ಸುಳ್ಯ: ಮನೆ ಮನೆ ಇಂಗು ಗುಂಡಿ ಅಭಿಯಾನ ಮತ್ತೆ ಆರಂಭಗೊಂಡಿದೆ. ಸ್ನೇಹ ಶಿಕ್ಷಣ ಸಂಸ್ಥೆಯ ಸಂಚಾಲಕ ಡಾ.ಚಂದ್ರಶೇಖರ ದಾಮ್ಲೆ ನೇತೃತ್ವದಲ್ಲಿ ಬುಧವಾರದಿಂದ ಮತ್ತೆ ಅಭಿಯಾನ ಆರಂಭವಾಗಿದೆ.
ಏನೆಕಲ್ಲು ಪ್ರೌಢಶಾಲೆಯಲ್ಲಿ ಮನೆ ಮನೆ ಇಂಗು ಗುಂಡಿ ಅಭಿಯಾನ ಅಭಿಯಾನ ಯಶಸ್ವಿಯಾಗಿ ನಡೆಯಿತು. ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು ಹಾಗೂ 60 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸರಕಾರಿ ಪ್ರೌಢಶಾಲೆ ಪಂಜದಲ್ಲಿ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರ ಸಹಕಾರದಿಂದ “ಜಲಾಮೃತ ಮನೆ ಮನೆ ಇಂಗು ಗುಂಡಿ ಅಭಿಯಾನದ” ಕಾರ್ಯಕ್ರಮವು ಯಶಸ್ವಿಯಾಗಿ ಜರಗಿತು. ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದರು.
ಮಧ್ಯಾಹ್ನ ಎಡಮಂಗಲದ ಸರಕಾರಿ ಪ್ರೌಢಶಾಲೆಯಲ್ಲಿ “ಮನೆ ಮನೆ ಇಂಗುಗುಂಡಿ ಅಭಿಯಾನ” ಕಾರ್ಯಕ್ರಮವು ತುಂಬ ಯಶಸ್ವಿಯಾಗಿ ಜರಗಿತು. ಶಿಕ್ಷಕರ ಸಹಕಾರ ಮತ್ತು ಮಕ್ಕಳ ಉತ್ಸಾಹ ಚೆನ್ನಾಗಿತ್ತು. 70 ವಿದ್ಯಾರ್ಥಿಗಳು ಭಾಗವಹಿಸಿದರು. ಪಂಜದಲ್ಲಿ 90 ವಿದ್ಯಾರ್ಥಿಗಳಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel