ಸುಳ್ಯ : ಅಮರಕ್ರೀಡಾ ಸಂಘಟನಾ ಸಮಿತಿ ಅಮರಮುಡ್ನೂರು ಹಾಗೂ ಅರಣ್ಯ ಇಲಾಖೆ, ಸುಬ್ರಹ್ಮಣ್ಯ ಉಪ ಇಲಾಖೆ, ವತಿಯಿಂದ ಮರ ಬೆಳೆಸಿ -ಬರ ಅಳಿಸಿ- ತಾಪ ಇಳಿಸಿ ಧ್ಯೇಯದೊಂದಿಗೆ ಪ್ರಥಮ ಹಂತದ ಗಿಡ ನೆಡುವ ಕಾರ್ಯಕ್ರಮ ಮಾವಿನಕಟ್ಟೆ ಪರಿಸರದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಗ್ರಾಪಂ ಸದಸ್ಯ ಪುಷ್ಪಕರ ಮಾವಿನಕಟ್ಟೆ ಚಾಲನೆ ನೀಡಿದರು. ಪರಿಸರ ಪ್ರೇಮಿ ಸತ್ಯನ್ ತಳೂರು ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅರಣ್ಯ ರಕ್ಷಕರಾದ ಸಂದೀಪ್, ಅರಣ್ಯ ವಿಕ್ಷಕರಾದ ವೆಂಕಟ್ರಮಣ ಕುತ್ಯಾಳ, ಹರಿಪ್ರಸಾದ್ ಎಲಿಮಲೆ, ವಿಜಯಕಾಂತ್ ಮಾವಿನಕಟ್ಟೆ, ಲೋಹೀತ್ ಮಾವಿನಕಟ್ಟೆ, ತೇಜಸ್ವಿ ಕಡಪಳ, ರಜನಿಕಾಂತ್ ಉಮ್ಮಡ್ಕ ಮುಖ್ಯ ಅತಿಥಿಗಳಾಗಿ ಬಾಗವಹಿಸಿದರು.
ಪ್ರದೀಪ್ ಬೊಳ್ಳೂರು ಸ್ವಾಗತಿಸಿ, ಹರ್ಷೀತ್ ದಾತಡ್ಕ ವಂದಿಸಿದರು. ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಯಶಸ್ವಿಗೆ ರಾಧಕೃಷ್ಣ ಮಾವಿನಕಟ್ಟೆ ಸಹಕರಿಸಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾನಿನಕಟ್ಟೆ ಅರಣ್ಯ ಪ್ರದೇಶದಲ್ಲಿ ಗಿಡ ನೆಡಲಾಯಿತು.
ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ರಾಜ್ಯ…
ಗುಜರಾತ್‌ನ ನೀರಿನ ಆಡಳಿತದ ಅನುಭವಗಳನ್ನು ಆಧರಿಸಿದ ‘ಗುಜರಾತ್‌ನಿಂದ ಭಾರತಕ್ಕೆ ಜಗತ್ತಿಗೆ ನೀರಿನ ಪಾಠಗಳು’…
ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಉಪಬೆಳೆಯಾಗಿ ಕೋಕೋಗೆ ಉತ್ತಮ ಅವಕಾಶಗಳಿದ್ದರೂ ಬೆಲೆ ಏರಿಳಿತ,…
ಅಡಿಕೆ ಕ್ಷೇತ್ರದಲ್ಲಿ ಉತ್ಪಾದನೆ, ದಾಸ್ತಾನು, ಬೇಡಿಕೆ, ಆಮದು, ಮಾರುಕಟ್ಟೆ ಮತ್ತು ಉತ್ಪಾದನಾ ವೆಚ್ಚದ…
ಕರ್ನಾಟಕದಿಂದ ನೈಋತ್ಯ ಮುಂಗಾರು ಸಂಪೂರ್ಣ ಹಿಂದೆ ಸರಿದಿದ್ದು, ಅ.11ರ ಸುಮಾರಿಗೆ ಹಿಂಗಾರು ಆರಂಭಕ್ಕೆ…
ಗದಗ ಜಿಲ್ಲೆಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಜಿಲ್ಲಾಡಳಿತ ನಿರ್ಧರಿಸಿದೆ.…