ಮಳೆಯ ಹಿನ್ನೆಲೆ : ಗ್ರಾಮೀಣ ಭಾಗದಲ್ಲಿ ತುರ್ತು ಸಂಪರ್ಕಕ್ಕೆ ಬಿ ಎಸ್ ಎನ್ ಎಲ್ ಸೇವೆಗೆ‌ ಡೀಸೆಲ್ ವ್ಯವಸ್ಥೆ ಮಾಡಿದ ಬಳಕೆದಾರರು..!

August 11, 2019
8:00 AM

ವಾರದಿಂದ ಸುರಿಯುವ ಮಳೆ ಇನ್ನೂ ಮಳೆ ನಿಂತಿಲ್ಲ. ಗ್ರಾಮೀಣ ಭಾಗವಂತೂ ಯಾವುದೇ ಸಂಪರ್ಕವಿಲ್ಲದೆ ಕಂಗೆಟ್ಟಿತು. ಯಾವುದೇ ಸಹಾಯವಾಣಿಯೂ ಸಂಪರ್ಕವಾಗಲಿಲ್ಲ, ಶಾಲೆಗೆ ರಜೆ ಇದ್ದರೂ ತಿಳಿಯಲಿಲ್ಲ. ತುರ್ತು ಸಂಪರ್ಕಕ್ಕೂ ಸಾಧ್ಯವಾಗಲಿಲ್ಲ. ಏಕೆಂದರೆ ಗ್ರಾಮೀಣ ಭಾಗದಲ್ಲಿ ಬಿ ಎಸ್ ಎನ್ ಎಲ್ ಸೇವೆ ಇತ್ತು. ವಿವಿಧ ಕಾರಣದಿಂದ ಅದೆಲ್ಲವೂ ಸ್ಥಗಿತಗೊಂಡಿತು. ಆಗ ಜನರೇ ವ್ಯವಸ್ಥೆ ಗೆ ಮುಂದಾದದರು. ಈ ಕಡೆಗೆ ನಮ್ಮ ಬೆಳಕು…

Advertisement
Advertisement
Advertisement
Advertisement

 

Advertisement

ಗ್ರಾಮೀಣ ಭಾಗದಲ್ಲಿ ತುರ್ತು ಸಂಪರ್ಕ ವ್ಯವಸ್ಥೆಗೆ ಬಳಕೆದಾರರೇ ಡೀಸೆಲ್ ಸಂಗ್ರಹಿಸಿ ಬಿ ಎಸ್ ಎನ್ ಎಲ್ ಟವರ್ ಚಾಲೂ ಮಾಡಿ ಸೇವೆ ಒದಗಿಸಿಕೊಂಡ ಘಟನೆ ಸುಳ್ಯ ತಾಲೂಕಿನ ವಿವಿಧ ಕಡೆ ನಡೆದಿದೆ.‌ಈಗ ಇರುವುದು ಬಿ ಎಸ್ ಎನ್ ಎಲ್‌ನ ತಕ್ಷಣದ ವ್ಯವಸ್ಥೆ..!.

