ಒಂದು ಕೋರ್ಟ್ ನಲ್ಲಿ ಮಾರ್ಟಿನಾ ನವ್ರಾಟಿಲೋವಾ , ಮೋನಿಕಾ ಸೆಲೆಸ್, ಮಾರ್ಟಿನಾ ಹಿಂಗಿಸ್ ( ಬೇರೆ ಬೇರೆ ಮ್ಯಾಚ್) ಆಡುತ್ತಿದ್ದರೆ ಎದುರಾಳಿ ಯಾಗಿರುತಿದ್ದ ಈಕೆಯ ಆಟವನ್ನು ಕಣ್ಣು ಮಿಟುಕಿಸದೇ ನೋಡುತ್ತಿದ್ದು ನಿನ್ನೆ ಮೊನ್ನೆ ನಡೆದಂತಿದೆ. ಕ್ರಿಕೆಟ್ ಒಂದೇ ಆಟವೆಂದು ತಿಳಿದಿದ್ದ ನಮಗೆ ಟೆನ್ನಿಸ್ ಎಂಬ ಆಟ ವೊಂದಿದೆ ಎಂದು ತನ್ನ ಆಕರ್ಷಕ ಶೈಲಿ ಯಿಂದಲೇ ಪರಿಚಯಿಸಿದಾಕೆ.
ಚೆಂಡು ಒಂದು ಕೋರ್ಟ್ ನಿಂದ ಇನ್ನೊಂದು ಕೋರ್ಟ್ ಗೆ ಪಾಸ್ ಆಗುತ್ತಿದ್ದರೆ ನೋಡು ವುದೇ ಚೆಂದ. 5 ಅಡಿ 9 ಇಂಚು ಎತ್ತರದ ನಿಲುವಿನ ಕೆಂಚು ಕೂದಲಿನ ಬೆಡಗಿಯ ಆಟವನ್ನು ನೋಡಲೆಂದೇ ಟಿ.ವಿ ಮುಂದೆ ಕುಳಿತುಕೊಳ್ಳುತ್ತಿದ್ದ ಕಾಲವದು. ಆಕೆ ಜರ್ಮನಿಯ ಲಾಸ್ ವೇಗಸ್ ನಲ್ಲಿ 1969 ಜೂನ್14 ರಂದು ಜನಿಸಿದವಳು. ಈಗ 50 ರ ಹರಯದಲ್ಲೂ ಅದೇ ಜೀವನೋತ್ಸಾಹದಲ್ಲಿ ಕಂಡು ಬರುತ್ತಿರುವ ನಮ್ಮ ನಿಮ್ಮೆಲ್ಲರ ನೆಚ್ಚಿನ ಟೆನಿಸ್ ಆಟಗಾರ್ತಿ ಸ್ಟೆಫಿ ಗ್ರಾಫ್. ತಂದೆ ಪೀಟರ್ ಗ್ರಾಪ್, ತಾಯಿ ಹೇಡಿ ಗ್ರಾಪ್. ಪತಿ ಖ್ಯಾತ ಟೆನಿಸ್ ಆಟಗಾರ ಆ್ಯಂಡ್ರೆ ಅಗಾಸಿ. ಇಬ್ಬರು ಮಕ್ಕಳೊಂದಿಗೆ ತುಂಬು ಜೀವನ ನಡೆಸುತ್ತಿರುವವಳು ಸ್ಟೆಫಿ .
