ವಾರದಿಂದ ಸುರಿಯುವ ಮಳೆ ಇನ್ನೂ ಮಳೆ ನಿಂತಿಲ್ಲ. ಗ್ರಾಮೀಣ ಭಾಗವಂತೂ ಯಾವುದೇ ಸಂಪರ್ಕವಿಲ್ಲದೆ ಕಂಗೆಟ್ಟಿತು. ಯಾವುದೇ ಸಹಾಯವಾಣಿಯೂ ಸಂಪರ್ಕವಾಗಲಿಲ್ಲ, ಶಾಲೆಗೆ ರಜೆ ಇದ್ದರೂ ತಿಳಿಯಲಿಲ್ಲ. ತುರ್ತು ಸಂಪರ್ಕಕ್ಕೂ ಸಾಧ್ಯವಾಗಲಿಲ್ಲ. ಏಕೆಂದರೆ ಗ್ರಾಮೀಣ ಭಾಗದಲ್ಲಿ ಬಿ ಎಸ್ ಎನ್ ಎಲ್ ಸೇವೆ ಇತ್ತು. ವಿವಿಧ ಕಾರಣದಿಂದ ಅದೆಲ್ಲವೂ ಸ್ಥಗಿತಗೊಂಡಿತು. ಆಗ ಜನರೇ ವ್ಯವಸ್ಥೆ ಗೆ ಮುಂದಾದದರು. ಈ ಕಡೆಗೆ ನಮ್ಮ ಬೆಳಕು…
ಗ್ರಾಮೀಣ ಭಾಗದಲ್ಲಿ ತುರ್ತು ಸಂಪರ್ಕ ವ್ಯವಸ್ಥೆಗೆ ಬಳಕೆದಾರರೇ ಡೀಸೆಲ್ ಸಂಗ್ರಹಿಸಿ ಬಿ ಎಸ್ ಎನ್ ಎಲ್ ಟವರ್ ಚಾಲೂ ಮಾಡಿ ಸೇವೆ ಒದಗಿಸಿಕೊಂಡ ಘಟನೆ ಸುಳ್ಯ ತಾಲೂಕಿನ ವಿವಿಧ ಕಡೆ ನಡೆದಿದೆ.ಈಗ ಇರುವುದು ಬಿ ಎಸ್ ಎನ್ ಎಲ್‌ನ ತಕ್ಷಣದ ವ್ಯವಸ್ಥೆ..!.
ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಭಾರೀ ಮಳೆ. ಇದರ ಜೊತೆಗೆ ಗಾಳಿಯೂ ಬೀಸಿದ ಕಾರಣ ವಿದ್ಯುತ್ ಕಂಬ ತುಂಡಾಗಿ ವಿದ್ಯುತ್ ಸಂಪರ್ಕ ಕಡಿತವಾಗಿ ಊರೇ ಕತ್ತಲಲ್ಲಿ ಮುಳುಗಿತು. ಮೊದಲೇ ಡೀಸೆಲ್ ಸರಬರಾಜು ಇಲ್ಲದೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸರಬರಾಜು ಇಲ್ಲವಾದರೆ ಮೊಬೈಲ್ ಸಂಪರ್ಕವೂ ಕಡಿತವಾಗುತ್ತಿತ್ತು.
ಈಗ ಮಳೆ, ಗಾಳಿಯ ಕಾರಣ ವಿದ್ಯುತ್ ಕಡಿತವಾಗಿ ತುರ್ತು ಸಂಪರ್ಕವೂ ಇಲ್ಲವಾಗಿತ್ತು.ಮಳೆಯ ಆರ್ಭಟ ಹೆಚ್ಚಾಗಿ ತುರ್ತು ಸಂಪರ್ಕವೂ ಇಲ್ಲದೆ ಪರದಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಜನಪ್ರತಿನಿಧಿಗಳೂ ಸೇರಿದಂತೆ ಅಧಿಕಾರಿಗಳು ನಿಸ್ಸಾಯಕ ಸ್ಥಿತಿಯಲ್ಲಿದ್ದರು. ಹೀಗಾಗಿ ಗ್ರಾಮಸ್ಥರೇ ಡೀಸಲ್ ಸಂಗ್ರಹಿಸಿ ಜನರೇಟರ್ ಚಾಲೂ ಮಾಡಿ ಸಂಪರ್ಕ ಮಾಡಿ ಕೊಂಡರು. ಈಗ ಬಿಎಸ್‌ಎನ್‌ಎಲ್ ಸಿಬಂದಿಗಳು ತಕ್ಷಣದ ತಾಂತ್ರಿಕ ವ್ಯವಸ್ಥೆ ಮಾಡಿಸಿಕೊಡಬೇಕಾಗಿದೆ.
ಸುಳ್ಯ ತಾಲೂಕಿನ ಕೊಲ್ಲಮೊಗ್ರ,ಹರಿಹರ ಪ್ರದೇಶದಲ್ಲಿ ಡೀಸೆಲ್ ಸಂಗ್ರಹವಾದರೆ ಗುತ್ತಿಗಾರು ಗ್ರಾಮದ ಕಮಿಲದಲ್ಲೂ ಸಾರ್ವಜನಿಕರೇ ಡೀಸೆಲ್ ಸಂಗ್ರಹಿಸಿ ಜನರೇಟರ್ ಚಾಲೂ ಮಾಡಿ ಸಂಪರ್ಕ ವ್ಯವಸ್ಥೆ ಮಾಡಿಸಿಕೊಂಡರು. ಗಾಳಿ ಮಳೆಗೆ ವಿದ್ಯುತ್ ಕಂಬ ತುಂಡಾಗಿ ಕಮಿಲದಲ್ಲಿ ಒಂದು ವಾರದಿಂದ ವಿದ್ಯುತ್ ಸ್ಥಗಿತಗೊಂಡಿದ್ದು ಮೆಸ್ಕಾಂ ಸಿಬಂದಿಗಳು ಸಮಾರೋಪಾದಿಯಲ್ಲಿ ಭಾರೀ ಮಳೆಯ ನಡುವೆಯೂ ನಿರಂತರ ಕೆಲಸ ಮಾಡುತ್ತಿದ್ದಾರೆ.
ಡಿಎಪಿ ರಸಗೊಬ್ಬರಗಳ ತ್ವರಿತ ಪೂರೈಕೆ ಹಾಗೂ ಲಭ್ಯತೆಯ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವು…
ಬೆಳಗಾವಿ ಜಿಲ್ಲೆಯ ಗೋಕಾಕ, ಮೂಡಲಗಿ, ರಾಯಬಾಗ, ಚಿಕ್ಕೋಡಿ ಹುಕ್ಕೇರಿ ಹಾಗೂ ಬಾಗಲಕೋಟ ಜಿಲ್ಲೆಯ…
ಕೊಂಕಣ ರೈಲಿನ ವಿಲೀನಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಹಮತ ವ್ಯಕ್ತಪಡಿಸಿದ್ದಾರೆ ಎಂದು…
ಬೇಸಗೆಯ ಅವಧಿಯಲ್ಲಿ ಅಂದರೆ ನವೆಂಬರ್ ಬಳಿಕ ಮಂಗನ ಜ್ವರ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ…
ಉತ್ತರ ಶ್ರೀಲಂಕಾ ಕರಾವಳಿಯ ಬಳಿ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವು ಕೇಂದ್ರೀಕೃತವಾಗಿದೆ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಗೆ ಎಲೆಚುಕ್ಕಿ ಹಾಗೂ ಹಳದಿ…