ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಯೂತ್ ರೆಡ್‍ಕ್ರಾಸ್ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವೈದ್ಯಕೀಯ ಕಾಲೇಜು ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಸಭಾ ಕಾರ್ಯಕ್ರಮ ನಡೆಯಿತು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲ ಡಾ.ವಿಶಾಲ್ ಕುಮಾರ್ ಅವರು ಮಾತನಾಡಿ ಹನಿಹನಿ ಕೂಡಿದರೆ ಹಳ್ಳವೆಂಬಂತೆ ಪ್ರಕೃತಿಯನ್ನು ಉಳಿಸುವಲ್ಲಿ ನಾವು ಮಾಡುವ ಸಣ್ಣ ಕಾರ್ಯವೇ ದೊಡ್ಡದಾಗಿ ಪರಿವರ್ತನೆಗೊಂಡು ಯಶಸ್ವಿಯಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಗಿಡ ನೆಡಬೇಕು ವ್ಯಾಸಂಗ ಮುಗಿಸಿ ತೆರಳುವಾಗ ಕಿರಿಯ ವಿದ್ಯಾರ್ಥಿಗಳಿಗೆ ಆ ಗಿಡಗಳನ್ನು ಪೋಷಣೆ ಮಾಡುವ ಕರ್ತವ್ಯವನ್ನು ವಹಿಸಬೇಕೆಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮಡಿಕೇರಿ, ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷರು ರವೀಂದ್ರ ರೈ ಅವರು ಮಾತನಾಡಿ ಪರಿಸರ ರಕ್ಷಣೆ ಎಂದರೆ ಕೇವಲ ಗಿಡವನ್ನು ನೆಡುವುದು ಮಾತ್ರವಲ್ಲದೆ ಆ ಗಿಡವನ್ನು ಮಾಲಿನ್ಯವಿಲ್ಲದಂತೆ ಸದಾ ಪೋಷಿಸುತ್ತಾ ಅದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರಬೇಕೆಂದು ತಿಳಿಸಿ ಯೂತ್ ರೆಡ್ ಕ್ರಾಸ್ ಘಟಕವು ಇನ್ನು ಹೆಚ್ಚಿನ ಸಮಾಜಮುಖಿ ಚಟುವಟಿಕೆ ನಡೆಸುವ ಜವಾಬ್ದಾರಿಯನ್ನು ಹೊಂದಿದೆ ಎಂದು ತಿಳಿಸಿದರು.
ಮಡಿಕೇರಿ, ಯೂತ್ ರೆಡ್ ಕ್ರಾಸ್‍ನ ಅಧ್ಯಕ್ಷರು ಧನಂಜಯ್ ಅವರು ಮಾತನಾಡಿ ಮಕ್ಕಳಂತೆ ಸಸಿಗಳನ್ನು ಕೂಡ ಸಾಕುತ್ತಿರುವ ಸಾಲು ಮರದ ತಿಮ್ಮಕರವರು ಪರಿಸರ ಸಂರಕ್ಷಣೆಗೆ ಇಂದು ಮಾದರಿಯಾಗಿದ್ದಾರೆ ಅವರಂತೆ ವಿದ್ಯಾರ್ಥಿಗಳು ಕೂಡ ಪರಿಸರ ಸಂರಕ್ಷಣೆಯನ್ನು ಮಾಡಲು ಪಣ ತೊಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಯೂತ್ ರೆಡ್‍ಕ್ರಾಸ್‍ನ ಉಪಾಧ್ಯಕ್ಷರು ಚಂದನಾ ಅವರು ಯೂತ್ ರೆಡ್ ಕ್ರಾಸ್ ಘಟಕದ ಕಾರ್ಯ ಚಟುವಟಿಕೆಯನ್ನು ವಿವರಿಸಿ ಪರಿಸರ ದಿನಾಚರಣೆಯ ಅಂಗವಾಗಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರಿಸರಕ್ಕೆ ಸಂಬಂಧಿಸಿದಂತೆ ಗಾಯನ ಹಾಡಿ ಕಾಲೇಜಿನ ಆವರಣವನ್ನು ಶುಚಿಗೊಳಿಸಲಾಯಿತು ನಂತರ ಗಣ್ಯರು ಸೇರಿದಂತೆ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮಕ್ಕೆ ಎಚ್‍ಡಿಎಫ್‍ಸಿ ಬ್ಯಾಂಕ್ ಮಡಿಕೇರಿ ಶಾಖೆ ವತಿಯಿಂದ ಬ್ಯಾಂಕಿನ ವ್ಯವಸ್ಥಾಪಕರು ಅಶೋಕ್ ಅವರು 40 ಡಸ್ಟ್ ಬಿನ್ ಮತ್ತು 250 ಟೀ ಶರ್ಟ್‍ಗಳನ್ನು ಸಂಸ್ಥೆಗೆ ಒದಗಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ವೃಂದದವರು, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಯೂತ್ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಡಾ. ವೀಣಾ, ಮತ್ತು ಘಟಕದ ಸ್ವಯಂ ಸೇವಕರು, ಎಂಬಿಬಿಎಸ್ ವಿದ್ಯಾರ್ಥಿಗಳು ಹಾಗೂ ಇತರರು ಇದ್ದರು.ವಿದ್ಯಾರ್ಥಿಗಳಾದ ಅನುಶ್ರೀ ಅವರು ವಂದಿಸಿದರು, ರಾಘವೇಂದ್ರ ನಿರೂಪಿಸಿದರು.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…