ಭುವಿಯಲ್ಲಿ ಸೂರ್ಯನ ತಾಪ ಹೆಚ್ಚಾಯಿತು
ನೀರು ಕಾದು ಆವಿಯಾಯ್ತು
ಮಳೆಗಾಗಿ ಮನುಜ ಬೇಡಿ ನಿಂತ
ಮನುಜನ ಬೇಡಿಕೆಗೆ ಮಣಿಯಲಿಲ್ಲ ವರುಣ…..
ಕಾಡನ್ನು ಕಡಿದ ಭೋಗ ಜೀವಿ
ಬಿಸಿಲನ್ನು ಕಂಡು ಶಪಿಸಿದ
ಭುವಿ ಕಾದು ಕೆಂಪಾಯ್ತು
ಹಸಿರೆಲ್ಲ ಒಣಗಿ ಬರಡಾಯ್ತು….
ನೀರಿಗಾಗಿ ಭೂತಾಯಿಯ ಒಡಲನ್ನೇ ಬಗೆದ
ಅಲ್ಲೂ ನೀರ ಪಸೆ ಕಾಣದಾದಾಗ ಭೂಮಿ ತಾಯಿ ಬಂಜೆಯೆಂದ….
ದಾರಿಕಾಣದಾದಾಗ ನರ ದೇವನ ಮೊರೆ ಹೋದ
ಕೊನೆಗೂ ಮಣಿದ ವರುಣ ಧರೆಗೆ ಅವತರಿಸಿದ
ಬಿಡದೆ ನೀರ ಹೊಳೆಯನ್ನೇ ಹರಿಸಿದ
ಸಾಕಿನ್ನು ಹೋಗೆಂದ ಬುದ್ದಿವಂತ
ಹೋಗಲೊಲ್ಲೆ ಎಂದಾಗ ಶಪಿಸುತ್ತಾ ಕುಳಿತ….
ಅವಮಾನ ಸಹಿಸದ ವರುಣ
ಮತ್ತೆ ಗುಡಿಯ ಸೇರಿದ
ಮತ್ತೆ ಭುವಿಯಲ್ಲಿ ಧಗೆಯೇರಿತು
ಮನುಜನದು ಮತ್ತದೇ ಚಾಳಿ ಶುರುವಾಯಿತು….
ಮನುಜನ ವರ್ತನೆ ಬದಲಾಗಲೇ ಇಲ್ಲ…
ಅದಕ್ಕಾಗಿ ಪ್ರಕೃತಿ ತಾನಾಗಿಯೇ ಬದಲಾಗುತ್ತಿದೆ…
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel