ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ ಪತ್ತೆಯಾದ ಸಜೀವ ಬಾಂಬ್ ಸತತ ಕಾರ್ಯಾಚರಣೆ ಮೂಲಕ ಪೊಲೀಸರು ಹಾಗೂ ಭದ್ರತಾ ಸಿಬಂದಿಗಳು ಸ್ಫೋಟಿಸುವ ಮೂಲಕ ಬಾಂಬ್ ನಿಷ್ಕ್ರಿಯ ಮಾಡಿದ್ದಾರೆ. ಇದೀಗ ಶಂಕಿತ ಆರೋಪಿಯ ರೇಖಾ ಚಿತ್ರ ಹಾಗೂ ಸಿಸಿಟಿವಿಯಲ್ಲಿ ಸೆರೆಯಾದ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಇದರ ಜೊತೆಗೆ ಶಂಕಿತ ವ್ಯಕ್ತಿ ಬಂದ ರಿಕ್ಷಾದ ಚಿತ್ರವನ್ನೂ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.
ಶಂಕಿತ ವ್ಯಕ್ತಿಯು ಕಪ್ಪು ಬಣ್ಣದ ಪ್ಯಾಂಟ್ ಬಿಳಿ ಗೆರೆ ಹೊಂದಿರುವ ಶರ್ಟ್ ಧರಿಸಿ ಬಿಳಿ ಸಂಖ್ಯೆ ನಮೂದಾಗಿರುವ ಟೋಪ್ಪಿ ಹಾಗೂ ಕನ್ನಡಕ ಧರಿಸಿದ್ದಾನೆ. ವಿಮಾನ ನಿಲ್ದಾಣದಿಂದ ಹೊರಗೆ ಹೋಗುತ್ತಿರುವ ಚಿತ್ರ ಇದಾಗಿದ್ದು ಈ ವ್ಯಕ್ತಿಯು ಆಗಮಿಸಿದ ಬಗ್ಗೆ ಎಲ್ಲಾ ಸಿಸಿಟಿವಿ ಪರಿಶೀಲನೆ ಮಾಡಿದಾಗ ಕೆಂಜಾರುವರೆಗೆ ಬಂದು ಅಲ್ಲಿಂದ ಬಾಡಿಗೆ ರಿಕ್ಷಾದಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದಾನೆ. ವಿಮಾನ ನಿಲ್ದಾಣದಿಂದ ತೆರಳುವಾಗಲೂ ರಿಕ್ಷಾದಲ್ಲಿ ತೆರಳಿದ್ದಾನೆ ಎಂದು ಪೊಲೀಸರು ಆರಂಭದ ಮಾಹಿತಿ ನೀಡಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel