ಮಂಡೆಕೋಲು: ಮಂಡೆಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಎಲ್ಲಾ ಹನ್ನೆರಡು ಕ್ಷೇತ್ರಗಳಿಗೂ ಅವಿರೋಧ ಆಯ್ಕೆಯಾಗುವ ಮೂಲಕ ಚುನಾವಣಾರಹಿತವಾಗಿ ನೂತನ ಆಡಳಿತ ಮಂಡಳಿಯ ಆಯ್ಕೆಯಾಗಿದೆ.
ಹಿಂದುಳಿದ ವರ್ಗಗಳ ಎರಡು ಕ್ಷೇತ್ರ, ಮಹಿಳಾ ಮೀಸಲು ಕ್ಷೇತ್ರ, ಪ.ಜಾತಿ ಹಾಗೂ ಪ.ಪಂಗಡ ಮೀಸಲು ಕ್ಷೇತ್ರ ಮತ್ತು ಸಾಲಗಾರ ರಹಿತ ಕ್ಷೇತ್ರಗಳ ಒಟ್ಟು ಏಳು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಆದರೆ ಸಾಲಗಾರರ ಸಾಮಾನ್ಯ ಕ್ಷೇತ್ರಗಳ ಒಟ್ಟು ಐದು ಸ್ಥಾನಗಳಿಗೆ ಒಟ್ಟು ಏಳು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದರು. ಆ ಪೈಕಿ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಉತ್ತಪ್ಪ ಗೌಡ ಹಾಗೂ ಅಬ್ದುಲ್ ಲತೀಫ್ ರವರು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾದ ಇಂದು ತಮ್ಮ ನಾಮಪತ್ರ ಹಿಂತೆಗೆದುಕೊಳ್ಳುವ ಮೂಲಕ ಚುನಾವಣೆ ಇಲ್ಲದೆ ಎಲ್ಲ ಕ್ಷೇತ್ರಗಳಿಗೂ ಅವಿರೋಧ ಆಯ್ಕೆಯಾದಂತಾಗಿದೆ.
ಪಕ್ಷೇತರ ಅಭ್ಯರ್ಥಿ ಉತ್ತಪ್ಪ ಅವರ ಜೊತೆ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹಾಗೂ ಸುಬೋದ್ ಶೆಟ್ಟಿ ಮೇನಾಲ ಹಾಗೂ ಗ್ರಾಮದ ಪ್ರಮುಖ ನಾಯಕರು ಮಾತುಕತೆ ನಡೆಸಿ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮನವೊಲಿಸಲಾಯಿತು.
ಆಯ್ಕೆಗೊಂಡ ಹನ್ನೆರಡು ಸ್ಥಾನಗಳ ಅಭ್ಯರ್ಥಿಗಳ ಪೈಕಿ ಒಂದು ಮಹಿಳಾ ಮೀಸಲು ಕ್ಷೇತ್ರ ಹಾಗೂ ಒಂದು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಗೊಂಡಿದ್ದರೆ ಉಳಿದ ಹತ್ತು ಸ್ಥಾನಗಳಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ. ಚುನಾವಣಾಧಿಕಾರಿ ಶಿವಲಿಂಗಯ್ಯರವರು ಚುನಾಯಿತ ಅಭ್ಯರ್ಥಿಗಳನ್ನು ಘೋಷಿಸಿದರು. ಹಾಲಿ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ ಚುನಾಯಿತ ಅಭ್ಯರ್ಥಿಗಳಿಗೆ ಹಾಗೂ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲು ಕಾರಣಕರ್ತರಾದ ಎಲ್ಲರನ್ನೂ ಅಭಿನಂದಿಸಿದರು. ಮುಖ್ಯ ಕಾರ್ಯನಿರ್ವಣಾಧಿಕಾರಿ ಅನಂತಕೃಷ್ಣ ಚಾಕೋಟೆ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ನೂತನವಾಗಿ ಚುನಾಯಿತರಾದ ಅಭ್ಯರ್ಥಿಗಳ ವಿವರ:
ಸಾಲಾಗಾರರ ಸಾಮಾನ್ಯ ಕ್ಷೇತ್ರ ಈಶ್ವರಚಂದ್ರ ಕೆ. ಆರ್ , ರಾಮಕೃಷ್ಣ ರೈ ಪಿ.ಜಿ, ಭಾಸ್ಕರ ಯಂ.ಪಿ, ಪದ್ಮನಾಭ ಚೌಟಾಜೆ, ಸುನಿಲ್ ಪಿ.ಕೆ,
ಹಿಂದುಳಿದ ವರ್ಗ ‘ಎ’ ಕ್ಷೇತ್ರ ಸುರೇಶ್ ಕಣೆಮರಡ್ಕ, ಚಂದ್ರಜಿತ್ ಮಾವಂಜಿ,
ಮಹಿಳಾ ಮೀಸಲು ಕ್ಷೇತ್ರ ಜಲಜಾ.ಡಿ, ಸರಸ್ವತಿ ಕೆ.ಪಿ
ಸಾಲಗಾರ ರಹಿತ ಕ್ಷೇತ್ರ ಭಾರತಿ ಯು.ಯಂ
ಪ.ಜಾತಿ ಮೀಸಲು ಕ್ಷೇತ್ರ ರವಿ. ಸಿ
ಪ.ಪಂಗಡ ಮೀಸಲು ಕ್ಷೇತ್ರ ಮೋನಪ್ಪ ನಾಯ್ಕ.ಬಿ
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…