ಮಳೆಯ ನಡುವೆ ಹೀಗೊಂದು ಹರಟೆ……

July 28, 2019
12:00 PM
ಎಲ್ಲರೂ ಎಲ್ಲವೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಪ್ರತಿಯೊಂದು   ಸೃಷ್ಟಿಯೂ ಪ್ರತ್ಯೇಕವೇ. ಒಂದಕ್ಕೊಂದು ಹೋಲಿಕೆಯಿಲ್ಲ. ಅದುವೇ ಇದು ಎಂದು ಹೇಳುವ ಪ್ರಮೇಯವೇ ಇಲ್ಲ. ಅವರವರ ನಿಲುವು, ಮಾತು‌, ನಡೆ, ನಗು , ಬಣ್ಣ,ಕೌಶಲ್ಯ ಎಲ್ಲವೂ ವಿಭಿನ್ನ.  ಯೋಜನೆಗಳು, ಯೋಚನೆಗಳು ಒಂದೇ ಅಲ್ಲ. ಅವರವರ ನಿರ್ಧಾರ ಗಳಿಗೆ ಅವರವರು ಬದ್ಧ.
ಕೆಲವು ವಿಷಯಗಳನ್ನು ಸುಲಭ ವಾಗಿ ಎಲ್ಲರೂ ಅರ್ಥ ಮಾಡಿಕೊಳ್ಳ ಬಹುದು. ಅಂತಹ ವಿಷಯಗಳು ಕೂಡ ಒಬ್ಬೊಬ್ಬರಿಗೆ ಕಬ್ಬಿಣದ ಕಡಲೆ. ವಿದ್ಯಾರ್ಥಿಗಳು ಯಾವಾಗಲೂ ಗಣಿತ ಕಷ್ಟ, ವಿಜ್ಞಾನ ಕಷ್ಟ, ಇಂಗ್ಲಿಷ್ ಕಷ್ಟ ಎನ್ನುವವರ ನಡುವೆ ಸಮಾಜ ವಿಜ್ಞಾನವನ್ನೂ ನೆನಪೇ ಉಳಿಯು ದಿಲ್ಲ ಮಾರಾಯಾ ಎಂಬ ಧ್ವನಿ ಯೂ  ಕೇಳಿ ಬರುತ್ತದೆ.
ಅಡಿಗೆ ಏನು ಮಹಾ !ಯಾರೂ ‌ಮಾಡಬಹುದೆಂದು ಎಂದು  ಮೂಗುಮುರಿಯುವವ ರಿದ್ದಾರೆ. ಅವರ ನಡುವೆ ಅಡಿಗೆಯ ಮೂಲ ಪಾಠವೇ ಅರ್ಥವಾಗದೇ ಹೋಟೆಲ್ ಆಹಾರಕ್ಕೆ ಶರಣಾದವ ರ ಸಂಖ್ಯೆ ಕಮ್ಮಿಯಿಲ್ಲ. ಒಬ್ಬೊಬ್ಬರ ಅಭಿರುಚಿ ಒಂದೊಂದು ರೀತಿ. ನನಗೆ ಇಷ್ಟವಾದದ್ದು ನಿಮಗಿಷ್ಟವಾ ಗಿರಬೇಕಿಲ್ಲ. ನಿಮ್ಮ ಆಯ್ಕೆ ನನ್ನದಾ ಗಿರಬೇಕೇಂದೇನೂ ಇಲ್ಲ.
ಒಬ್ಬರಿಗೆ ಚೆಂದ ಕಂಡದ್ದು , ಮತ್ತೊ ಬ್ಬರಿಗೆ ಇಷ್ಟವಾಗದೇ ಇರಬಹುದು.
ಓಹ್ ಇದೂ ಒಂದು ಟೇಸ್ಟಾ ಎಂಬ ಉದ್ಗಾರಗಳು ಹೊಸತಲ್ಲ.
