ಒಂದೇ ವಾರದಲ್ಲಿ ಧಾರಾಕಾರ ಮಳೆ ಸುರಿಯಿತು. ಸಾಕಷ್ಟು ಹಾನಿ ಮಾಡಿ ಬಿಟ್ಟಿತು. ಯೋಜನಾಬದ್ಧವಾದ ವ್ಯವಸ್ಥೆಯಾದರೆ ಕೆಲವೇ ಸಮಯದಲ್ಲಿ ಎಲ್ಲವೂ ವ್ಯವಸ್ಥೆಯಾಗಲು ಸಾಧ್ಯವಿದೆ. ಸುಳ್ಯ ತಾಲೂಕಿನಲ್ಲೂ ಸಾಕಷ್ಟು ಹಾನಿಯಾಗಿದೆ. ರಸ್ತೆಗಳು, ಸೇತುವೆಗಳು ಕೊಚ್ಚಿ ಹೋಗಿದೆ. ಇದಕ್ಕೆಲ್ಲಾ ಈಗಲೇ ಸೂಕ್ತ ಯೋಜನೆ ರಚನೆಯಾದರೆ ವರ್ಷದಲ್ಲಿ ಪುನರ್ ನಿರ್ಮಾಣವಾಗಬಹುದು. ಈ ಬಗ್ಗೆ ಸಂಬಂಧಿತರು ಗಮನಹರಿಸಲಿ ಎಂಬ ಆಶಯದೊಂದಿಗೆ ನಮ್ಮ ಫೋಕಸ್….
ಭಾರೀ ಮಳೆ ಸುಳ್ಯ ತಾಲೂಕಿನ ವಿವಿದೆಡೆ ಹಾನಿ ಮಾಡಿತು. ಸಂಪಾಜೆಯಿಂದ ತೊಡಗಿ ಗುಂಡ್ಯದವರೆಗೆ ವಿವಿಧ ಕಡೆಗಳಲ್ಲಿ ಹಾನಿಯಾಗಿದೆ. ಈಗಿನ ಮಾಹಿತಿ ಪ್ರಕಾರ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆಯಿಂದ 69 ಮನೆಗಳು ಭಾಗಶಃ ಹಾನಿಯಾಗಿದೆ. ಕ್ಷೇತ್ರದ ಅನೇಕ ರಸ್ತೆಗಳು ಹಾನಿಗೊಳಗಾಗಿದೆ ಲೋಕೋಪಯೋಗಿ ಇಲಾಖೆಗೆ 13 ಕೋಟಿ ರೂ ನಷ್ಟವಾದರೆ, 12 ಕೋಟಿಯಷ್ಟು ಜಿ.ಪಂ.ರಸ್ತೆಗಳಿಗೆ ಹಾನಿಯಾಗಿದೆ. ಸರಕಾರಿ ಶಾಲೆ, ಸರಕಾರಿ ಕಟ್ಟಡಗಳು, ಸೇರಿ 6 ಕೋಟಿ ರೂ ನಷ್ಟವಾಗಿದೆ.