ಆಕೆ ಇದ್ದದ್ದೇ ಹಾಗೆ. ಟೆನ್ನಿಸ್ ನ್ನೇ ಉಸಿರಾಗಿಸಿಕೊಂಡವಳು. ಆಗಿನ್ನೂ ಸರಿಯಾಗಿ ನಡೆಯಲು ಶುರು ಮಾಡಿದ್ದಷ್ಟೇ, ಕೈಯಲ್ಲಿ ಬ್ಯಾಟ್ ಬಾಲ್ ಹಿಡಿಯಲು ತೋರುತ್ತಿದ್ದ ಉತ್ಸಾಹ ವನ್ನು ಕಂಡು ಅಪ್ಪನೇ ಕೋಚಿಂಗ್ ಕೊಡಲು ಆರಂಭಿಸಿದರು. ಮಗಳ ಉತ್ಸಾಹ ಕ್ಕೆ ಹೆತ್ತವರು ಪ್ರೋತ್ಸಾಹ ನೀಡಿದರು. ಆಡುತ್ತಾ ಆಡುತ್ತಾ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಾ ಯಶಸ್ಸಿನ ತುತ್ತ ತುದಿಗೆ ಏರಿದವಳು. ಜೀವನ ಶ್ರೇಷ್ಠ ಸಾಧನೆ ಯನ್ನು ಮಾಡುತ್ತಾ ಯುವ ಆಟಗಾರರಿಗೆ ಆದರ್ಶ ಪ್ರಾಯಳಾಗಿದ್ದಾಳೆ. ಆಕೆ ಮೂರು ವಿಧದ ಕೋರ್ಟ್ ಗಳಲ್ಲೂ ಲೀಲಾಜಾಲವಾಗಿ ಆಡುವ ಪರಿಣತಳು. ಒಂದೇ ಕ್ಯಾಲೆಂಡರ್ ವರ್ಷದಲ್ಲಿ ೪ ಗ್ರ್ಯಾಂಡ್ ಸ್ಲ್ಯಾಮ್ ಗಳನ್ನು, ಒಲಿಂಪಿಕ್ ಪದಕವನ್ನೂ ಪಡೆದು ಗೋಲ್ಡ್ ನ್ ಸ್ಯಾಮ್ ಅವಾರ್ಡ್ ಪಡೆದ ಹೆಗ್ಗಳಿಕೆ ಈಕೆಯದು. ನಿರಂತರ ವಾಗಿ 377 ವಾರಗಳ ಕಾಲ ತನ್ನ ನಂಬರ್ 1 ಶ್ರೇಯಾಂಕವನ್ನು ಕಾಯ್ದುಕೊಂಡ ಹೆಗ್ಗಳಿಕೆ ಸ್ಟೆಫಿಯದ್ದು.
ತನ್ನ ವ್ರತ್ತಿ ಜೀವನದ( 1987ರಿಂದ 1999 ರವರೆಗೆ) 29 ಬಾರಿ ಫೈನಲ್ ಪ್ರವೇಶಿಸಿ 22 ಬಾರಿ ಪ್ರಶಸ್ತಿ ತನ್ನದಾಗಿಸಿ ಕೊಂಡವಳು. ಟೆನಿಸ್ ಲೋಕದ ಹಲವು ದೈತ್ಯ ಪ್ರತಿಭೆಗಳಲ್ಲಿ ತನ್ನದೇ ಛಾಪು ಮೂಡಿಸಿ20 ನೇ ಶತಮಾನದ ಅತ್ಯುತ್ತಮ ಮಹಿಳಾ ಟೆನ್ನಿಸ್ ಆಟಗಾರ್ತಿ ಎಂಬ ಮನ್ನಣೆಗೆ ಪಾತ್ರರಾದ ವಳು. 1999 ರಲ್ಲಿ ನಿವೃತ್ತಿ ಯಾಗುವ ಸಂದರ್ಭದಲ್ಲಿ 3 ನೇ ಶ್ರೇಯಾಂಕಿತಳಾಗಿದ್ದಳು.
ಗೆದ್ದಾಗ ಬೀಗದೆ, ಸೋತಾಗ ನಿರಾಶಳಾಗದೆ ಎರಡನ್ನೂ ಸಮಾನ ಮನಸ್ಥಿತಿ ಯಲ್ಲಿ ಸ್ವೀಕರಿಸಿದ ಕ್ರೀಡಾ ಮನೋಭಾವ ದ ಆಟಗಾರ್ತಿ. ನಿವೃತ್ತಿ ಯ ನಂತರ ಪತಿ ಅಗಾಸ್ಸಿ ಯವರೊಂದಿಗೆ ಜೊತೆಯಾಗಿ ಹಲವು ಸೇವಾ ಸಂಸ್ಥೆ ಗಳನ್ನು ನಡೆಸುತ್ತಾ ಅನಾಥ, ಅನಾರೋಗ್ಯ ಪೀಡಿತರ ಕಾಳಜಿ ವಹಿಸುತ್ತಾ ತಮ್ಮ ಜೀವನ ವನ್ನು ಮುಡಿಪಾಗಿಟ್ಟಿದ್ದಾರೆ.
ಸ್ಟೆಫಿ ಯ ಬಗ್ಗೆ ಅಪಾರವಾದ ಪ್ರೀತಿ ಅಂದು , ಇಂದು , ಎಂದೆಂದಿಗೂ ಆಕೆಯ ಅಭಿಮಾನಿಗಳಿಗೆ ಇದೆ.