ಮಂಜುನಾಥನಗರ: ವರ್ಗಾವಣೆಗೊಂಡ ಶಿಕ್ಷಕಿಗೆ ಬೀಳ್ಕೊಡುಗೆ

December 9, 2019
7:55 PM

ಸವಣೂರು : ಪಾಲ್ತಾಡಿ ಗ್ರಾಮದ ಮಂಜುನಾಥನಗರ ಸ.ಹಿ.ಪ್ರಾ.ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ ಸೇವೆಸಲ್ಲಿಸಿ ಹಾಸನ ಜಿಲ್ಲೆಯ ಹೊಸನಗರ ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡ ಕುಸುಮಾ ಐ.ಟಿ ಅವರಿಗೆ ಬೀಳ್ಕೊಡುಗೆ ಹಾಗೂ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹೊನ್ನಪ್ಪ ಗೌಡ ಜಾರಿಗೆತ್ತಡಿ ಅವರಿಗೆ ಗೌರವಾರ್ಪಣೆ ಡಿ.9ರಂದು ಮಂಜುನಾಥಗರ ಶಾಲೆಯಲ್ಲಿ ನಡೆಯಿತು.

Advertisement

ಮಂಜುನಾಥನಗರ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪುಟ್ಟಣ್ಣ ಪರಣೆ ಅಧ್ಯಕ್ಷತೆ‌ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ ಅವರು ,ಶಿಕ್ಷಕಿ ಕುಸುಮಾ ಅವರು ಹಾಸನ ಜಿಲ್ಲೆಯವರಾದರೂ ಕಳೆದ 18 ವರ್ಷಗಳಿಂದ ತಮ್ಮ ಕುಟುಂಬದ ಜತೆ ಮಂಜುನಾಥನಗರದಲ್ಲೇ ವಾಸ್ತ್ಯವ್ಯ ಇದ್ದು ನಮ್ಮ ಊರಿನವರಂತೆಯೆ ಆಗಿದ್ದಾರೆ. ಶಾಲೆಯ ಬೆಳವಣಿಗೆಯಲ್ಲಿ ಇವರ ಪಾತ್ರ ಮಹತ್ವದ್ದು. ಅವರ ಪತಿ ಮಲ್ಲಿಕಾರ್ಜುನ ಅವರು ಊರಿನ ಎಲ್ಲಾ ಚಟುವಟಿಕೆಯಲ್ಲಿ,ಸಂಘ ಸಂಸ್ಥೆಗಳಲ್ಲಿ ಸಕ್ರೀಯಾರಗಿದ್ದುಕೊಂಡು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.ಅಪರೂಪದ ಸಹೃದಯ ವ್ಯಕ್ತಿತ್ವ ಹೊಂದಿದ್ದು,ಶಾಲೆಯ ಬೆಳವಣಿಗೆಯ ಬಗ್ಗೆ ಅಪಾರ ಕಾಳಜಿ ಇತ್ತು ಎಂದರು.

ಮಂಜುನಾಥನಗರ ಪ್ರೌಢಶಾಲಾ ಮುಖ್ಯಶಿಕ್ಷಕಿ ಯಶೋಧಾ ವಿ, ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ, ವಿವೇಕಾನಂದ ಯುವಕ ಮಂಡಲದ ಗೌರವಾಧ್ಯಕ್ಷ ಸುಧೀರ್ ಕುಮಾರ್ ರೈ ಕುಂಜಾಡಿ, ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ವಿಮಲಾ, ಅಂಗನವಾಡಿ ಕಾರ್ಯಕರ್ತೆ ಸುಮಂಗಲಾ, ಶಾಲಾ ನಾಯಕಿ ಚೈತನ್ಯ , ವಿವೇಕಾನಂದ ಯುವಕ ಮಂಡಲದ ಸದಸ್ಯ ಸತ್ಯಪ್ರಕಾಶ್ , ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಶುಭ ಹಾರೈಸಿದರು.

ಗೋಡ್ರೆಜ್ ಕೊಡುಗೆ
ಈ ಸಂದರ್ಭ ವರ್ಗಾವಣೆಗೊಂಡ ಮುಖ್ಯಶಿಕ್ಷಕಿ ಕುಸುಮಾ ಮಲ್ಲಿಕಾರ್ಜುನ ಐ.ಟಿ ಅವರು ಶಾಲೆಗೆ ಗೋಡ್ರೆಜ್ ಕೊಡುಗೆಯಾಗಿ ನೀಡಿದರು. ಮಂಜುನಾಥನಗರ ಶಾಲಾ ಪ್ರಭಾರ ಮುಖ್ಯಶಿಕ್ಷಕಿ ಆ್ಯಗ್ನೇಸ್ ಪ್ರೆಸಿಲ್ಲಾ ಪಾಯಸ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ನಂದಿನಿ ಆರ್ ದೇವಾಡಿಗ ವಂದಿಸಿದರು. ಆರತಿ ಎಸ್ ಕಾರ್ಯಕ್ರಮ ನಿರೂಪಿಸಿದರು. ರೇಖಾ ಸಹಕರಿಸಿದರು.

Advertisement

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಾವೇರಿ ನದಿ ನೀರು ಮಲಿನ ತಡೆಯಲು ಕ್ರಮ | ಅಸ್ತಿ ವಿಸರ್ಜನೆ ಮಾಡದಂತೆ ಸೂಚನೆ
August 14, 2025
8:55 PM
by: The Rural Mirror ಸುದ್ದಿಜಾಲ
ಅಡಿಕೆ ಕೊಳೆರೋಗ | ಸಿಎಂ ಜೊತೆ ಶಾಸಕ ಅಶೋಕ್ ಕುಮಾರ್ ರೈ ಚರ್ಚೆ
August 14, 2025
2:53 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 14-08-2025 | ಆ.20 ರವರೆಗೂ ಮಳೆ -ತುಂತುರು ಮಳೆ
August 14, 2025
2:48 PM
by: ಸಾಯಿಶೇಖರ್ ಕರಿಕಳ
ಸಗಣಿಯಿಂದ 5500 ಕಿಮೀ ಮಾಲಿನ್ಯ ರಹಿತ ಪ್ರಯಾಣ..!
August 14, 2025
7:39 AM
by: ವಿಶೇಷ ಪ್ರತಿನಿಧಿ

You cannot copy content of this page - Copyright -The Rural Mirror

Join Our Group