ಸುಳ್ಯ: ಜಲಸಂರಕ್ಷಣೆಗಾಗಿ ಮನೆ ಮನೆಯಲ್ಲಿ ಇಂಗು ಗುಂಡಿ ಅಭಿಯಾನ `ಜಲಾಮೃತ ಯೋಜನೆಯ’ ಉದ್ಘಾಟನಾ ಸಮಾರಂಭ ಸುಳ್ಯದ ಗಾಂಧಿನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್‍ನಲ್ಲಿ ನಡೆಯಿತು.
ಸುಳ್ಯ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳ ಮೂಲಕ ಪ್ರತಿ ಮನೆಯಲ್ಲಿ ಒಂದು ಇಂಗು ಗುಂಡಿಯನ್ನು ಮಕ್ಕಳೇ ನಿರ್ಮಿಸಬೇಕು ಹಾಗೂ ಮಕ್ಕಳಿಗೆ ನೀರಿಂಗಿಸುವಿಕೆಯ ಮಹತ್ವವನ್ನು ತಿಳಿಸಬೇಕು ಎಂಬ ದೃಷ್ಠಿಯಿಂದ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗುತಿದೆ. ಅಭಿಯಾನದ ಬಗ್ಗೆ ಮಾತನಾಡಿದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ತಮ್ಮ ಮನೆಗಳ ಹಿತ್ತಲಿನಲ್ಲಿ ಎರಡು ಅಡಿ ಉದ್ದ, ಅಗಲ ಮತ್ತು ಆಳದ ಇಂಗು ಗುಂಡಿಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾಡುವಂತೆ ಮಾಹಿತಿ ನೀಡಿದರು. ಇಂದು ಮಳೆಯು ತೀವ್ರ ಗತಿಯಲ್ಲಿ ಕಡಿಮೆಯಾಗುತಿದೆ. ಮುಂದಿನ ದಿನಗಳಲ್ಲಿ ಮನುಷ್ಯನ ಬದುಕು ಹಸನಾಗಲು ಬರುವ ಮಳೆಯ ನೀರನ್ನು ಉಳಿಸಿಕೊಳ್ಳಬೇಕಾಗಿದೆ. ಅದಕ್ಕಿರುವ ಸರಳ ಉಪಾಯ ಇಂಗು ಗುಂಡಿಗಳು. ಇಂಗು ಗುಂಡಿಗಳ ಮೂಲಕ ಸಾಧ್ಯವಾದಷ್ಟು ನೀರನ್ನು ಭೂಮಿಗೆ ಉಣಿಸಬೇಕಾಗಿದೆ. ಮಕ್ಕಳ ಮೂಲಕ ಪ್ರತಿ ಮನೆಯಲ್ಲಿಯೂ ಇಂಗುಗುಂಡಿಗಳು ನಿರ್ಮಾಣವಾಗಬೇಕು ಎಂದರು.
ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ಎಸ್.ಪಿ. ಮಾತನಾಡಿ ಮಕ್ಕಳು ಇಂತಹ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಜಲಸಂರಕ್ಷಣೆಯ ಮಹತ್ವವನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು. ಶಾಲಾಭಿವೃದ್ಧಿ ಮಂಡಳಿ ಸದಸ್ಯ ಆರ್.ಕೆ.ಮಹಮ್ಮದ್ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ನಳಿನಿ ನೀರಿಂಗಿಸುವಿಕೆಯ ಮಹತ್ವವನ್ನು ವಿವರಿಸಿದರು.
ಸ್ನೇಹ ಶಾಲೆಯ ಮಾದರಿ:
ಸ್ನೇಹ ಶಾಲೆಯಲ್ಲಿ ಈಗಾಗಲೇ ಇಂಗು ಗುಂಡಿಗಳನ್ನು ನಿರ್ಮಾಣ ಮಾಡುವ ಮೂಲಕ ಮಾದರಿಯನ್ನು ಒದಗಿಸಿದೆ. ಶಾಲೆಯ ಐದನೆಯ ತರಗತಿಯಿಂದ 10ನೇ ತರಗತಿಯವರೆಗೆ 105 ವಿದ್ಯಾರ್ಥಿಗಳು ತಮ್ಮ ಮನೆಯ ಸಮೀಪ ಇಂಗು ಗುಂಡಿಯನ್ನು ನಿರ್ಮಿಸಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತಾನು ನಿರ್ಮಿಸಿದ ಇಂಗು ಗುಂಡಿಯ ಸಮೀಪ ನಿಂತು ಒಂದು ಭಾವಚಿತ್ರವನ್ನು ತೆಗೆದು ಶಾಲೆಗೆ ಕಳಿಸಲಾಗಿತ್ತು. ಪ್ರತಿಯೊಬ್ಬ ವಿದ್ಯಾರ್ಥಿಯ ಭಾವಚಿತ್ರ ಸೇರಿಸಿ ಬೃಹತ್ ಫ್ಲೆಕ್ಸ್ ನಿರ್ಮಿಸಿ ಶಾಲಾ ಆವರಣದಲ್ಲಿ ಅಳವಡಿಸಲಾಗಿದೆ. ಸ್ನೇಹ ಶಾಲೆಯ ಮಕ್ಕಳ ಮಳೆ ಕೊಯ್ಲು ಮಾದರಿಯ ಹಿನ್ನಲೆಯಲ್ಲಿ ತಾಲೂಕಿನ ಎಲ್ಲಾ ಶಾಲೆಗಳಿಗೂ ವಿಸ್ತರಿಸುವಂತೆ ಮಾಡುವ ಯೋಚನೆ ಡಾ.ಚಂದ್ರಶೇಖರ ದಾಮ್ಲೆ ಅವರದ್ದು. ಇದಕ್ಕೆ ಶಿಕ್ಷಣ ಇಲಾಖೆ ಸಾಥ್ ನೀಡಿ ಇದೀಗ ಅಭಿಯಾನ ಆರಂಭಿಸಲಾಗಿದೆ.
ಜಲಾಮೃತ ಯೋಜನೆಯ ಸಹಭಾಗಿತ್ವವನ್ನು ವಹಿಸಿರುವ ಸುಳ್ಯನ್ಯೂಸ್.ಕಾಂ ವತಿಯಿಂದ ಗಾಂಧೀನಗರ ಕರ್ನಾಟಕ ಪಬ್ಲಿಕ್ ಸ್ಕೂಲ್‍ಗೆ ಗಿಡವನ್ನು ನೀಡಲಾಯಿತು. ಡಾ.ಚಂದ್ರಶೇಖರ ದಾಮ್ಲೆ ಅವರು ಶಾಲಾ ಮುಖ್ಯೋಪಾಧ್ಯಾಯಿನಿ ನಳಿನಿ ಅವರಿಗೆ ಗಿಡವನ್ನು ಹಸ್ತಾಂತರಿಸಿದರು. ಹಸಿರು ಲೋಕ ಸೃಷ್ಠಿ. ಶಾಲೆಗೊಂದು ಹಣ್ಣಿನ ಗಿಡ ಸಂಕಲ್ಪದೊಂದಿಗೆ ಜಲಾಮೃತ ಕಾರ್ಯಕ್ರಮ ನಡೆಯುವ ಪ್ರತಿ ಶಾಲೆಗೆ ಗಿಡ ನೀಡುವ ಯೋಜನೆ ಸುಳ್ಯನ್ಯೂಸ್.ಕಾಂ ತಂಡದ್ದು.
Advertisement
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…