ಮಡಿಕೇರಿ: ಮಡಿಕೇರಿ ದಸರಾ ಜನೋತ್ಸವ ಅಂಗವಾಗಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಸೆಪ್ಟಂಬರ್ 30 ರ ಸೋಮವಾರದಿಂದ ಅಕ್ಟೋಬರ್ 8 ರವರೆಗೆ ಜರುಗಲಿದೆ. ಈ ದಿನಗಳಲ್ಲಿ ಮಡಿಕೇರಿಯ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿತ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ, ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಕಲಾವಿದರು, ಕಲಾತಂಡಗಳು ತಮ್ಮ ಹೆಸರು, ಪ್ರದರ್ಶಿಸಲು ಇಚ್ಚಿಸುವ ಕಲಾಪ್ರಕಾರ, ಅನುಭವ, ತಂಡದಲ್ಲಿನ ಕಲಾವಿದರ ಸಂಖ್ಯೆ, ವಿಳಾಸ, ಸಂಪರ್ಕ ದೂರವಾಣಿ ಇತ್ಯಾದಿ ವಿವರಗಳೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು. ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅರ್ಜಿ ಸಲ್ಲಿಸಲು ಸೆಪ್ಟಂಬರ್ 22 ಕೊನೇ ದಿನಾಂಕವಾಗಿರುತ್ತದೆ. ಅನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಆರ್.ಬಿ.ರವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಬೇಕಾದ ವಿಳಾಸ: ಆರ್.ಬಿ.ರವಿ. ಅಧ್ಯಕ್ಷರು, ಸಾಂಸ್ಕೃತಿಕ ಸಮಿತಿ ಮಡಿಕೇರಿ ನಗರ ದಸರಾ ಜನೋತ್ಸವ, ದಸರಾ ಜನೋತ್ಸವ ಕಛೇರಿ, ನಗರಸಭೆ ಸಂಕೀರ್ಣ, ಮಡಿಕೇರಿ -571201 : ದಸರಾ ಸಾಂಸ್ಕೃತಿಕ ಸಮಿತಿ ಸಂಪರ್ಕ ದೂರವಾಣಿ – 8660306573. 9844060174
ಮುಂಗಾರು ಮತ್ತಷ್ಟು ದುರ್ಬಲಗೊಳ್ಳತ್ತಿದ್ದು, ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಆಗಸ್ಟ್ ತಿಂಗಳಲ್ಲಿ…
ದ ರೂರಲ್ ಮಿರರ್.ಕಾಂ ನಲ್ಲಿ "ಹೊಸರುಚಿ" ಯ ಮೂಲಕ ಹಲಸು ಅಡುಗೆಯ ಮೂಲಕ…
ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ವತಿಯಿಂದ…
ವಿಶ್ವದಲ್ಲಿ ಅಡಿಕೆ ಉತ್ಪಾದನೆ ಆಗುವ ಎಲ್ಲಾ ರಾಷ್ಟ್ರಗಳಲ್ಲಿ ಅದರ ಬಳಕೆಯೂ ಆಗುತ್ತಿದೆ.ಇದರೊಂದಿಗೆ ಈ…
ಪ್ಲಾಸ್ಟಿಕ್ ಮಾಲಿನ್ಯವು ಪರಿಸರ ವಿನಾಶದ ಅಂಶಗಳಲ್ಲಿ ಒಂದಾಗಿದೆ. ನಮ್ಮ ಸಾಗರಗಳು ಮತ್ತು ಕರಾವಳಿಗಳಲ್ಲಿ…
ವಿಯೆಟ್ನಾಂ 2030 ರ ವೇಳೆಗೆ ಕೃಷಿಯಲ್ಲಿ ಹೊರಸೂಸುವ ಮೀಥೇನ್ ಅನ್ನು 30% ರಷ್ಟು…