ಸುಳ್ಯ: ಅಕ್ಟೋಬರ್ 2 ರಂದು ನಡೆಯಲಿರುವ ಮಹಾತ್ಮಾ ಗಾಂಧಿ ಜಯಂತಿ 150ನೇ ವರ್ಷಾಚರಣೆ ಹಾಗೂ ಮಂಡೆಕೋಲು ಆದರ್ಶ ಗ್ರಾಮ ಸಂಕಲ್ಪ ಕಾರ್ಯಕ್ರಮದ ಪೂರ್ವಭಾವಿ ಸಭೆ ಮಂಡೆಕೋಲಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮ ವಿಕಾಸ ಸಮಿತಿ ವತಿಯಿಂದ ಪ್ಲಾಸ್ಟಿಕ್ ಅಳಿಸಿ ನೆಲ ಜಲ ಪರಿಸರ ಉಳಿಸಿ ಕಾರ್ಯಕ್ರಮಕ್ಕೆ ಬಟ್ಟೆಯ ಕೈಚೀಲ ವಿತರಿಸುವ ಮೂಲಕ ಚಾಲನೆ ನೀಡಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಮೋಹಿನಿ.ಬಿ, ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ, ಗ್ರಾ.ಪಂ. ಮಾಜಿ ಅಧ್ಯಕ್ಷ ಸುರೇಶ್ ಕಣೆಮರಡ್ಕ, ವಿನುತಾ ಪಾತಿಕಲ್ಲು, ಸರೋಜಿನಿ ಮಾವಂಜಿ, ಚಂದ್ರಜೀತ್ ಮಾವಂಜಿ, ಶ್ರೀಕಾಂತ್ ಮಾವಂಜಿ ಮತ್ತಿತರರು ಉಪಸ್ಥಿತರಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel