ಮಡಿಕೇರಿ : ಮಡಿಕೇರಿ ಆಕಾಶವಾಣಿಯು 1993ರ ಆಗಸ್ಟ್ 28ರಂದು 103.1 ಮೆಗಾ ಹಟ್ರ್ಸ್ ತರಂಗಾಂತರದಿಂದ ಸ್ಥಾಪನೆಯಾಗಿ ಇದೀಗ 26ನೇ ವರ್ಷವನ್ನು ಪೂರೈಸುತ್ತಿದೆ. ಸಮಾಜದ ಸರ್ವರಿಗೂ ಬೇಕಾಗಿರುವ ವಿಚಾರಗಳನ್ನು ಪ್ರಾರಂಭದಿಂದಲೂ ಬಿತ್ತರಿಸುತ್ತಿದೆ.
ಕೊಡಗು ಜಿಲ್ಲೆಯ ಪ್ರತಿಭೆಗಳ ಪರಿಚಯ, ಕೃಷಿಯ ಚಿತ್ರಣ ಹಾಗೂ ಸಾಧನೆ, ಮಹಿಳೆಯರ-ಮಕ್ಕಳ ಕಾರ್ಯಕ್ರಮಗಳಲ್ಲದೇ ಜನರಿಗೆ ತಾಜಾ ಮಾಹಿತಿ ನೀಡುವ ಕೊಡವ ಭಾಷೆಯ ಸುದ್ದಿ ಸಮಾಚಾರ,ಅರೆಭಾಷೆಯ ಸುದ್ದಿಜೊಂಪೆ,ಬ್ಯಾರಿ ಭಾಷೆಯ ಸುದ್ದಿಸಾರ-ಇವುಗಳ ಪ್ರಸಾರ, ನಿಧನದ ಸುದ್ದಿ, ಸರಕಾರದ ಇಲಾಖೆಗಳ, ಸಂಘ ಸಂಸ್ಥೆಗಳ ಅಭಿವೃದ್ಧಿ ಯೋಜನೆಗಳ ಪ್ರಚಾರವಲ್ಲದೇ, ಚಿಂತನ, ಚಿತ್ರಗೀತೆಗಳು, ನೇರ ರಸಪ್ರಶ್ನೆಗಳೊಂದಿಗೆ ಸಂವಾದ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚೆ, ಜಾನಪದ ಗೀತೆಗಳು, ಭಕ್ತಿಗೀತೆಗಳು, ಭಾವಗೀತೆಗಳು, ಹಿಂದಿ ಚಿತ್ರಗೀತೆಗಳು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಾರ್ತೆಗಳು, ದಿನವೂ ಶುಭನುಡಿ ಹೀಗೆ ಉಪಯುಕ್ತ ವಿಚಾರಗಳೊಂದಿಗೆ ಆಕಾಶವಾಣಿಯು ಈ ಭಾಗದ ಜನಪ್ರಿಯ ಮಾಧ್ಯಮವಾಗಿದೆ.
6 ಕಿಲೋ ವಾಟ್ಸ್ ಸಾಮಥ್ರ್ಯದಿಂದ ಶುರುವಾದ ಮಡಿಕೇರಿ ಆಕಾಶವಾಣಿಯು ಈಗ ತನ್ನ ಪ್ರಸಾರದ ಸಾಮಥ್ರ್ಯವನ್ನು 10 ಕಿಲೋ ವಾಟ್ಸ್ ಹೆಚ್ಚಿಸಿಕೊಂಡು ಪ್ರಸಾರದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಈ ಸಂದರ್ಭದಲ್ಲಿ ಆಕಾಶವಾಣಿ -ನಮ್ಮವಾಣಿ ರೂಪಕ ಬೆಳಗ್ಗೆ 9:10 ಮಧ್ಯಾಹ್ನ 1:30 ಹಾಗೂ ಸಂಜೆ 5 ಗಂಟೆಗೆ ಮಡಿಕೇರಿ ಕೇಂದ್ರದಿಂದ ಮೂಡಿಬಂತು ಎಂದು ಕಾರ್ಯಕ್ರಮ ನಿರ್ವಾಹಕರಾದ ಉಣ್ಣಿಕೃಷ್ಣನ್ ಮತ್ತು ವಿಜಯ್ ಅಂಗಡಿ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರೇಡಿಯೋ ಜಾಹೀರಾತು ಪ್ರತಿನಿಧಿ ಶೌಕತ್ ಹಾಗೂ ರೇಡಿಯೋ ಶ್ರೋತೃ ಭಾಗೀರಥಿ ಹುಲಿತಾಳ ಅವರನ್ನು ಸನ್ಮಾನಿಸಲಾಯಿತು.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…