ದೇಲಂಪಾಡಿ: ದೇಲಂಪಾಡಿ ಗ್ರಾಮದ ಮಣಿಯೂರು ಶ್ರೀ ಶಾಸ್ತಾರ ದೇವಸ್ಥಾನದ ದೇವರ ಗರ್ಭಗುಡಿಯ ಶಿಲನ್ಯಾಸ ಕಾರ್ಯಕ್ರಮವು ಇತ್ತೀಚಿಗೆ ನಡೆಯಿತು. ವೇದಮೂರ್ತಿ ಬ್ರಹ್ಮಶ್ರೀ ವಾಸುದೇವ ತಂತ್ರಿ ಹಾಗೂ ಶಿಲ್ಪಿ ಬೆದ್ರಡ್ಕ ರಮೇಶ್ ಕಾರಂತರ ನೇತೃತ್ವದಲ್ಲಿ ದೇವರ ಗರ್ಭಗುಡಿಯ ಶಿಲನ್ಯಾಸ ನೆರವೇರಿತು.
ಪೂಜಾ ವಿಧಿವಿಧಾನಗಳಿಗೆ ಬ್ರಹ್ಮಶ್ರೀ ಶ್ರೀಧರ ತಂತ್ರಿ ಅವರೊಂದಿಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ತ್ರಿವಿಕ್ರಮ ಮನೋಳಿತ್ತಾಯ ಸಹಕರಿಸಿದರು. ಭೂಮಿ ಪೂಜೆ, ಬ್ರಹ್ಮರಕ್ಷಸು , ನಾಗಬ್ರಹ್ಮನ ಸ್ಥಾನ ಬಾಲಾಲಯಕ್ಕೆ ಸ್ಥಳಾಂತರ ಹಾಗೂ ಇತರ ದೇವತಾ ಕಾರ್ಯಕ್ರಮಗಳು ನಡೆಯಿತು. ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ದೇವಸ್ಥಾನದ ಮೋಕ್ತೆಸರರಾದ ಚಿಕ್ಕಪ್ಪ ನ್ಯಾಕ್, ಮಣಿಯೂರು ಶ್ರೀ ಶಾಸ್ತಾರ ಜೀರ್ಣೋದ್ಧಾರ ಸಮಿತಿ ದೇಲಂಪಾಡಿಯ ಕಾರ್ಯಾಧ್ಯಕ್ಷ ಸದಾಶಿವ ರೈ ಬೆಳ್ಳಿಪ್ಪಾಡಿ, ಖಜಾಂಜಿ ಗೋಪಾಲಕೃಷ್ಣ ಕುಂಜತ್ತಾಯ, ಜೀರ್ಣೋದ್ಧಾರ ಸಮಿತಿ ಸರ್ವ ಸದಸ್ಯರು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.