ಈಗಿನ ಕಾಲದ ಮಕ್ಕಳ ದೊಡ್ಡ ತೊಂದರೆಯೇ ಕಡಿಮೆ ನಿದ್ರೆ. ಅಮ್ಮಂದಿರು ವೈದ್ಯರ ಬಳಿ ಬಂದರೆ ಹೇಳುವ, ಕೇಳುವ ಪ್ರಶ್ನೆಗಳಲ್ಲಿ ಸಾಮಾನ್ಯವಾಗಿ ಇರುವುದು ಸರಿಯಾಗಿ ನಿದ್ರೆ ಮಾಡಲ್ಲ ಅಂತ. ಮತ್ತೆ ಇಡೀ ದಿನ ಡಲ್ ಇರುತ್ತಾನೆ, ತೂಕಡಿಸುತ್ತಾನೆ , ಪರೀಕ್ಷೆಯು ಹತ್ತಿರ ಬಂತು ಏನಾದರೂ ಮಾಡಿ ಡಾಕ್ಟ್ರೆ ಅಂತ…..!
ಮನುಷ್ಯನಿಗೆ ಸರಿಯಾದ ನಿದ್ರೆ ಬಾರದಿದ್ದರೆ ಆಕಳಿಕೆ, ತರಗತಿ ಮತ್ತು ಪಾಠದ ಬಗೆಗಿನ ಆಸಕ್ತಿ ಮತ್ತು ಉತ್ಸಾಹ ಎಲ್ಲವೂ ಕಡಿಮೆ ಆಗುತ್ತದೆ. ಅದು ಅತಿಯಾಗಿ ಕಾಣುವುದು ಶಾಲೆಗೆ ಹೋಗುವ ಮಕ್ಕಳಲ್ಲಿ. ಕೆಲವೊಮ್ಮೆ ಮಕ್ಕಳಿಗೆ ಉತ್ಸಾಹದ ಕೊರತೆಯಿಂದಲೂ ಆಗುತ್ತದೆ ಅಥವಾ ರಾತ್ರಿಯ ನಿದ್ರೆಯ ಕೊರತೆಯಿಂದಲೂ ಆಗಬಹುದು. ದಿನನಿತ್ಯ ಆರೋಗ್ಯದ ಕಾಪಾಡುವಿಕೆಯಲ್ಲಿ ನಿದ್ರೆಯ ತೊಂದರೆಯಿಂದ ಅನೇಕ ರೋಗಗಳು ಬರುವ ಸಾದ್ಯತೆಯಿಂದ ಇದೆ. ಇದರಿಂದಾಗಿ ಯಾಕೋ ಓದುವ ಆಸಕ್ತಿ ಕಡಿಮೆ ಮತ್ತು ಓದಿದ್ದು ಮರೆತುಹೋಗುತ್ತೆ ಎಂದೆಲ್ಲ ಹೇಳುತ್ತಾರೆ ನಿದ್ರೆಯೂ ಎಲ್ಲಾ ಚಟುವಟಿಕೆಯ ಸಮತೋಲನ ಕಾಪಾಡುತ್ತದೆ.ಹಾಗಿದ್ದರೆ ಕೆಲವೊಂದು ಅಂಶ ನೆನಪಿಟ್ಟು ಮಾಡಲೇಬೇಕು….
ನೆನಪಿಡಬೇಕಾದ ಅಂಶಗಳು:
- ರಾತ್ರಿಯಲ್ಲಿ ನಿದ್ರೆ ಮಾಡುವುದಕ್ಕೆ ಸೂಕ್ತ ಸಮಯ ನಿಗದಿಪಡಿಸುವುದು ಮತ್ತು ಪ್ರತಿದಿನ ಅದೇ ಸಮಯಕ್ಕೆ ತಕ್ಕ ಮಲಗುವುದು ಮತ್ತು ಏಳುವುದು
- ಯಾವಾಗಲಾದರೂ ಓದುತ್ತಿರುವಾಗ ದಿನದಲ್ಲಿ ನಿದ್ರೆ ಬಂದರೆ ಸ್ವಲ್ಪ ಹೊತ್ತು ನಿದ್ರಿಸಿ ಪುನಃ ಓದಿರಿ
- ರಾತ್ರಿ ಕಾಲ ಹೆಚ್ಚಾಗಿ ಇರುವುದನ್ನು ಕಮ್ಮಿ ಮಾಡಿ, ನಿದ್ರಿಸಿ
- ರಾತ್ರಿಯ ಕಾಲದಲ್ಲಿ ಚಹಾ-ಕಾಫಿ ಇತ್ಯಾದಿಗಳನ್ನು ಕಡಿಮೆ ಮಾಡಿ
- ಊಟದ ಬಳಿಕ ಒಂದು ಲೋಟ ನೀರು ಕುಡಿಯುವುದನ್ನು ಶುರು ಮಾಡಿ
- ಹೆಚ್ಚಾಗಿ ಕಿರಣ ಬೀರುವ ವಸ್ತುಗಳಾದ ಟಿವಿ ಮೊಬೈಲ್ ಇತ್ಯಾದಿಗಳನ್ನು ಕಡಿಮೆ ಮಾಡಿ
- ಮನಸ್ಸಲ್ಲಿ ಯಾವುದೇ ಕೆಟ್ಟ ರೀತಿಯ ವಿಷಯಕ್ಕೆ ಅನುವು ಮಾಡಿಕೊಡಬೇಡಿ
- ಒಳ್ಳೆಯ ಯೋಚನೆ ಸದಾ ಇರಲಿ