ಸುಳ್ಯ: ಮಳೆ ಇಲ್ಲದಿರುವಾಗ ಗಿಡ ನೆಡಬೇಕು, ಮರ ಉಳಿಸಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತದೆ. ಆದರೆ ನಿರಂತರ ಎರಡು ದಿನ ಮಳೆ ಬಂದಾಗ ಜನ ಮರವನ್ನು ಮರೆತರೇ… ?ಹೀಗೊಂದು ಜಿಜ್ಞಾಸೆ ಹುಟ್ಟಿಕೊಂಡದ್ದು ಬುಧವಾರ ಸುಳ್ಯದಲ್ಲಿ ನಡೆದ ಪ್ರಕೃತಿ ವಿಕೋಪ ತಡೆ ಕಾರ್ಯಸೂಚಿ ಸಭೆಯಲ್ಲಿ.
ಸಭೆಯಲ್ಲಿ ಮಾತನಾಡಿದ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ‘ಜೂನ್ ತಿಂಗಳ ಕೊನೆಯವರೆಗೆ ಮಳೆಯೇ ಬಾರದಿದ್ದಾಗ ಗಿಡಗಳನ್ನು ನೆಡಬೇಕು, ಮರಗಳನ್ನು ಉಳಿಸಬೇಕು. ನೆಡಲು ಗಿಡ ಕೊಡಿ ಸಾರ್.. ಎಂದು ಹಲವು ಮಂದಿ ಕೇಳುತ್ತಿದ್ದರು. ಆದರೆ ಎರಡು ದಿನ ಮಳೆ ಸುರಿದಾಗ ಮರಗಳು ಅಪಾಯಕಾರಿಯಾಗಿದೆ, ಮರ ಕಡಿಯಿರಿ ಸಾರ್ ಎಂದು ಕರೆ ಮಾಡುತ್ತಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದಾಗ ಗಂಭೀರ ಸಭೆಯಲ್ಲಿ ಕೆಲ ಕಾಲ ನಗುವಿನ ಕಾರಂಜಿ ಚಿಮ್ಮಿತು.
ಮಳೆ ಬಂದ ಕೂಡಲೇ ಮರಗಳನ್ನು, ಗಿಡಗಳನ್ನು ಮರೆಯುವುದು ಸರಿಯಲ್ಲ. ಗಿಡ ಬೆಳೆಸುವ, ಮರ ಉಳಿಸುವ ಜಾಗೃತಿ ಸದಾ ಇರಲಿ, ತೀರಾ ಅಪಾಯಕಾರಿ ಆಗಿದ್ದಲ್ಲಿ ಮಾತ್ರ ಅಂತಹಾ ಮರಗಳನ್ನು ಮಾತ್ರ ತೆರವು ಮಾಡಲು ಬೇಡಿಕೆ ಸಲ್ಲಿಸಿ. ಮಳೆಗಾಲದ ನೆಪದಲ್ಲಿ ಸದಾ ನಮ್ನನ್ನು ಸಲಹುವ ಮರಗಳನ್ನು ಕಡಿಯದಂತೆ ಎಚ್ಚರ ವಹಿಸಿ, ಗಿಡಗಳನ್ನು ನೆಡಲು ಆಸಕ್ತಿ ಮುಂದುವರಿಸಿ ಎಂದು ಅವರು ವಿನಂತಿಸಿದಾಗ ನಗು ಕರತಾಡನವಾಗಿ ಮಾರ್ಪಾಡಾಯಿತು.
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…
ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…
2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…
ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…
ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…
ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್‌ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…