ಮಂಗಳೂರು: ಬೆಳಗ್ಗೆ ಹೀಗೊಂದು ಮಾಹಿತಿ ಗುರುವಾರ ಬಂತು, ಕುಂದಾಪುರ ತಾಲೂಕಿನ ಎಡಮೊಗ್ಗೆ ಕುಮ್ಟಿಬೇರು ಎಂಬಲ್ಲಿ ರಾತ್ರಿ ತಾಯಿ ಜೊತೆಗೆ ಮಲಗಿದ್ದ ಎರಡು ಪುಟ್ಟ ಮಕ್ಕಳ ಪೈಕಿ ಒಂದು ಹೆಣ್ಣುಮಗು ಸಾನ್ವಿಕಾಳನ್ನು ದುಷ್ಕರ್ಮಿಯೊಬ್ಬ ಕದ್ದೊಯ್ದಿದ್ದಾನೆ. ಈ ಸುದ್ದಿ ಎಲ್ಲೆಡೆ ಸಂಚಲನ ಮೂಡಿಸಿತು. ಶುಕ್ರವಾರ ಸಂಜೆಯ ಹೊತ್ತಿಗೆ ವಿಷಯ ಬಯಲಾಯಿತು, ತಾಯಿಯೇ ಹೆನ್ಣು ಮಗುವನ್ನು ನದಿಗೆ ಎಸೆದಿದ್ದಳು..!. ಇದರ ನಡುವೆ ಇರುವ ಸತ್ಯದ ಬಗ್ಗೆ ಪೊಲೀಸರಿಂದ ತನಿಖೆ ನಡೆಯುತ್ತಿದೆ.
ಮಗು ಕಳುವಾಗಿದೆ ಎಂಬ ವಿಷಯವನ್ನು ಗಂಭೀರವಾಗಿ ತನಿಖೆಗೆ ಕೈಗೆತ್ತಿಕೊಂಡಿದ್ದ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ಅವರು ಡಿವೈಎಸ್ಪಿ ಬಿ.ಪಿ.ದಿನೇಶ್ ಕುಮಾರ್ ಅವರಿಗೆ ತನಿಖಾ ಉಸ್ತುವಾರಿ ವಹಿಸಿದ್ದರು. ಗುರುವಾರ ರಾತ್ರಿ ಬಾಲಕಿಯ ತಾಯಿ ರೇಖಾಳನ್ನು ಶಂಕರನಾರಾಯಣ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ ಬಳಿಕ ಪೊಲೀಸರಿಗೆ ಕೆಲವು ಮಾಹಿತಿಗಳು ಲಭ್ಯವಾಗಿದ್ದು, ಸಾನ್ವಿಕಾ ನಾಪತ್ತೆಯ ಹಿಂದೆ ತಾಯಿ ರೇಖಾ ಕೈವಾಡ ಇರುವುದು ಸ್ಪಷ್ಟವಾಯಿತು.
ಆರಂಭದಲ್ಲಿ ಮಗು ಅಪಹರಣದ ಬಗ್ಗೆ ಮಾತನಾಡಿದ್ದ ತಾಯಿ ರೇಖಾ, ಬೆಳಗ್ಗೆ ಸುಮಾರು ನಾಲ್ಕೂವರೆ ಗಂಟೆಗೆ ಮನೆಯ ಹಿಂಬದಿಯ ಬಾಗಿಲಲ್ಲಿ ಒಳನುಗ್ಗಿದ ಬೂದು ಬಣ್ಣದ ಅಂಗಿ ಧರಿಸಿದ ಮುಸುಕುಧಾರಿ ವ್ಯಕ್ತಿಯೊಬ್ಬ ನೇರವಾಗಿ ಮೂವರು ಮಲಗಿದ್ದಲ್ಲಿಗೆ ಬಂದು ತಾಯಿ ಜೊತೆ ಮಲಗಿದ್ದ ಹೆಣ್ಣು ಮಗು ಸಾನ್ವಿಕಾಳನ್ನು ಎತ್ತಿಕೊಂಡಿದ್ದಾನೆ ಬಳಿಕ ಮನೆ ಸಮೀಪದ ಕುಬ್ಜಾ ನದಿಯನ್ನು ದಾಟಿ ನಾಪತ್ತೆಯಾಗಿರುವುದಾಗಿ ಹೇಳಿದ್ದಳು. ಆ ವ್ಯಕ್ತಿ ಹಿಂದೆಯೇ ಹೋಗಿ ನಾವೂ ನದಿ ಸೆಳೆತಕ್ಕೆ ಸಿಲುಕಿ ಪಾರಾಗಿದ್ದೆವು ಎಂದು ಕತೆ ಹೇಳಿದ್ದಳು.
ಆ ನಂತರ ಆಕೆಯ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂತು. ಪೊಲೀಸರು ಅತ್ಯಂತ ಗಂಭೀರವಾಗಿ ಹಾಗೂ ಸೂಕ್ಷ್ಮವಾಗಿ ಈ ಪ್ರಕರಣದ ತನಿಖೆ ನಡೆಸಿದರು. ಹಲವು ಬಾರಿ ವಿಚಾರಣೆ ಮಾಡಿದರು. ದೂರು ನೀಡಿದಾಕೆಯನ್ನೇ ಆಗಾಗ ವಿಚಾರಣೆ ಮಾಡುವುದು ಕಷ್ಟದ ಮಾತಾಗಿದ್ದರೂ ಪೊಲೀಸರು ನಾಜೂಕಿನಿಂದ ಪ್ರಕರಣದ ತನಿಖೆ ನಡೆಸುತ್ತಲೇ ಹೋದರು, ಕೊನೆಗೆ ಪೊಲೀಸರು ಪ್ರಕರಣ ಬೇಧಿಸಿ ತಾಯಿಯೇ ಮಗುವನ್ನು ಹೊಳೆಗೆ ಎಸೆದಿರುವ ಅಂಶ ಬೆಳಕಿಗೆ ಬಂದಿತು. ಶುಕ್ರವಾರ ಮಗುವಿನ ಮೃತದೇಹವೂ ಪತ್ತೆಯಾಯಿತು. ಸಾನ್ವಿಕಾ ಸ್ವತಃ ತನ್ನ ತಾಯಿಯಿಂದಲೇ ಹತ್ಯೆಯಾಗಿದ್ದಾಳೆ ಎಂದು ಪೊಲೀಸರು ಕೊನೆಗೆ ದೃಢಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಪ್ರಕರಣದ ಹಿಂದಿನ ಉದ್ದೇಶವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಆತ್ಯಹತ್ಯೆ ಯತ್ನವೋ ಅಥವಾ ಕೊಲೆಯೋ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
ಪುಟ್ಟ ಮಗು, ಒಂದೂವರೆ ವರ್ಷದ ಮಗುವನ್ನು ನಿರ್ದಯವಾಗಿ ಹೊಳೆಗೆ ಎಸೆದಿರುವ ಘಟನೆ ಎಲ್ಲರ ಮನಕಲಕಿದೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…