ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಶುಕ್ರಾಚಾರ್ಯ’ ’
ಪ್ರಸಂಗ : ಮೃತಸಂಜೀವಿನಿ
(ಶುಕ್ರನ ಮಗಳು ದೇವಯಾನಿಯು ಯಯಾತಿಯನ್ನು ತನಗೆ ವಿವಾಹ ಮಾಡಿಕೊಂಡುವಂತೆ ಪ್ರಾರ್ಥಿಸಿದಾಗ)
“ಕುಮಾರಿ… ನೀನು ಏನೂ ದಾರಿ ತಪ್ಪಿದ ಹಾಗಾಗಲಿಲ್ಲ. ನಮ್ಮ ಮಕ್ಕಳೆಲ್ಲಾ ಯಾಕೆ ಈ ರೀತಿಯಾಗಿ ವ್ಯವಹರಿಸುತ್ತಾರೆ ಎಂದು ಹಿರಿಯರು ಪ್ರಶ್ನಿಸುವುದಕ್ಕಿಂತ ಮೊದಲು ಮೂಲ ಕಾರಣವನ್ನು ತಮ್ಮಲ್ಲೇ ತಾವು ಕಂಡುಹುಡುಕಬೇಕು. ಹೇಳಿಕೇಳಿ ಈ ರಾಕ್ಷಸರ ಆಚಾರ್ಯ ಪೀಠವನ್ನು ಅಲಂಕರಿಸಿದ ಮೇಲೆ ನನ್ನಲ್ಲಿಯೂ ಕೂಡಾ ಆಹಾರ, ವಿಹಾರ, ವ್ಯವಹಾರ ಇದು ಕ್ಷಾತ್ರದಿಂದಲೇ ಮುಂಬರಿದಿದೆ. ಇತ್ತಿತ್ತ ನಾನು ಉಣ್ಣುವಲ್ಲಾಗಲೀ, ಕುಡಿಯುವುದಲ್ಲಾಗಲೀ ವಿಧಿನಿಷೇಧದ ಕಟ್ಟುಪಾಡಿಗೆ ಒಳಪಟ್ಟವನಾಗಿರಲಿಲ್ಲ. ಆದರೆ ಒಂದು ಕಾಲದಲ್ಲಿ ಜಾಗೃತನಾಗಿದ್ದೆ. ಮಗಳೇ… ನಿನ್ನಲ್ಲೂ ಒಂದು ವಿಧವಾದ ಸುಪ್ತವಾದ ಕ್ಷಾತ್ರ ಚಿತ್ತವೃತ್ತಿ ಇದೆ. ಇದಕ್ಕೆ ಪೂರಕವಾಗಿ ಅಂದು ಕಚನನ್ನು ನೀನು ಮೋಹಿಸಿ, ಅವನಿಂದ ಶಾಪಗೊಂಡೆ. ಎಷ್ಟೆಂದರೂ ಅವನು ಬ್ರಾಹ್ಮಣ ಪುತ್ರ. ಅಂತರಂಗ ಬಿಚ್ಚಿ ನಿನ್ನಲ್ಲಿ ಹೇಳುತ್ತೇನೆ. ನನ್ನಲ್ಲಿ ಇರುವುದಕ್ಕಿಂತಲೂ ಹೆಚ್ಚಿನ ಬ್ರಾಹ್ಮಣ್ಯ ಆ ಹುಡುಗನಲ್ಲಿತ್ತು. ಬೇರೊಬ್ಬರಾಗಿರುತ್ತಿದ್ದರೆ ನಿನ್ನ ಭಿಕ್ಷೆಗೆ ಒಲ್ಲೆ ಅನ್ನುತ್ತಿದ್ದರು. ಅಪ್ಪನಿಗಿಂತ ಇಮ್ಮಡಿ, ಮುಮ್ಮಡಿ ಯೋಗ್ಯತೆಯುಳ್ಳಂತಹ ಮಗ ಆ ಕಚ. ಬೃಹಸ್ಪತಿಯಾದರೂ… ಅದು ಬಿಡು… ಹಾಗಾದರೆ ಆ ತರುಣ ವಿದ್ಯೆಗೆ ಎಷ್ಟು ಮೌಲ್ಯವನ್ನು ಕಲ್ಪಿಸಿದ ನೋಡು. ಅದು ಕಳೆದು ಹೋಯಿತಲ್ಲಾ ಎಂದು ನೊಂದು ಶಪಿಸಿದ “ನಿನಗೆ ಕ್ಷತ್ರಿಯನೇ ಗಂಡನಾಗಲಿ” ಅಂತ. ಹೀಗೆ ಬೀಜದಲ್ಲಿದ್ದ ಕ್ಷತ್ರಿಯಗಂಧ, ಆಮೇಲೆ ನಾವು ಬೆಳೆಯುತ್ತಿರುವಾಗ ಆ ಕಚನ ನೊಂದ ನುಡಿ. ಅವನ ಬ್ರಾಹ್ಮಣ್ಯದ ಮಾತನ್ನು ತಳ್ಳಿಹಾಕುವುದಕ್ಕೆ ಬ್ರಹ್ಮನಿಗೂ ಸಾಧ್ಯವಿಲ್ಲ. ಆದ ಕಾರಣ ನಿನಗೆ ಕ್ಷತ್ರಿಯನೇ ಪತಿಯಾಗಬೇಕಾದುದು ಹೌದು..”
ಮುಂದಿನ ಎರಡು ಮೂರು ದಿನಗಳಲ್ಲಿ ದೇಶದ ವಾಯುವ್ಯ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ…
ವಿಧಾತ್ರಿ ಎಂ, 6 ನೇ ತರಗತಿ, ರೋಟರಿ ಮಿಡ್ಟೌನ್ ಶಾಲೆ, ಮೈಸೂರು | …
ನೈನಿಕಾ.ಬಿ.ಸಿ , 4ನೇ ತರಗತಿ , ಸೈಂಟ್ ಆನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆ,…
ನಯೋನಿಕಾ.ಬಿ.ಸಿ., 4 ನೇ ತರಗತಿ, ಸೈಂಟ್ ಆನ್ಸ್ ಶಾಲೆ ಕಡಬ | -…
ನಿಪಾ ವೈರಸ್ ಹರಡುವಿಕೆಯ ವಿರುದ್ಧ ರಾಜ್ಯವು ತನ್ನ ತಡೆಗಟ್ಟುವ ಕ್ರಮಗಳನ್ನು ತೀವ್ರಗೊಳಿಸಿದೆ ಎಂದು…
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ದೇವರು ಹಾಗೂ ಗುರು…