ಪ್ರತೀ ಬಾರಿಯ ಮಳೆಗೆ ರಸ್ತೆಗಳು ಹಾನಿಯಾಗುತ್ತವೆ, ಮಳೆ ಮುಗಿದ ತಕ್ಷಣ ರಸ್ತೆ ದುರಸ್ತಿ ಎಂದರೂ ಇನ್ನೊಂದು ಮಳೆ ಶುರುವಾಗುವ ಹೊತ್ತಿಗೂ ರಸ್ತೆ ದುರಸ್ತಿ ಆಗಿರುವುದಿಲ್ಲ. ಕಾರಣ ಕೇಳಿದರೆ ಅನುದಾನದ ಕೊರತೆ ಎಂಬ ಉತ್ತರ ಇಲಾಖೆಯದ್ದಾದರೆ, ಜನಪ್ರತಿನಿಧಿಗಳು ಅನುದಾನ ಬಿಡುಗಡೆಯಾಗಿದೆ ಎಂದು ಹೇಳುತ್ತಲೇ ಇರುತ್ತಾರೆ.ಜಿಲ್ಲಾ ಪಂಚಾಯತ್ ರಸ್ತೆಗಳು ಪ್ರತೀ ವರ್ಷವೂ ಹದಗೆಡುತ್ತಲೇ ಇದೆ. ಇದು ಸರಿಯಾಗಿ ದುರಸ್ತಿಯೂ ಆಗುವುದಿಲ್ಲ.ಆಗ ರಸ್ತೆಯ ಬಗ್ಗೆ ಮಾತನಾಡಿದರೆ ದೂರದ ಯಾವುದೇ ಊರಿನ ಸ್ಥಿತಿಯ ಬಗ್ಗೆಯೇ ಮಾತನಾಡಿ ಅಲ್ಲಿಗಿಂತ ನಮ್ಮದು ಬೆಟರ್ ಎನ್ನುತ್ತಾರೆ, ಆದರೆ ಮಾದರಿಯಾಗಬೇಕಾದ್ದು ಶಿಥಿಲವಾದ್ದು ಅಲ್ಲ, ಉತ್ತಮವಾದ್ದೇ ಮಾದರಿಯಾಗಬೇಕು ಎನ್ನುವಾಗ ಅಸಮಾಧಾನಗಳು, ಚರ್ಚೆಗಳು ಆರಂಭವಾಗುತ್ತದೆ. ಕೊನೆಗೆ ಗ್ರಾಮೀಣ ಭಾಗದ ಜನರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಡುವೆ ಅಸಮಾಧಾನ, ಕೋಪ, ಹೋರಾಟಗಳು ನಡೆಯುತ್ತವೆ. ಇದೆಲ್ಲಾ ತಪ್ಪಿಸಿ ಸೂಕ್ತವಾದ ಕ್ರಮವಾಗಲು ಈಗಲೇ ಇಲಾಖೆಗಳು ಹಾಗೂ ಎಲ್ಲಾ ಜನಪ್ರತಿನಿಧಿಗಳು ಸರಿಯಾದ ಫಾಲೋಅಪ್ ಮಾಡಿದರೆ ಸುಳ್ಯದ ಎಲ್ಲಾ ರಸ್ತೆಗಳೂ ವ್ಯವಸ್ಥಿತ ರೀತಿಯಲ್ಲಿರಲು ಸಾಧ್ಯವಿದೆ. ನಮ್ಮದೇ ಮಾಡೆಲ್ ಆಗಿರಲು ಸಾಧ್ಯವಿದೆ.
ಈಗಾಗಲೇ ಶಾಸಕ ಅಂಗಾರ ಅವರು ಮಳೆಹಾನಿ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ. ಸುಳ್ಯ ವಿಧಾನಸಭಾ ವ್ಯಾಪ್ತಿಯಲ್ಲಿ ಸುಮಾರು 69 ಮನೆಗಳು ಭಾಗಶಃ ಹಾನಿಯಾಗಿದೆ. ಅಲ್ಲದೆ ಈ ವ್ಯಾಪ್ತಿಯಲ್ಲಿ ಹೆಚ್ಚು ತೊಂದರೆಗೊಳಗಾದ ಮನೆಗಳಿಗೆ ಶೀಘ್ರ ಪರಿಹಾರ ಘೋಷಣೆ ಮಾಡಲಾಗುವುದು. ಅಲ್ಲದೆ ಕಲ್ಮಕಾರಿನ ಗುಳಿಕ್ಕಾನ ಪರಿಸರದ 10 ಮನೆಗಳ ಮಂದಿ ಸಂತರಸ್ಥರಾಗಿದ್ದಾರೆ.ಇವರಿಗೆ ಪಂಚಾಯತ್ ವ್ಯಾಪ್ತಿಯಲ್ಲಿನ ಸರಕಾರಿ ಜಾಗವನ್ನು ಗುರುತಿಸಿ ಶಾಶ್ವತವಾಗಿ ಪುನರ್ವಸತಿಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಂಗಾರ ಅವರು ಹೇಳಿದ್ದಾರೆ. ಅಧಿಕಾರಿಗಳು ಎಲ್ಲಾ ರಸ್ತೆಯ ಹಾನಿಯ ಬಗ್ಗೆ ಹಾಗೂ ಸೂಕ್ತವಾಗಿ ಬೇಕಿರುವ ಅನುದಾನಗಳ ಬಗ್ಗೆ ಲೆಕ್ಕ ನೀಡಿದರೆ ಮಳೆಗಾಲದ ನಂತರ ದುರಸ್ತಿ ಮಾಡಲು ಸಾಧ್ಯವಿದೆ.