ಬಣ್ಣಗಳ ವಿಷಯದಲ್ಲೂ ಅಷ್ಟೇ. ಸೌಮ್ಯ ,ತಿಳಿ ಬಣ್ಣಗಳು ಸಾಮಾನ್ಯ ವಾಗಿ ಎಲ್ಲರಿಗೂ ಇಷ್ಟವಾಗಿ ಬಿಡು ತ್ತದೆ. ಆದರೆ ಕಪ್ಪು, ಕೆಂಪು, ನೇರಳೆ ಗಳಂತಹ ಗಾಢ ಬಣ್ಣಗಳೂ ಕೂಡ ಕೆಲವರಿಗೆ  ಬಹು ಪ್ರಿಯವಾ ದದ್ದು. ಯಾವಯಾವದೋ ವಿಚಿತ್ರ ಡಿಸೈನ್ ಗಳನ್ನು ಫ್ಯಾಷನ್ ಹೆಸರಿ ನಲ್ಲಿ ಧರಿಸುವುದು ಇಂದಿನ ಟ್ರೆಂಡ್. ಒಂದಕ್ಕೊಂದು ಹೊಂದಿಕೆ ಯಾಗದ ಏನೇನೋ ಬಣ್ಣಗಳು, ಚಿತ್ರಗಳು, ಡಿಸೈನ್ ಗಳ ಬಳಕೆ ಹೆಚ್ಚಿನವರ ಮೆಚ್ಚಿನ ಹವ್ಯಾಸ.
ಸಂಗೀತ, ಅದರಲ್ಲೂ ಶಾಸ್ತ್ರೀಯ ಸಂಗೀತವನ್ನೇ ಕೇಳುವವರು. ಅವರಿಗೆ ಸಿನೆಮಾದ ಇಂಪಾದ ಹಾಡುಗಳು ಕೂಡ ಇಷ್ಟವಾಗಲಾರದು.
ಇನ್ನೂ ಕೆಲವರಿದ್ದಾರೆ. ಎಲ್ಲರೂ ಮಾಡುವ ಹಾಗೆ ನಾನು ‌ಮಾಡಲ್ಲ ಅನ್ನುವವರು. ನಾನೇ ಬೇರೆ ನನ್ನ ಸ್ಟೈಲೇ ಬೇರೆ. ಮಾಮೂಲಿ ಮನುಷ್ಯನಿಗೆ ಹಿಡಿಸುವಂತದ್ದು ಕಂಡರಾಗದವರು. ಹೇಗೆಂದರೆ ಬಾಳೆಹಣ್ಣನ್ನು ಸಿಪ್ಪೆ ಸುಲಿದು ತಿನ್ನುವುದು ಸಾಮಾನ್ಯರ ಅಭ್ಯಾಸ. ಆದರೆ ಅವರು ಇಡೀ ಹಣ್ಣನ್ನೇ ತಿನ್ನುವಂತವರು. ಆರೋಗ್ಯಕ್ಕೆ ಹೀಗೆ ತಿಂದರೇ ಒಳ್ಳೆಯದು ಎಂಬ ಉಚಿತ ಸಲಹೆ .
ಎಲ್ಲೆಡೆ ಮಳೆ, ಗಾಳಿ, ಭೂಕುಸಿತ, ಕೊಳೆ ರೋಗ , ಬೋರ್ಡೋ ಸಿಂಪಡನೆ, ತರಕಾರಿ ,ಹಣ್ಣು, ಅಡುಗೆ, ಬಹು ಚರ್ಚಿತ ವಿಷಯ ಗಳ ನಡುವೆ ನನ್ನದೊಂದು ಹರಟೆ ಹೀಗಿರಲಿ. ಒಪ್ಪಿಸಿ ಕೊಳ್ಳಿ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಬದುಕು ಪುರಾಣ | ಜ್ಞಾನದ ಪ್ರತಿನಿಧಿ ಗಂಗಾಪುತ್ರ
August 10, 2025
7:00 AM
by: ನಾ.ಕಾರಂತ ಪೆರಾಜೆ
ಹೊಸರುಚಿ | ಹಲಸಿನ ಹಣ್ಣಿನ ಹಲ್ವ
August 9, 2025
7:37 AM
by: ದಿವ್ಯ ಮಹೇಶ್
ನೈತಿಕ ಮೌಲ್ಯದ ಸವಾಲು, ಕಾಮುಕ ರಾಜಕಾರಣಿಯ ಸೋಲು
August 6, 2025
8:23 PM
by: ಡಾ.ಚಂದ್ರಶೇಖರ ದಾಮ್ಲೆ
ಮಾತು ಬಿಡ ಮಂಜುನಾಥ | ಮಾತಿನ ಮೇಲೆ ಹಿಡಿತ ಇರಲಿ, ಎಚ್ಚರಿಕೆ ಇರಲಿ
August 6, 2025
8:04 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror

Join Our Group