Advertisement
Categories: MIRROR FOCUS

ಮನೆ ಬಾಗಿಲಿಗೆ “ಹೃದಯ”ದ ಸೇವೆ – ಜೀವ ಉಳಿಸುವ ವ್ಯವಸ್ಥೆ ಇದು…

Share

ಹೃದಯ ಸಂಬಂಧಿ ಕಾಯಿಲೆಗಳು ಗ್ರಾಮೀಣ ಭಾಗದಲ್ಲಿ ಭಯ ಹುಟ್ಟಿಸುತ್ತದೆ. ಎದೆನೋವು ಇತ್ಯಾದಿಗಳು ಕಾಣಿಸಿಕೊಂಡಾಗ ತಕ್ಷಣ  ಯಾವ ಸಮಸ್ಯೆ ಎಂಬುದು ಪತ್ತೆಯಾಗಬೇಕು ಜೊತೆಗೆ ತಕ್ಷಣ ಚಿಕಿತ್ಸೆಯೂ ಆಗಬೇಕು. ಆದರೆ ಗ್ರಾಮೀಣ ಭಾಗದಲ್ಲಿ ಇದ್ಯಾವುದಕ್ಕೂ ವ್ಯವಸ್ಥೆ ಇರುವುದಿಲ್ಲ. ಇದ್ದರೂ ಅಸಮರ್ಪಕ ಇಸಿಜಿ ವ್ಯವಸ್ಥೆ ಇರುತ್ತದೆ. ಕನಿಷ್ಠ 1 ಗಂಟೆ ಚಿಕಿತ್ಸೆಗೆ ಸಮಯ ತಗಲುತ್ತದೆ. ಅದಾಗಲೇ ಪ್ರಮುಖ ಸಮಯ ಕಳೆದ ಬಿಡುತ್ತದೆ.  ಇದೀಗ ಮಂಗಳೂರಿನ ಪ್ರಮುಖ ವೈದ್ಯರ ತಂಡ ಹಾಗೂ ಗ್ರಾಮೀಣ ಭಾಗದ ವೈದ್ಯರ ಸಮನ್ವಯದ ಜೊತೆಗೆ  ಆಧುನಿಕ ಸೌಲಭ್ಯ ಬಳಸಿ ಚಿಕಿತ್ಸೆ ನೀಡಲು ಪ್ರಯತ್ನ ಮಾಡಲಾಗುತ್ತಿದೆ. ಇದು ಮನೆ ಬಾಗಿಲಿಗೆ ಹೃದಯದ ಸೇವೆ. ಈ ಕಡೆಗೆ ನಮ್ಮ ಬೆಳಕು….

Advertisement
Advertisement
Advertisement

ಎರಡು ದಿನಗಳ ಹಿಂದೆ ಈಶ್ವರಮಂಗಲದ ವೆಂಕಟೇಶ್ ಶರ್ಮ ಎಂಬವರಿಗೆ ರಾತ್ರಿ ಎದೆನೋವು ಕಾಣಿಸಿಕೊಂಡಿತು. ತಕ್ಷಣ ಅವರ ವೈದ್ಯ ಡಾ.ಶ್ರೀಕುಮಾರ್ ಅವರಲ್ಲಿಗೆ ತೆರಳಿದಾಗ ಇಸಿಜಿ ಮಾಡಲಾಯಿತು. ಈ ವರದಿಯನ್ನು ಮಂಗಳೂರಿಗೆ ಕಳುಹಿಸಿಕೊಡಲಾಯಿತು. ತಕ್ಷಣವೇ ವೈದ್ಯರು ಮಂಗಳೂರಿಗೆ ಕರೆತರುವಂತೆ ಸೂಚನೆ ನೀಡಿದರು, ಪ್ರಾಥಮಿಕ ಚಿಕಿತ್ಸೆಯೊಂದಿಗೆ ಡಾ.ಶ್ರೀಕುಮಾರ್ ಸ್ವತ: ಕಾರು ಚಾಲನೆ ಮಾಡಿಕೊಂಡು ವೆಂಕಟೇಶ್ ಶರ್ಮ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದರು. ಅದಾಗಲೇ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಸಿದ್ಧವಾಗಿತ್ತು. ಹೃದಯಾಘಾತವಾಗಿದ್ದ ವೆಂಕಟೇಶ್ ಶರ್ಮ ಅವರಿಗೆ ಆಂಜಿಯೋಪ್ಲಾಸ್ಟ್ ಮಾಡುವ ಮೂಲಕ ಜೀವ ಉಳಿಸಲಾಯಿತು.

Advertisement

ಈ ವ್ಯವಸ್ಥೆಯ ರುವಾರಿ ಮಂಗಳೂರಿನ ಹೃದ್ರೋಗ ತಜ್ಞ ಮತ್ತು ಪ್ರಾಧ್ಯಾಪಕ ಹಾಗೂ ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಹೃದ್ರೋಗ ವಿಭಾಗದ ಮುಖ್ಯಸ್ಥ ಪದ್ಮನಾಭ ಕಾಮತ್. ಇದಕ್ಕಾಗಿ ಜಿಲ್ಲೆಯ ವೈದ್ಯರನ್ನೊಳಗೊಂಡ ತಂಡದ ವ್ಯಾಟ್ಸಪ್ ಗ್ರೂಪ್ ಇದೆ. ಇವರು ಇಜಿಸಿ ವರದಿ ನೀಡಿದ ತಕ್ಷಣವೇ ಮಾಹಿತಿ ನೀಡುತ್ತಾರೆ. 

ಈಚೆಗೆ ಪಂಜದ ವೈದ್ಯ ಡಾ.ಕೃಷ್ಣಮೂರ್ತಿ ಅವರುಈ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಾ, ಡಾ.ಪದ್ಮನಾಭ ಕಾಮತ್ ಹಾಗೂ ಅವರ ತಂಡ ಇಸಿಜಿ ವರದಿಯನ್ನು ನೋಡಿದ ಮರುಕ್ಷಣದಲ್ಲೇ ಉತ್ತರ ನೀಡುತ್ತಾರೆ. ಹೀಗಾಗಿ ವ್ಯವಸ್ಥೆಗಳು ಸುಲಭವಾಗುತ್ತದೆ, ಗ್ರಾಮೀಣ ಭಾಗದ ಜನರೂ ಸೇಫ್ ಆಗುತ್ತಿದ್ದಾರೆ ಎಂದು ಹೇಳುತ್ತಿದ್ದರು.ಅನೇಕ ಜೀವ ಉಳಿಯಲು ಕಾರಣವಾಗುತ್ತದೆ ಎನ್ನುತ್ತಾರೆ. ಪಂಜದಂತಹ ಗ್ರಾಮೀಣ ಭಾಗದಲ್ಲೂ ಈಗ ಇಜಿಸಿ ವ್ಯವಸ್ಥೆ ಇದೆ ಎನ್ನುತ್ತಾರೆ ಅವರು.

Advertisement

ಹಾಗಿದ್ದರೆ ಈ ವ್ಯವಸ್ಥೆ ಏನು ?:
ಗ್ರಾಮೀಣ ಭಾಗದ ಬಹುದೊಡ್ಡ ಸಮಸ್ಯೆ ಹೃದಯಾಘಾತ. ಇದಕ್ಕೆ ತಕ್ಷಣವೇ ಚಿಕಿತ್ಸೆಯಾಗಬೇಕು.ಆದರೆ ಗ್ರಾಮೀಣ ಭಾಗದಲ್ಲಿ ಇದು ಸಾಧ್ಯವಾಗುತ್ತಿಲ್ಲ.ಇದಕ್ಕೆ ಅಸಮರ್ಪಕ ಇಸಿಜಿ  ಸೌಲಭ್ಯಗಳು ಮತ್ತು ವಿಳಂಬವಾದ ರೋಗನಿರ್ಣಯವೂ ಕಾರಣವಾಗುತ್ತದೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಹೃದಯಾಘಾತ ಪ್ರಕರಣಗಳಲ್ಲಿ ಸಾವಿಗೆ ಕಾರಣವಾಗಿದೆ. 2014 ರಲ್ಲಿ ವಿಳಂಬವಾದ ರೋಗನಿರ್ಣಯದಿಂದಾಗಿ ಗ್ರಾಮೀಣ ಭಾಗದ ಯುವಕನೊಬ್ಬ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿರುವುದನ್ನು ಕಂಡ ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಹೃದ್ರೋಗ ವಿಭಾಗದ ಮುಖ್ಯಸ್ಥ ಪದ್ಮನಾಭ ಕಾಮತ್ ಇಂತಹ ಪ್ರಕರಣಗಳಿಗೆ ಏನಾದರು ಮಾಡಲೇಬೇಕು ಎಂದು ಸಾಮಾಜಿಕ ನೆಲೆಯಲ್ಲಿ ಯೋಚಿಸಿದರು. ಹೀಗಾಗಿ ವಾಟ್ಸಾಪ್ ಗುಂಪುಗಳ ಮೂಲಕ ಹಳ್ಳಿಗಳು, ಹತ್ತಿರದ ಪಟ್ಟಣಗಳು, ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು ಹಾಗೂ ಅಲ್ಲಿನ ಭೌಗೋಳಿಕ ಸಮಸ್ಯೆ, ತಾಂತ್ರಿಕ ಸಮಸ್ಯೆ ಬಗ್ಗೆ ಮಾಹಿತಿ ಕಲೆ ಹಾಕಿದರು. ಫೆಬ್ರವರಿ 2018 ರಲ್ಲಿ, ಅವರು 150 ಸದಸ್ಯರನ್ನು ಹೊಂದಿರುವ ವಾಟ್ಸಾಪ್ ಗುಂಪಿನ ‘ಕಾರ್ಡಿಯಾಲಜಿ ಎಟ್ ಡೋರ್‌ಸ್ಟೆಪ್’ (CAD) ಅನ್ನು ರಚಿಸಿದರು, ಹೃದಯ ಸಂಬಂಧಿತ ಸಮಸ್ಯೆಗಳನ್ನು ಗುರುತಿಸಲು ಮತ್ತು ವಾಟ್ಸಾಪ್ ಮೂಲಕ ಸಹಾಯವನ್ನು ಒದಗಿಸಲು ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಖಾಸಗಿ ಚಿಕಿತ್ಸಾಲಯಗಳಲ್ಲಿ ಇಸಿಜಿ ಯಂತ್ರಗಳನ್ನು ಸ್ಥಾಪಿಸಿದರು. ಈ ಇಸಿಜಿ ಯಂತ್ರಗಳನ್ನು ಉಚಿತವಾಗಿ ನೀಡಲಾಯಿತು. ಈಗಾಗಲೇ ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ  ಹಾಗೂ ಕೆಲವು ಕಡೆ ಖಾಸಗಿ ಕ್ಲಿನಿಕ್ ಗಳಲ್ಲಿ  ಇಸಿಜಿ ಯಂತ್ರ ಇಡಲಾಗಿದೆ. ಪ್ರಥಮ ಚಿಕಿತ್ಸೆ ಸಮಯಕ್ಕೆ ಸರಿಯಾಗಿ ನೀಡಿದರೆ 80 ರಷ್ಟು ಹೃದಯ ರೋಗಿಗಳನ್ನು ಉಳಿಸಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಪ್ರಥಮ ಚಿಕಿತ್ಸಾ ಕೊರತೆಯ ಬಗ್ಗೆ, ಗ್ರಾಮೀಣ ಪ್ರದೇಶಗಳಲ್ಲಿ ಇಸಿಜಿ ಸೌಲಭ್ಯದ ಕೊರತೆಯಿಂದಾಗಿ ಸರಿಯಾದ ರೋಗನಿರ್ಣಯದ ಕೊರತೆಯು ಅನೇಕ ಸಂದರ್ಭಗಳಲ್ಲಿ ಕಾರಣವಾಗಿದೆ ಎಂದು ಹೇಳುತ್ತಾರೆ ಡಾ.ಪದ್ಮನಾಭ ಕಾಮತ್.

ಹೇಗೆ ಕೆಲಸ ಮಾಡುತ್ತದೆ CAD ?:

Advertisement

ಎದೆನೋವು ಸಮಸ್ಯೆ ಕಾಡುವ ವ್ಯಕ್ತಿ CAD ಕಡೆಯಿಂದ ಇಸಿಜಿ ಯಂತ್ರ ಇರಿಸಲಾದ   ಖಾಸಗಿ ಕ್ಲಿನಿಕ್ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳಿಗೆ ತಕ್ಷಣವೇ ಅಲ್ಲಿನ ವೈದ್ಯರು  ಇಸಿಜಿಯನ್ನು ದಾಖಲಿಸುತ್ತಾರೆ ಮತ್ತು ಅದನ್ನು ವಾಟ್ಸಾಪ್ ಗುಂಪಿನಲ್ಲಿ ರವಾನಿಸುತ್ತಾರೆ.ಈ ಗುಂಪುಗಳಲ್ಲಿ ಪೋಸ್ಟ್ ಮಾಡಲಾದ ಇಸಿಜಿಗಳ ಬಗ್ಗೆ ಮಂಗಳೂರಿನ ಮತ್ತೊಬ್ಬ ಹೃದ್ರೋಗ ತಜ್ಞ ಕಾಮತ್ ಮತ್ತು ಮನೀಶ್ ರೈ ಅಥವಾ ಡಾ.ಪದ್ಮನಾಭ ಕಾಮತ್ ಅಥವಾ ತಜ್ಞ ವೈದ್ಯರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ತುರ್ತು ಸಂದರ್ಭಗಳಲ್ಲಿ  ಅವರನ್ನು ಎಚ್ಚರಿಸಿ ಅಂಬುಲೆನ್ಸ್ ಮೂಲಕ ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲು ಸೂಚನೆ ನೀಡುತ್ತಾರೆ. ಸಾಮಾನ್ಯ ಸಂದರ್ಭದಲ್ಲಿ ಮುಂದಿನ ಚಿಕಿತ್ಸೆ ಹಾಗೂ ಪರೀಕ್ಷೆಗೆ ಸಲಹೆ ನೀಡುತ್ತಾರೆ. ಗ್ರೂಪುಗಳಲ್ಲಿ ಬರುವ ಇಸಿಜಿಗಳಿಗೆ ಕ್ಷಣಮಾತ್ರದಲ್ಲಿ ಉತ್ತರವನ್ನೂ ನೀಡುತ್ತಾರೆ.  ಇಸಿಜಿಯಲ್ಲಿ ಹೃದಯಾಘಾತಕ್ಕೆ ಸಂಬಂಧಿಸಿದ ಸಂದರ್ಭಗಳನ್ನು ಕಂಡುಬಂದರೆ ತಕ್ಷಣ ನಿಭಾಯಿಸಲು ಅವರಿಗೆ ಪ್ರಥಮ ಚಿಕಿತ್ಸೆಯನ್ನು ಸಹ ಕಲಿಸಲಾಗಿದೆ.ಈ ಕೆಲಸ ಆರಂಭವಾದ ಕೆಲವೇ ಸಮಯದಲ್ಲಿ  5000 ಕ್ಕೂ ಅಧಿಕ ಇಸಿಜಿಗಳು ಬಂದಿವೆ. ಇದರಲ್ಲಿ 1200 ಕ್ಕೂ ಅಧಿಕ ಹೃದಯಸಂಬಂಧಿ ಕಾಯಿಲೆಗಳು ಪತ್ತೆಯಾಗಿವೆ, ಇವುಗಳಲ್ಲಿ ಬಹುಪಾಲು ಗ್ರಾಮೀಣ ಭಾಗದ ಜನರು.

ಗ್ರಾಮೀಣ ಪ್ರದೇಶದಲ್ಲಿ ಇಸಿಜಿಗಳನ್ನು ಸ್ಥಾಪಿಸಲು ಕೆಲವು ಸಂಘಸಂಸ್ಥೆಗಳು ನೆರವು ನೀಡುತ್ತವೆ, ಕೆಲವು ವೈದ್ಯರುಗಳೇ ಖರ್ಚು ಭರಿಸುತ್ತಾರೆ. ಕಾರ್ಪೋರೇಟ್ ಸಂಸ್ಥೆಗಳು ಸಹಾಯ ಮಾಡುತ್ತವೆ. ಕೆಲವು ರೋಗಿಗಳು ಸಹ ಇಸಿಜಿಗಳನ್ನು ದಾನ ಮಾಡಿದ್ದಾರೆ. ಡಾ.ಪದ್ಮನಾಭ ಕಾಮತ್ ಅವರ ಈ ನಡೆ ಗ್ರಾಮೀಣ ಭಾಗದ ಅನೇಕರಿಗೆ ಜೀವದಾನಕ್ಕೆ ಕಾರಣವಾಗಿದೆ. ಇನ್ನಷ್ಟು ಯಂತ್ರಗಳನ್ನು ಗ್ರಾಮೀಣ ಭಾಗದಲ್ಲಿ ಸ್ಥಾಪನೆಗೆ ಚಿಂತನೆ ನಡೆಸಿದ್ದಾರೆ, ಸಮಾನ ಮನಸ್ಕ ವೈದ್ಯರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಕ್ಕಳ ಭ್ರಮೆ ಮತ್ತು ವಾಸ್ತವ

ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…

1 hour ago

ಮುಂದಿನ ವರ್ಷದಿಂದ ಎಪಿಎಂಸಿಗಳಲ್ಲಿ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ

ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…

1 hour ago

ಶ್ರೀಲಂಕಾದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದರಿ |

ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…

11 hours ago

ರೈತ ಉಪಯೋಗಿ ಬಗೆ ಬಗೆಯ ಸರಕು ಸಾಗಣೆ ಗಾಡಿಗಳು

ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…

21 hours ago

ಪ್ರಯಾಗ್ ರಾಜ್ ನಲ್ಲಿ  ಮಹಾ ಕುಂಭಮೇಳ | 150ಕ್ಕೂ ಹೆಚ್ಚು ವಿಶೇಷ ರೈಲು

ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ  ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …

21 hours ago

ಆಧುನಿಕತೆಯಿಂದಾಗಿ ಕೃಷಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ

ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…

21 hours ago