ಮಡಿಕೇರಿಯಲ್ಲಿ ಇಎನ್‍ಟಿ ತಜ್ಞರ ರಾಜ್ಯ ಸಮ್ಮೇಳನ : ಸೆ.27 ರಂದು ಚಾಲನೆ

September 24, 2019
11:09 AM

ಮಡಿಕೇರಿ : ಕಿವಿ, ಮೂಗು ಮತ್ತು ಗಂಟಲು (ಇಎನ್‍ಟಿ) ತಜ್ಞರ ಮೂರು ದಿನಗಳ ರಾಜ್ಯ ಮಟ್ಟದ 37ನೇ ಸಮ್ಮೇಳನ ಸೆ.27ರಿಂದ 29ರವರೆಗೆ ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ (ಮೆಡಿಕಲ್ ಕಾಲೇಜು) ಸಭಾಂಗಣದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಇಎನ್‍ಟಿ ಶಶ್ತ್ರಚಿಕಿತ್ಸಕರ ಸಂಘದ ಕೊಡಗು ಘಟಕದ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ ಅವರು, ಇಎನ್‍ಟಿ ಶಸ್ತ್ರಚಿಕಿತ್ಸಕರ ಸಂಘಟನೆಯ ಕೊಡಗು ಮತ್ತು ಕರ್ನಾಟಕ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಇದೇ ಪ್ರಥಮ ಬಾರಿಗೆ ಕೊಡಗಿನಲ್ಲಿ ರಾಜ್ಯ ಮಟ್ಟದ ಸಮ್ಮೇಳನ ನಡೆಯಲಿದೆ ಎಂದರು. ರಾಜ್ಯದ ವಿವಿಧೆಡೆಯ ಸುಮಾರು 500ಕ್ಕೂ ಅಧಿಕ ಮಂದಿ ವೈದ್ಯರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಸಮ್ಮೇಳನದಲ್ಲಿ ನುರಿತ ಇಎನ್‍ಟಿ ತಜ್ಞರಿಂದ ಉಪನ್ಯಾಸ, ಆಹ್ವಾನಿತ ಮಾತುಕತೆಗಳು, ಚರ್ಚೆಗಳು, ವಿಚಾರ ಸಂಕಿರಣ ಮತ್ತು ಪ್ರಾಯೋಗಿಕ ಕಾರ್ಯಾಗಾರಗಳು ನಡೆಯಲಿದ್ದು, ಕರ್ನಾಟಕ ಮಾತ್ರವಲ್ಲದೆ, ಹೊರ ರಾಜ್ಯಗಳ ಇಎನ್‍ಟಿ ಶಸ್ತ್ರಚಿಕಿತ್ಸಕರೂ ಉಪನ್ಯಾಸಗಳನ್ನು ನೀಡಲಿದ್ದಾರೆ. ಮುಖ್ಯವಾಗಿ ಇಎನ್‍ಟಿ ಶಸತ್ರಚಿಕಿತ್ಸಕರ ಸಂಘಟನೆಯ ಅಧ್ಯಕ್ಷ ಸತ್ಯಪ್ರಕಾಶ್, ರಾಜೀವಗಾಂಧಿ ವೈದ್ಯಕೀಯ ವಿವಿಯ ಸಚ್ಚಿದಾನಂದ ಮತ್ತಿತರರು ಮಾಹಿತಿ ನೀಡಲಿದ್ದಾರೆ. ಪ್ರಾಯೋಗಿಕವಾಗಿ ಯುವ ಶಸ್ತ್ರಚಿಕಿತ್ಸಕರಿಗೆ ತರಬೇತಿ ನೀಡುವ ಉದ್ದೇಶದಿಂದ ಈ ಸಮ್ಮೇಳನವನ್ನು ಆಯೋಜಿಸಲಾಗುತ್ತಿದ್ದು, ಆ ನಿಟ್ಟಿನಲ್ಲಿ ನಾಲ್ಕು ಪ್ರಾಯೋಗಿಕ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ. ಅಲ್ಲದೆ ಮೆಡಿಕೋ-ಲೀಗಲ್ ಪ್ಯಾನಲ್ ಕೂಡ ನಡೆಯಲಿದ್ದು, ಇದರಲ್ಲಿ ಖ್ಯಾತ ವೈದ್ಯರು, ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ನುರಿತ ವಕೀಲರು ಭಾಗವಹಿಸಿ ಇಂದಿನ ವೈದ್ಯಕೀಯ ವೃತ್ತಿಯಲ್ಲಿ ಕಾನೂನು ಅಂಶಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಡಾ.ಮೋಹನ್ ಅಪ್ಪಾಜಿ ವಿವರಿಸಿದರು.

ಗೋಷ್ಠಿಯಲ್ಲಿ ಹಾಜರಿದ್ದ ಇಎನ್‍ಟಿ ಶಸ್ತ್ರಚಿಕಿತ್ಸಕರ ಸಂಘಟನೆಯ ಕೊಡಗು ಜಿಲ್ಲಾ ಕಾರ್ಯದರ್ಶಿ ಡಾ. ಶ್ವೇತಾ ಅವರು  ಈ ಸಮ್ಮೇಳನಕ್ಕೆ ಸಮಾನಾಂತರವಾಗಿ ಸೆ.28ರಂದು ಶ್ರವಣ ಮತ್ತು ವಾಕ್ ಭಾಷಾ ತಜ್ಞರುಗಳಿಗಾಗಿ ಸಮ್ಮೇಳನ ನಡೆಯಲಿದೆ ಎಂದು ತಿಳಿಸಿದರು.
ವೃತ್ತಿ ಜೀವನದಲ್ಲಿ ಉತ್ತುಂಗಕ್ಕೇರಿ ಛಾಪು ಮೂಡಿಸಿರುವ ಖ್ಯಾತ ವೈದ್ಯರು ಮತ್ತು ಸ್ಥಳೀಯ ಕ್ರೀಡಾಪಟುಗಳನ್ನು ಸೆ.27ರಂದು ಸನ್ಮಾನಿಸಲಾಗುವುದು. ಜಿಲ್ಲೆಯ ಪ್ರಥಮ ಇಎನ್‍ಟಿ ತಜ್ಞ ಡಾ. ಸಿ.ಎಂ.ದೇವಯ್ಯ, ಕ್ರೀಡಾಪಟು ಅರ್ಜುನ್ ದೇವಯ್ಯ ಸೇರಿದಂತೆ ಹಲವು ಮಂದಿ ಸನ್ಮಾನ ಸ್ವೀಕರಿಸಲಿದ್ದಾರೆ ಎಂದು ಡಾ. ಅಚ್ಚಯ್ಯ ಅವರು ತಿಳಿಸಿದರು .
ಸಮ್ಮೇಳನದ ಕುರಿತ ಹೆಚ್ಚಿನ ಮಾಹಿತಿಗಾಗಿ ಡಾ. ಮೋಹನ್ ಅಪ್ಪಾಜಿ (9845471569) ಡಾ. ಶ್ವೇತಾ (9535659298) ಡಾ. ವಿನಯ್ ಎಸ್.ಆರ್. (9481500743) ಅವರನ್ನು ಸಂಪರ್ಕಿಸಬಹುದಾಗಿದೆ. ಸುದ್ದಿಗೋಷ್ಠಿಯಲ್ಲಿ ಡಾ. ಪಂಚಮ್ ಉಪಸ್ಥಿತರಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಭತ್ತದ ಗದ್ದೆಯಿಂದ ಅಡಿಕೆ ತೋಟ | ಮಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬಿಚ್ಚಿಟ್ಟ ಸಂಶೋಧನೆ
March 9, 2026
10:09 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 09-03-2026 | ಕರಾವಳಿ–ಮಲೆನಾಡಿನಲ್ಲಿ ಇಂದು ಸಂಜೆ ಗುಡುಗು ಮಳೆಯ ಸಾಧ್ಯತೆ | ಮಾರ್ಚ್ ಮಧ್ಯಭಾಗದಲ್ಲಿ ಮಳೆ ಚಟುವಟಿಕೆ ಹೆಚ್ಚಳ..?
March 9, 2026
2:16 PM
by: ಸಾಯಿಶೇಖರ್ ಕರಿಕಳ
ರೈತರಿಂದ ಉದ್ಯಮಿಗಳವರೆಗೆ : ಕೃಷಿ ಕ್ಷೇತ್ರಕ್ಕೆ ಸರ್ಕಾರದ ಹೊಸ ದೃಷ್ಟಿಕೋನ
March 9, 2026
7:00 AM
by: ದ ರೂರಲ್ ಮಿರರ್.ಕಾಂ
ಎಲೆಚುಕ್ಕಿ ರೋಗದಿಂದ ಅಡಿಕೆ ರೈತರಿಗೆ ಸಂಕಷ್ಟ | ಸಾಲ ಮರುಪಾವತಿ ಒಂದು ವರ್ಷ ಮುಂದೂಡುವ ಪ್ರಸ್ತಾವನೆ..!
March 9, 2026
6:34 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror