“ಮನೆಗೊಂದು ಇಂಗುಗುಂಡಿ” ಅಭಿಯಾನಕ್ಕೆ ಚಾಲನೆ : ಸುಳ್ಯನ್ಯೂಸ್.ಕಾಂ ನಿಂದ ಸಸಿ ಕೊಡುಗೆ

July 11, 2019
8:30 AM

ಸುಳ್ಯ: ಜಲಸಂರಕ್ಷಣೆಗಾಗಿ   ಮನೆಗೊಂದು  ಇಂಗು ಗುಂಡಿ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ಸುಳ್ಯದ ಗಾಂಧಿನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆಸಲಾಯಿತು.

Advertisement
Advertisement
Advertisement

ಸುಳ್ಯದ ಸ್ನೇಹ ಶಾಲೆ ನೇತೃತ್ವದಲ್ಲಿ ಸುಳ್ಯ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳ ಮೂಲಕ ಸಣ್ಣ ಸಣ್ಣ ಇಂಗುಗುಂಡಿ ಹಾಗೂ ಮಕ್ಕಳಿಗೆ ನೀರಿಂಗಿಸುವಿಕೆಯ ಮಹತ್ವವನ್ನು ಸಾರುವ ಅಭಿಯಾನ ಉದ್ಘಾಟನೆಗೊಂಡಿತು. ಅಭಿಯಾನದ ಬಗ್ಗೆ ಮಾತನಾಡಿದ ಸ್ನೇಹ ಶಿಕ್ಷಣ ಸಂಸ್ಥೆಯ ಸಂಚಾಲಕ ಚಂದ್ರಶೇಖರ ದಾಮ್ಲೆ,  ತಮ್ಮ ತಮ್ಮ ಮನೆಗಳ ಹಿತ್ತಲಿನಲ್ಲಿ ಎರಡು ಅಡಿ ಉದ್ದ, ಅಗಲ ಮತ್ತು ಆಳದ ಇಂಗು ಗುಂಡಿಗಳನ್ನು ಮಾಡುವಂತೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ 125 ವಿದ್ಯಾರ್ಥಿಗಳು ಇಂಗುಗುಂಡಿ ಮಾಡುವ ಬಗ್ಗೆ ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ಎಸ್. ಪಿ. ಮಾತಾಡಿ ಮಕ್ಕಳು ಇಂತಹ ಅಭಿಯಾನದಲ್ಲಿ ಪಾಲ್ಗೊಳ್ಳುವ ಮಹತ್ವವನ್ನು ಹೇಳಿದರು. ಶಾಲಾ ಅಭಿವೃದ್ಧಿ ಮಂಡಲಿ ಸದಸ್ಯ ಕೆ.ಆರ್. ಮಹಮ್ಮದ್ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ  ನಳಿನಿ ಅವರು ನೀರಿಂಗಿಸುವಿಕೆಯ ಅಗತ್ಯವನ್ನು ಹೇಳಿದರು.

ಕಾರ್ಯಕ್ರಮದ ಬಳಿಕ ಸುಳ್ಯನ್ಯೂಸ್.ಕಾಂ ವತಿಯಿಂದ ಶಾಲೆಗೊಂದು ಹಣ್ಣಿನ ಗಿಡ ಎಂಬ ಉದ್ದೇಶದಿಂದ ಎರಡು ಹಣ್ಣಿನ ಗಿಡವನ್ನು  ಸ್ನೇಹ ಶಿಕ್ಷಣ ಸಂಸ್ಥೆಯ ಸಂಚಾಲಕ ಚಂದ್ರಶೇಖರ ದಾಮ್ಲೆ ವಿತರಿಸಿದರು.

Advertisement

 

Advertisement

 

ಗಾಂಧಿನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಜಲಾಮೃತ ಕಾರ್ಯಕ್ರಮ ಅರ್ಥಪೂರ್ಣವಾಗಿತ್ತು. ಮಕ್ಕಳ ಮುಖದಲ್ಲಿನ ಮಂದಹಾಸ, ಇಂಗುಗುಂಡಿ ಮಾಡುವತ್ತ ಮಾಡಿದ ಮನಸ್ಸಿನ ಪ್ರತೀಕವೆಂಬಂತೆ ತೋರುತ್ತಿತ್ತು.  ಸರಕಾರಿ ಶಾಲಾ ಮಕ್ಕಳು ಈ ಕಾರ್ಯದಲ್ಲಿ ಸಹಕರಿಸುವ ಭರವಸೆಯಿದೆ. – ಚಂದ್ರಶೇಖರ ದಾಮ್ಲೆ 

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜಾಗತಿಕ ತಾಪಮಾನ ಏರಿಕೆ | ಪಶ್ಚಿಮ ಘಟ್ಟಗಳು ಹೇಗೆ ಬದಲಾಗಿವೆ..? | ಕೃಷಿ ಉಳಿವಿಗೆ ಏನು ಮಾಡಬೇಕು..? | 2025 ರಲ್ಲಿ ಏನು ಮಾಡಬಹುದು..?
January 2, 2025
7:23 AM
by: ಮಹೇಶ್ ಪುಚ್ಚಪ್ಪಾಡಿ
ಅಡಿಕೆಯ ಮೇಲೆ ಕ್ಯಾನ್ಸರ್‌ ಗುಮ್ಮ | 20 ವರ್ಷಗಳಿಂದ ಏನೇನಾಯ್ತು..? | ಮುಂದೇನು ಮಾಡಬಹುದು..?
November 20, 2024
11:27 AM
by: ವಿಶೇಷ ಪ್ರತಿನಿಧಿ
ಬೆಳಕಿನ ಹಬ್ಬ ದೀಪಾವಳಿ | ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಹಣತೆ | ಗ್ರಾಹಕರ ಮನಸೆಳೆಯುತ್ತಿರುವ ಮಣ್ಣಿನ ಹಣತೆ |
October 31, 2024
7:14 AM
by: The Rural Mirror ಸುದ್ದಿಜಾಲ
ಅನಾರೋಗ್ಯದಿಂದ ಬಳಲುತ್ತಿರುವ ಕುಟುಂಬಕ್ಕೆ ಮನೆಯಲ್ಲಿಯೇ ಆಧಾರ್ ಅಪ್ಡೇಟ್‌ | ಮಾದರಿಯಾದ ಅಂಚೆ ಇಲಾಖೆಯ ಸೇವೆ |
October 24, 2024
8:39 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror