಶಂಕಿತ ವ್ಯಕ್ತಿಯ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಶಂಕಿತ ವ್ಯಕ್ತಿ ಮತ್ತು ಆತ ವಿಮಾನ ನಿಲ್ದಾಣಕ್ಕೆ ಬಂದ ಮತ್ತು ಹೋಗಲು ಬಳಸಿದ ಆಟೋದ ಚಿತ್ರವನ್ನೂ ಸಹ ಪೊಲೀಸರು ಬಿಡುಗಡೆ ಮಾಡಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel