ಡಾ.ಆದಿತ್ಯ ಚಣಿಲ
BHMS(Intern)
ಮಧುಮೇಹ(ಡಯಾಬಿಟಿಸ್) ಎಂದರೆ ಅದೇನೋ ಜನರಲ್ಲಿ ತಳಮಳ. ವೈದ್ಯರ ಬಳಿಗೆ ಬಂದಾಗ ಕೇಳುವುದುಂಟು “ಡಾಕ್ಟ್ರೆ ಪತ್ಯ ಏನಾದ್ರು ಮಾಡಬೇಕಾ ” ಅಂತ.
ಮಧುಮೇಹದಲ್ಲಿ 3 ಮುಖ್ಯ ಪ್ರಕಾರಗಳು
1. ಇನ್ಸುಲಿನ್ ಅವಲಂಬಿತ ಮಧುಮೇಹ – ಇದು ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತದೆ
2.ಇನ್ಸುಲೈನ್ ಅವಲಂಬಿತವಲ್ಲದ ಮಧುಮೇಹ – ಇದು ಹೆಚ್ಚಾಗಿ ವಯಸ್ಕರಲ್ಲಿ ಕಂಡುಬರುತ್ತದೆ
3. ಗರ್ಭಿಣಿಯರಲ್ಲಿ ಕಂಡುಬರುವ ಮಧುಮೇಹ
ಏನಿದರ ಲಕ್ಷಣ?
ಬಾಯಿ ಒಣಗುವಿಕೆ , ಅತಿಯಾದ ಬಾಯಾರಿಕೆ , ಅತಿಯಾದ ಹಸಿವು, ಹೆಚ್ಚು ಬಾರಿ ಮೂತ್ರವಿಸರ್ಜನೆ, ಕಾರಣವಿಲ್ಲದೆ ತೂಕದಲ್ಲಿ ಇಳಿಕೆ , ತಲೆಸುತ್ತುವುದು
ತಲೆನೋವು , ಕಣ್ಣು ಬಲೆಬಂದಂತಾಗುವುದು ಇತ್ಯಾದಿ
ನಿಯಂತ್ರಣ ಹೇಗೆ ?
ನಿಯಂತ್ರಣ ಮುಖ್ಯವಾಗಿ 3 ರೀತಿಯಲ್ಲಿ
ಔಷಧಿ ಮೂಲಕ , ಆಹಾರದಲ್ಲಿ ಕೊಂಚ ಬದಲಾವಣೆ , ಆಹಾರದ ಬದಲಾವಣೆ ಮತ್ತು ವ್ಯಾಯಾಮ
ಔಷಧಿ ಮೂಲಕ ಹೇಗೆ ?
ಹೋಮಿಯೋಪಥಿ- ಹೋಮಿಯೋಪಥಿಯಲ್ಲಿ ವ್ಯಕ್ತಿಗನುಸಾರವಾದ ಔಷಧಿಯನ್ನು ಕೊಡುತ್ತಾರೆ.ಪ್ರತಿವ್ಯಕ್ತಿಯಲ್ಲಿನ ಗುಣಲಕ್ಷಣ,ದೇಹ ಪ್ರಕೃತಿ ,ಆಹಾರ ಪದ್ಧತಿ ,ರೋಗ ಲಕ್ಷಣಗಳು ,ಮುಂತಾದವುಗಳನ್ನು ಪರಿಗಣಿಸಿ ಔಷಧಿಯನ್ನುನೀಡಲಾಗುತ್ತದೆ.
ಆಹಾರದಲ್ಲಿ ಕೊಂಚ ಬದಲಾವಣೆ : – (Breaking the meal) ಒಂದೇ ಸಮನೆ ಆಹಾರವನ್ನು ತಿನ್ನುವ ಬದಲಾಗಿ ಆಹಾರ ಸೇವನೆಯನ್ನು 3 ಬಾರಿ ಬದಲಾಗಿ 5 ಬಾರಿ ಸೇವಿಸುವುದು. ಬೆಳಗ್ಗಿನ ಚಹಾದ ಬಳಿಕ ಮತ್ತೆ ಸುಮಾರು 2 ಗಂಟೆಯ ಬಳಿಕ ಕೊಂಚ ಆಹಾರ ತೆಗೆದುಕೊಳ್ಳುವುದು. ಮದ್ಯಾಹ್ನದ ಊಟದಲ್ಲಿ ಹೆಚ್ಚಿನ ಪ್ರಮಾಣದ ತರಕಾರಿ ಹಾಗೂ ಕಡಿಮೆ ಪ್ರಮಾಣದಲ್ಲಿ ಅನ್ನ ಮತ್ತು ಊಟದ ಬಳಿಕ ಹಣ್ಣಿನ ಸೇವನೆ. ಕುಡಿಯುವ ನೀರಿನ ಪ್ರಮಾಣದಲ್ಲಿ ಕೊಂಚ ಏರಿಕೆ
ಎಣ್ಣೆಯ ಪದಾರ್ಥಗಳನ್ನು ಕಡಿಮೆ ಸೇವಿಸುವುದು. ಸಂಜೆ ಪುನಃ ಆಹಾರ ಸೇವನೆ. ನಂತರ ರಾತ್ರಿ ಆಹಾರ ಸೇವನೆ.
