ಮಂಗಳೂರು/ಸುಳ್ಯ: ಕ್ಯಾರ್ ಚಂಡಮಾರುತದ ಬಳಿಕ ಶಾಂತವಾಗಿದ್ದ ಅರಬೀ ಸಮುದ್ರ ಈಗ ಮತ್ತೆ ಇನ್ನೊಂದು ಚಂಡಮಾರುತಕ್ಕೆ ಸಿದ್ಧವಾಗುತ್ತಿದೆ. ಇದು “ಮಹಾ” ಚಂಡಮಾರುತ. ಇದು ಅರಬೀ ಸಮುದ್ರದಲ್ಲಿ ಏಳುತ್ತಿರುವ 4 ನೇ ಚಂಡಮಾರುತ.
ಸದ್ಯ ಅರಬೀ ಸಮುದ್ರದ ಮಧ್ಯ ಭಾಗದಲ್ಲಿ ವಾಯು ಭಾರ ಕುಸಿತ ಕಂಡುಬಂದಿದೆ. ಇಂದು ಸಂಜೆಯ ವೇಳೆಗೆ ಇದರ ತೀವ್ರತೆ ತಿಳಿಯಲಿದೆ. ಈಗಿನ ನಿರೀಕ್ಷೆ ಪ್ರಕಾರ ಲಕ್ಷದ್ವೀಪದ ಕಡೆಗೆ ಈ ಚಂಡಮಾರುತ ಸಾಗುವ ಲಕ್ಷಣ ಇದೆ. ಈ ಹಿಂದೆ ಉಂಟಾದ ಚಂಡಮಾರುತವು ಕರಾವಳಿ ತೀರದಲ್ಲಿ ಭಾರೀ ಮಳೆಗೆ ಕಾರಣವಾಗಿತ್ತು. ಅದೇ ಸಂದರ್ಭ ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಕಾರಣದಿಂದ ಕರಾವಳಿ ತೀರವು ಅಪಾಯದಿಂದ ಪಾರಾಗಿತ್ತು. ಆದರೆ ಒಳನಾಡು ಪ್ರದೇಶದಲ್ಲಿ ಭಾರೀ ಮಳೆಯಾಯಿತು. ಇದೀಗ ಮತ್ತೆ ಅರಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಮುಂದಿನ 48 ಗಂಟೆಗಳಲ್ಲಿ ‘ಮಹಾ’ ಚಂಡಮಾರುತ ತೀವ್ರಗೊಳ್ಳುವ ನಿರೀಕ್ಷೆ ಇದೆ. ಮುಂದಿನ 24 ಗಂಟೆಗಳಲ್ಲಿ ತಮಿಳುನಾಡು ಕರ್ನಾಟಕ, ಮತ್ತು ಕೇರಳಗಳಲ್ಲಿ ಮಳೆಯಾಗಲಿದೆ. ತಮಿಳುನಾಡು, ಕೇರಳ, ಮತ್ತು ಕರ್ನಾಟಕ ಕರಾವಳಿಯುದ್ದಕ್ಕೂ ಸಮುದ್ರದಲ್ಲಿ ಅಬ್ಬರ ಕಾಣಬಹುದು ಎಂದು ಹವಾಮಾನ ವಿಶ್ಲೇಷಣೆಯಲ್ಲಿ ನಿರೀಕ್ಷಿಸಲಾಗಿದೆ.
ಅ.11ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದ್ದರೂ, ಅ.14–16ರಿಂದ ಹಿಂಗಾರು…
ಕೃಷಿ ಸೇರಿದಂತೆ ಕುಟುಂಬದ ಬದುಕಿನಲ್ಲಿ ಕಾಣದ ಶ್ರಮವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದು ಸಂಬಂಧಗಳನ್ನು…
ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ರಾಜ್ಯ…
ಗುಜರಾತ್‌ನ ನೀರಿನ ಆಡಳಿತದ ಅನುಭವಗಳನ್ನು ಆಧರಿಸಿದ ‘ಗುಜರಾತ್‌ನಿಂದ ಭಾರತಕ್ಕೆ ಜಗತ್ತಿಗೆ ನೀರಿನ ಪಾಠಗಳು’…
ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಉಪಬೆಳೆಯಾಗಿ ಕೋಕೋಗೆ ಉತ್ತಮ ಅವಕಾಶಗಳಿದ್ದರೂ ಬೆಲೆ ಏರಿಳಿತ,…
ಅಡಿಕೆ ಕ್ಷೇತ್ರದಲ್ಲಿ ಉತ್ಪಾದನೆ, ದಾಸ್ತಾನು, ಬೇಡಿಕೆ, ಆಮದು, ಮಾರುಕಟ್ಟೆ ಮತ್ತು ಉತ್ಪಾದನಾ ವೆಚ್ಚದ…