ಕಳೆದ ಒಂದು ‌ವಾರದಿಂದ ಜಿಲ್ಲೆಯಾದ್ಯಂತ ಭಾರೀ ಮಳೆ. ಇದರ ಜೊತೆಗೆ ಗಾಳಿಯೂ ಬೀಸಿದ ಕಾರಣ ವಿದ್ಯುತ್ ಕಂಬ ತುಂಡಾಗಿ ವಿದ್ಯುತ್ ಸಂಪರ್ಕ ಕಡಿತವಾಗಿ‌ ಊರೇ ಕತ್ತಲಲ್ಲಿ ಮುಳುಗಿತು. ಮೊದಲೇ ಡೀಸೆಲ್ ಸರಬರಾಜು ಇಲ್ಲದೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸರಬರಾಜು ಇಲ್ಲವಾದರೆ ಮೊಬೈಲ್ ಸಂಪರ್ಕವೂ ಕಡಿತವಾಗುತ್ತಿತ್ತು.‌
ಈಗ ಮಳೆ,‌ ಗಾಳಿಯ ಕಾರಣ ವಿದ್ಯುತ್ ಕಡಿತವಾಗಿ ತುರ್ತು ಸಂಪರ್ಕವೂ ಇಲ್ಲವಾಗಿತ್ತು.‌ಮಳೆಯ ಆರ್ಭಟ‌ ಹೆಚ್ಚಾಗಿ ತುರ್ತು ಸಂಪರ್ಕವೂ ಇಲ್ಲದೆ ಪರದಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಜನಪ್ರತಿನಿಧಿಗಳೂ‌ ಸೇರಿದಂತೆ ಅಧಿಕಾರಿಗಳು ನಿಸ್ಸಾಯಕ ಸ್ಥಿತಿಯಲ್ಲಿದ್ದರು. ಹೀಗಾಗಿ ಗ್ರಾಮಸ್ಥರೇ ಡೀಸಲ್ ಸಂಗ್ರಹಿಸಿ ಜನರೇಟರ್ ಚಾಲೂ ಮಾಡಿ ಸಂಪರ್ಕ ಮಾಡಿ ಕೊಂಡರು. ಈಗ ಬಿಎಸ್‌ಎನ್‌ಎಲ್‌ ಸಿಬಂದಿಗಳು ತಕ್ಷಣದ ತಾಂತ್ರಿಕ ವ್ಯವಸ್ಥೆ ಮಾಡಿಸಿಕೊಡಬೇಕಾಗಿದೆ.

Advertisement

ಸುಳ್ಯ ತಾಲೂಕಿನ ಕೊಲ್ಲಮೊಗ್ರ,‌ಹರಿಹರ ಪ್ರದೇಶದಲ್ಲಿ ಡೀಸೆಲ್ ಸಂಗ್ರಹವಾದರೆ ಗುತ್ತಿಗಾರು ಗ್ರಾಮದ‌ ಕಮಿಲದಲ್ಲೂ ಸಾರ್ವಜನಿಕರೇ ಡೀಸೆಲ್‌ ಸಂಗ್ರಹಿಸಿ ಜನರೇಟರ್ ಚಾಲೂ ಮಾಡಿ ಸಂಪರ್ಕ ವ್ಯವಸ್ಥೆ ಮಾಡಿಸಿಕೊಂಡರು.‌ ಗಾಳಿ ಮಳೆಗೆ‌‌ ವಿದ್ಯುತ್ ಕಂಬ ತುಂಡಾಗಿ ಕಮಿಲದಲ್ಲಿ ಒಂದು ವಾರದಿಂದ ವಿದ್ಯುತ್ ಸ್ಥಗಿತಗೊಂಡಿದ್ದು ಮೆಸ್ಕಾಂ‌ ಸಿಬಂದಿಗಳು ಸಮಾರೋಪಾದಿಯಲ್ಲಿ ಭಾರೀ ಮಳೆಯ ನಡುವೆಯೂ ನಿರಂತರ ಕೆಲಸ ಮಾಡುತ್ತಿದ್ದಾರೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಆಮದು ಮೇಲೆ ನಿಗಾ ವಹಿಸಲು ಸಚಿವರಿಗೆ ಮನವಿ ಮಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ 
February 6, 2025
11:33 PM
by: ದ ರೂರಲ್ ಮಿರರ್.ಕಾಂ
ಕೇಂದ್ರ ಬಜೆಟ್‌ | ರೈತರಿಗೆ ಕಿಸಾನ್ ಕಾರ್ಡ್ ನಿಂದ ಪ್ರಯೋಜನ | ಕೃಷಿ ವಲಯಕ್ಕೆ 137757 ಕೋಟಿ ಅನುದಾನ |
February 6, 2025
7:40 AM
by: The Rural Mirror ಸುದ್ದಿಜಾಲ
ಆನೆಗಳ ಚಲನ ವಲನಗಳ ಬಗ್ಗೆ ಸ್ವದೇಶಿ ನಿರ್ಮಿತ ರೇಡಿಯೊ ಕಾಲರ್ ಅಳವಡಿಕೆ | ಅರಣ್ಯ ಸಚಿವ ಈಶ್ವರ್ ಖಂಡ್ರೆ
February 6, 2025
7:33 AM
by: The Rural Mirror ಸುದ್ದಿಜಾಲ
ತುಮಕೂರು ಜಿಲ್ಲೆ | 10 ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭ
February 5, 2025
6:45 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror