ಮಂಡೆಕೋಲು: ಮಂಡೆಕೋಲಿನಲ್ಲಿ ವೀರವನಿತೆ ಯುವತಿ ಮಂಡಳಿಯ ಉದ್ಘಾಟನಾ ಸಮಾರಂಭ ನಡೆಯಿತು.
ವೇದಿಕೆಯಲ್ಲಿ ಸಮಿತಿಯ ನೂತನ ಅಧ್ಯಕ್ಷರಾಗಿ ವಿನುತಾ ಪಾತಿಕಲ್ಲು , ಯುವಜನ ಸಂಯುಕ್ತ ಮಂಡಳಿ ತಾಲೂಕು ಅಧ್ಯಕ್ಷರಾದ ಶಂಕರ್ ಪೆರಾಜೆ , ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಮಮತಾ ಬೊಳುಗಲ್ಲು, ಯುವತಿಮಂಡಳಿಯ ಪ್ರಧಾನಕಾರ್ಯದರ್ಶಿ ಸಂಧ್ಯಾ ಮಂಡೆಕೋಲು, ಗ್ರಾಮ ಪಂಚಾಯತ್ ಅಧ್ಯಕ್ಷೆ ಮೋಹಿನಿ ಮಂಡೆಕೋಲು,
ಉಪಸ್ಥಿತರಿದ್ದರು.
ವಿನುತಾಪಾತಿಕಲ್ಲು ಪ್ರಾಸ್ತಾವಿಕ ಮಾತನಾಡಿ ಸಮುದಾಯದ ಯುವತಿಯರು ಬೌದ್ಧಿಕ ರಾಜಕೀಯ ಸಾಮಾಜಿಕ ಆರ್ಥಿಕ ಬಲವನ್ನು ಹೆಚ್ಚಿಸಿ ಆತ್ಮವಿಶ್ವಾಸವನ್ನು ಬೆಳೆಯಿಸಿ ಅವರ ಸಾಮರ್ಥ್ಯ ವನ್ನು ಬಲಪಡಿಸುವುದೇ ಸಂಘಟನೆಯ ಉದ್ದೇಶವಾಗಿದೆ ಎಂದರು.
ಯುವಜನ ಸಂಯುಕ್ತ ಸಂಘಟನೆಯ ಅಧ್ಯಕ್ಷರು ಶಂಕರ್ ಪೆರಾಜೆ ಪ್ರಮಾಣ ವಚನ ಬೋಧಿಸಿ ಶುಭಹಾರೈಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಮೋಹಿನಿ ಮಂಡೆಕೋಲು, ಸಂಧ್ಯಾ ಮಂಡೆಕೋಲು ಶುಭ ಹಾರೈಸಿದರು.
ಸಂಧ್ಯಾ ಮಂಡೆಕೋಲು ಸ್ವಾಗತಿಸಿ ಸ್ವಾತಿಉಗ್ರಾಣೀ ಮನೆ ಮತ್ತು ತಿರುಮಲೇಶ್ವರೀ ಪಾತಿಕಲ್ಲು ಪ್ರಾರ್ಥಿಸಿದರು. ವಸಂತಿ ಉಗ್ರಾಣೀ ಮನೆ ವಂದಿಸಿದರು. ಭಾರತಿ ಉಗ್ರಾಣಿ ಮನೆ ನಿರೂಪಿಸಿದರು.
ದ ಕ ಜಿಲ್ಲೆಯಲ್ಲಿ ಅಡಿಕೆಗೆ ಕೊಳೆರೋಗ ಭಾದಿಸಿದ್ದು ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ…
15.08.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಒಂದು ಹಸುವಿನ ಸಗಣಿಯಿಂದ ಪ್ರತಿ ವರ್ಷ 225 ಲೀಟರ್ ಪೆಟ್ರೋಲ್ಗೆ ಸಮಾನವಾದ ಮೀಥೇನ್…
ಕನ್ನಡದ ಸ್ಥಿತಿ ಇಂದು ಬೇಲಿ ಇಲ್ಲದ ತೋಟದಂತೆ, ಬಾಗಿಲಿಲ್ಲದ ಮನೆಯಂತಾಗಿದ್ದು, ನಾಲಿಗೆ ಶುದ್ಧೀಕರಣ,…
ಮಿಜೋರಾಂನ ಚಾಂಫೈನಲ್ಲಿ ಅಸ್ಸಾಂ ರೈಫಲ್ಸ್ 466 ಚೀಲ ಅಡಿಕೆಯನ್ನು ವಶಕ್ಕೆ ಪಡೆದಿದೆ. ಈ…
ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಇರುವ ದೇವಾಲಯಗಳಲ್ಲಿ ಕಡ್ಡಾಯವಾಗಿ ನೀರಿನ ಬಾಟಲ್ ಸೇರಿದಂತೆ ಪ್ಲಾಸ್ಟಿಕ್ …