ಬೆಳ್ಳಾರೆ: ಕಳೆದ ಒಂದು ವಾರದಿಂದ ಅತಿ ಹೆಚ್ಚಿನ ಮಳೆಯಿಂದಾಗಿ ಕೆರೆ, ತೋಡು, ಹಾಗೂ ಕುಮಾರಧಾರದಂತಹ ದೊಡ್ಡ ನದಿಗಳು ಸಹ ಅಪಾಯಕಾರಿ ಮಟ್ಟದಲ್ಲಿ ತುಂಬಿಹರಿಯುತ್ತಲಿದ್ದು, ನೈಸರ್ಗಿಕ ವಿಕೋಪ ಸಂಭವಿಸುವ ಸಾಧ್ಯತೆಗಳಿದ್ದು, ಇಂತಹವುಗಳ ಕಡೆಗೆ ಸಾರ್ವಜನಿಕರಾಗಲಿ ಅಥವಾ ತಮ್ಮ ಮಕ್ಕಳಾಗಲಿ ನೀರಿನೆಡೆಗೆ ಹೋಗದಂತೆ ಮುನ್ನೆಚ್ಚರಿಕೆಯಿಂದ ವಹಿಸತಕ್ಕದ್ದು ಹಾಗೂ ಹೆಚ್ಚು ಮಳೆಯಿಂದಾಗಬಹುದಾದ ಅವಘಡಗಳೇನಾದರೂ ತಮ್ಮ ಪರಿಸರದಲ್ಲಿ ಸಂಭವಿಸಿದರೆ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡುವುದು ಮತ್ತಿತರ ನೈಸರ್ಗಿಕ ಸಮಸ್ಯೆಗಳ ಬಗ್ಗೆ ಎಚ್ಚರವಹಿಸಿ ಆಗಬಹುದಾದ ಹೆಚ್ಚಿನ ಅನಾಹುತಗಳನ್ನು ನಿಯಂತ್ರಿಸುವಲ್ಲಿ ಸಹಕರಿಸಬೇಕಾಗಿ ತಿಳಿಸಲಾಗಿದೆ. ಹಾಗೂ ಅಂತಹ ಘಟನೆಗಳು ಸಂಭವಿಸಿದ ಕೂಡಲೇ ಸದಾ ನಿಮ್ಮ ರಕ್ಷಣೆಗಾಗಿರುವ ನಮ್ಮ ಠಾಣಾ ದೂರವಾಣಿ ಅಥವಾ ಠಾಣಾ ಸಬ್ ಇನ್ಸ್‌ಪೆಕ್ಟರ್ ರವರ ಗಮನಕ್ಕೆ ತರಬೇಕು ಎಂದು ಬೆಳ್ಳಾರೆ ಪೊಲೀಸ್ ಠಾಣೆಯ ಪಿ ಎಸ್ ಐ ಈರಯ್ಯ ತಿಳಿಸಿದ್ದಾರೆ.
ತುರ್ತು ಸಂಪರ್ಕಕ್ಕೆ ಬೆಳ್ಳಾರೆ ಪೊಲೀಸ್ ಠಾಣೆ: 08257-271995.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement