ಬೆಳ್ಳಾರೆ: “ದೇವರೇ ಮಳೆ ಕರುಣಿಸು……”, ಎಂಬ ಭಾವದಿಂದ ಬೆಳ್ಳಾರೆಯ ವಾಣಿಜ್ಯ ವರ್ತಕ ಹಾಗೂ ಕೈಗಾರಿಕಾ ಸಂಘದಿಂದ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 108 ಸೀಯಾಳ ಅಭಿಷೇಕ ನಡೆಯಿತು. ವಾಣಿಜ್ಯ ವರ್ತಕ ಹಾಗೂ ಕೈಗಾರಿಕಾ ಸಂಘದ ಸದಸ್ಯರಿಂದ ಅರ್ಚಕರ ಮುಂದಾಳತ್ವದೊಂದಿಗೆ ಮಳೆಗಾಗಿ ಪ್ರಾರ್ಥನೆ ನಡೆಯಿತು.
ಈ ಸಂದರ್ಭದಲ್ಲಿ ಸದಾಶಿವ ವೇದಪಾಠ ಶಾಲೆಯವರಿಂದ ಮಳೆಗಾಗಿ ರುದ್ರಾಭಿಷೇಕದ ಸಂಕಲ್ಪ ನಡೆಯಿತು.
ವಾಣಿಜ್ಯ ವರ್ತಕ ಹಾಗೂ ಕೈಗಾರಿಕಾ ಸಂಘದ ಗೌರವಾಧ್ಯಕ್ಷ ಬಿ.ಸುಬ್ರಹ್ಮಣ್ಯ ಜೋಷಿ, ಅಧ್ಯಕ್ಷ ಪ್ರಮೋದ್‍ಕುಮಾರ್ ಶೆಟ್ಟಿ ಕುಂಟುಪುಣಿಗುತ್ತು, ಉಪಾಧ್ಯಕ್ಷ ಮಾಧವ ಗೌಡ ಕಾಮಧೇನು, ಸದಸ್ಯರಾದ ಜಯಂತ ಮಡಪ್ಪಾಡಿ, ಪೇಮಚಂದ್ರ ಬೆಳ್ಳಾರೆ, ಐತ್ತಪ್ಪ, ವಿನಯ್‍ಕುಮಾರ್, ಶಶಿಧರ, ಕೇಶವ ಗೌಡ ಉಪಸ್ಥಿತರಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel