ಮನೆ ಮನೆಯಲ್ಲೂ ಗಣೇಶ ಹಬ್ಬದ ಸಂಭ್ರಮ…ಜೈ ಗಣೇಶ..

September 1, 2019
1:00 PM
ಚೌತಿಯೆಂದರೆ ಎಲ್ಲರ‌ ಮೆಚ್ಚಿನ ಹಬ್ಬ. ಮನೆ ಮನೆಯಲ್ಲೂ ಸಂಭ್ರಮ. ಅದಕ್ಕೂ ಕಾರಣವಿದೆ….
ಗಣಪನೆಂದರೆ ಎಲ್ಲರ‌ ಪ್ರೀತಿಯವ. ಪ್ರಥಮ ವಂದಿತ. ಅವನ ಹುಟ್ಟು ಹಬ್ಬವೆಂದರೆ ಸುಮ್ಮನೆಯೇ. ಎಲ್ಲರೂ ಆಚರಿಸುವುದೇ. ಹಳ್ಳಿಗಳಿರಲಿ , ಪೇಟೆಗಳಿರಲಿ ಎಲ್ಲೆಲ್ಲೂ ಖುಷಿಯೇ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರೂ ಸಂಭ್ರಮ ಪಡುವ ದಿನವೇ ಗಣೇಶ ಚತುರ್ಥಿ.  ದೇವಸ್ಥಾನಗಳಲ್ಲಿ   ಶಾಲಾ ಕಾಲೇಜುಗಳಲ್ಲಿ ,  ಊರು ಕೇರಿಗಳಲ್ಲಿ , ಪೇಟೆ, ಬೀದಿಗಳಲ್ಲಿ ಗಣಪನ ಮೂರ್ತಿಗಳನ್ನಿಟ್ಟು ಪೂಜಿಸಲಾಗುವುದು. ಅವರವರ ಬಕುತಿಗೆ , ಭಾವನೆಗೆ ಹೊಂದುವಂತೆ ಗಣೇಶನ ಹಬ್ಬವನ್ನು ಆಚರಿಸುವುದು ಹಿಂದಿನಿಂದಲೂ ನಡೆದು ಬಂದ ಪದ್ಧತಿ.
ಗಣೇಶನಿಗೆ ಎಲ್ಲರೂ ಪ್ರೀತಿ ಪಾತ್ರರೇ. ಆತನಿಗೆ ಎಲ್ಲೆಡೆಯೂ ಅಭಿಮಾನಿಗಳೇ. ವಿವಿಧ ಭಕ್ಷ್ಯ ಭೋಜನಗಳನ್ನು ಇಷ್ಟ ಪಡುವ ಗಣಪನಿಗೆ ಪ್ರೀತಿಯಿಂದ ಕೊಟ್ಟ ಗರಿಕೆ ಹುಲ್ಲೂ ಇಷ್ಟವೇ.
ಸಂಕಷ್ಟಗಳ ಸರಮಾಲೆಗಳಿದ್ದರೂ ಗಣಪನಲ್ಲಿ ನಿವೇದಿಸಿದರೆ ಸಮಾಧಾನ. ಯಾವುದೇ ಕೆಲಸ ಕಾರ್ಯಗಳು ಆರಂಭಿಸಬೇಕಾದರೆ ಮೊದಲು ಗಣೀಶನನ್ನು ಸ್ಮರಿಸಿ ಮುಂದುವರಿಯುವುದು ನಮ್ಮ ಸಂಪ್ರದಾಯ. ಹೊಸತಾಗಿ ಕಟ್ಟುವ, ಮನೆ ಇರಲಿ, ಉಪನಯನ, ಮದುವೆಯಂತಹ ಶುಭಕಾರ್ಯಗಳೆಲ್ಲವೂ ಆರಂಭ ಗೊಳ್ಳುವುದು ಗಣೇಶನ ಸ್ತುತಿಯಿಂದಲೇ ಆರಂಭ. ಹಾಗಾಗಿ ಹೆಚ್ಚಿನ ಮನೆಗಳಲ್ಲಿ ಪ್ರತಿ ವರುಷವೂ ಗಣಪತಿ ಹವನವನ್ನು ತಪ್ಪದೆ ಮಾಡುತ್ತಾರೆ.
ಬಂದರೆ ಕಷ್ಟಗಳೆಲ್ಲಾ ಒಟ್ಟೊಟ್ಟಿಗೆ ಬಂದು ಬಿಡುತ್ತವೆ. ಗಣೇಶನ ದಯೆಯೊಂದಿದ್ದರೆ ದೊಡ್ಡದಾಗಿ ಬರುವಂತಹುದು ಸಣ್ಣದರಲ್ಲೇ ಮುಗಿದು ಬಿಡುತ್ತದೆ.  ನಂಬಿದವರ ಯಾವತ್ತೂ ಕೈಬಿಡಲಾರ.ಆತನ ಆಶೀರ್ವಾದವೊಂದು ಜೊತೆಗಿದ್ದರೆ  ಯಾವುದೇ ಭಯ ನಮ್ಮ ಬಳಿ ಸುಳಿಯದು. ಜೈ ಗಣೇಶ.
Advertisement

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಬದುಕು ಪುರಾಣ | ಅದು ‘ಎಚ್ಚರ’ದ ರೇಖೆ!
April 27, 2025
11:29 AM
by: ನಾ.ಕಾರಂತ ಪೆರಾಜೆ
ಯುದ್ಧ……
April 27, 2025
10:33 AM
by: ವಿವೇಕಾನಂದ ಎಚ್‌ ಕೆ
ಹೊಸರುಚಿ | ಹಲಸಿನ ಕಾಯಿ ಪೂರಿ
April 26, 2025
8:00 AM
by: ದಿವ್ಯ ಮಹೇಶ್
ಬದುಕು ಕಲಿಸುವ ಪಾಠಗಳು
April 24, 2025
6:23 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

You cannot copy content of this page - Copyright -The Rural Mirror

Join Our Group