ಏನೆಲ್ಲ ಮಾಡಬಾರದು:
ಸಿಹಿಯಾದ ಪದಾರ್ಥದ ಸೇವನೆ, ಬೇಕರಿಯಲ್ಲಿ ತಯಾರಾದ ಪದಾರ್ಥಗಳ ಸೇವನೆ, ಐಸ್ ಕ್ರೀಮ್ ,ಮದ್ಯ ,ಶಕ್ತಿಗೆ ಬೇಕಾಗುವಂತಹ ಪದಾರ್ಥಗಳು ಸೋಡಾ ಇಂತಹುಗಳನ್ನು ನಿಲ್ಲಿಸಬೇಕು. ಕುಳಿತುಕೊಂಡಲ್ಲೆ ಕಾಲಹರಣ ಮಾಡಬಾರದು. ಕ್ರಿಯಾಶೀಲವಾಗಿರಬೇಕು.
ಏನೆಲ್ಲಾ ಮಾಡಬೇಕು:
ಹಣ್ಣುಗಳಲ್ಲಿ -ಮಾವು ,ಬಾಳೆಹಣ್ಣು,ಪಪ್ಪಾಯಿ,ಆಪಲ್,ಕಿತ್ತಳೆ,ಪಿಯರ್ ಹಣ್ಣು, ಪೇರಳೆ,ಚಿಕ್ಕು ಇತ್ಯಾದಿ ಸೇವನೆ. ದ್ವಿದಳ ಧಾನ್ಯಗಳು ಮಧುಮೇಹ ನಿಯಂತ್ರಣದೊಡನೆ ರಕ್ತದೊತ್ತಡವನ್ನು ನಿಯಂತ್ರಣ ಮಾಡುತ್ತದೆ. ಹಾಲು ಮತ್ತು ಹಾಲಿನ ಉತ್ಪನ್ನಗಳಾದ ಮೊಸರು ತುಪ್ಪ ಇತ್ಯಾದಿ
ಸಿರಿದಾನ್ಯಗಳ ಬಳಕೆ ಮುಖ್ಯಸಿರಿ ಧನ್ಯಗಳಾದ ಜೋಳ,ರಾಗಿ,ಸಜ್ಜೆ,ಬರಗು,ಅರ್ಕ,ಕೊರಲು,ನವಣೆ,ಸಾಮೆ ಇತ್ಯಾದಿ
ಕೂಸುಗಡ್ಡೆ ಬಟಾಣಿ ಪಾಲಕ್ ಹಸಿರು ತರಕಾರಿಗಳು,ನೆಲ್ಲಿಕಾಯಿ,ಹಾಗಲಕಾಯಿ, ಮೀನು,ಮೊಟ್ಟೆ ಇತ್ಯಾದಿಗಳನ್ನು ಸೇವಿಸಬಹುದು.
ಅಡಿಗೆ ಪದಾರ್ಥಗಳಾದ ಅರಶಿನ ,ಬೆಳ್ಳುಳ್ಳಿ,ಲವಂಗ,ದಾಲ್ಚಿನ್ನಿ ಇತ್ಯಾದಿ ಒಳ್ಳೆಯದು.
ಕೊಂಚ ವ್ಯಾಯಾಮ:
ದಂಡ ಹೊಡೆಯುವುದು, ನಡೆದಾಟ, ಏರೋಬಿಟ್ ವ್ಯಾಯಾಮ ಇತ್ಯಾದಿಗಳು .
ಸದಾ ನೆನಪಿಡಬೇಕಾದ ಅಂಶ :
1.ನಿಮ್ಮ ಬ್ಲಡ್ ಶೂಗರ್ ಲೆವೆಲ್ ಮೇಲೆ ಉಪಹಾರದ ಮುಂಚೆ 100 ರಿಂದ ಕೆಳಗೆ ಉಪಹಾರದ ನಂತರ 140 ರ ಕೆಳಗೆ ಇರಬೇಕು.
2.ಬೆಳಗಿನ ವ್ಯಾಯಾಮ
3.ಬಾಯಿಯ ವಸಡಿನ ಆರೋಗ್ಯ
4.ತೆಂಗಿನ ಎಣ್ಣೆಯ ಬಳಕೆ
5. ಪ್ರತಿನಿತ್ಯ ಮೆಡಿಸಿನ್ ಸೇವನೆ
6.ಪಾದಕ್ಕೆ ಗಾಯವನ್ನು ತಪ್ಪಿಸುವುದು
7.ಮನೆಯಲ್ಲಿ ತಯಾರಾದ ಊಟ ಆಹಾರ ಪದಾರ್ಥ ಸೇವನೆ
8.ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೇವನೆ
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…