ಪುತ್ತೂರಿನಲ್ಲೂ ರಸ್ತೆಗಳಿಗೆ ಹಾನಿ: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ರೂ. 7 ಕೋಟಿ, ಲೋಕೋಪಯೋಗಿ ಇಲಾಖೆಯ ರಸ್ತೆಗಳಿಗೆ ರೂ. 20 ಕೋಟಿ, ಜಿಲ್ಲಾ ಪಂಚಾಯತ್ ರಸ್ತೆಗಳ ಹಾನಿಯಿಂದ ರೂ. 15 ಕೋಟಿಯಷ್ಟು ನಷ್ಟ ಸಂಭವಿಸಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮಳೆಯ ಕಾರಣದಿಂದ ಉಂಟಾಗಿರುವ ಒಟ್ಟು ನಷ್ಟದ ಪ್ರಮಾಣ ರೂ. 75 ಕೋಟಿ. ಈ ಪೈಕಿ ರಸ್ತೆಗಳ ಹಾನಿಯಿಂದ ನಡೆದ ನಷ್ಟದ ಪ್ರಮಾಣ ರೂ. 42 ಕೋಟಿ. ಅಂದರೆ ಒಟ್ಟು ನಷ್ಟದ ಶೇ. 50 ಕ್ಕೂ ಹೆಚ್ಚು ರಸ್ತೆಗಳ ದುರಸ್ತಿಗೆ ಅನುದಾನಬೇಕಾಗುತ್ತದೆ. ರಾಜ್ಯ ಸರಕಾರದ ಅಧೀನದಲ್ಲಿ ಬರುವ ಲೋಕೋಪಯೋಗಿ ಮತ್ತು ಜಿಲ್ಲಾ ಪಂಚಾಯತ್ ರಸ್ತೆಗಳ ದುರಸ್ತಿಗೆ ಹಾಗೂ ಇತರ ರಸ್ತೆಗಳ ನಿರ್ವಹಣೆಗೆ ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ವಿಶೇಷ ಅನುದಾನ ಮಂಜೂರಾತಿಗೆ ಸಂಬಂಧಿಸಿ ಪ್ರಸ್ತಾವನೆಗಳನ್ನು ಸಿದ್ಧ ಪಡಿಸಲಾಗುತ್ತಿದೆ. ಇಲ್ಲಿ ಶಾಸಕ ಸಂಜೀವ ಮಠಂದೂರು ಅವರು ಈಗಾಗಲೇ ವರದಿ ಸಿದ್ಧಪಡಿಸಿ ಮುಖ್ಯಮಂತ್ರಿಗಳಿಗೆ ನೀಡಲು ಸಿದ್ಧತೆ ಮಾಡಿದ್ದಾರೆ.
ಕೇಂದ್ರ ಬಜೆಟ್ನಲ್ಲಿ ಕೃಷಿ ವಲಯಕ್ಕೆ 1 ಲಕ್ಷದ 37 ಸಾವಿರದ 757 ಕೋಟಿ…
ಆನೆಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ.ಜನರ…
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…