ಸುಳ್ಯ: ರಾಜ್ಯ ಕಂಡು ಕೇಳರಿಯದಷ್ಟು ಭೀಕರ ಪ್ರಳಯಕ್ಕೆ ಸಿಲುಕಿ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. ಪ್ರಳಯದಿಂದ ನೂರಾರು ರಸ್ತೆಗಳು, ಸೆತುವೆಗಳು ಕೊಚ್ಚಿ ಹೋಗಿದೆ. ಪ್ರಳಯದ ತೀವ್ರತೆ ಎಷ್ಟಿತ್ತೆಂದರೆ ಮುಗಿಲೆತ್ತರದ ತೂಗು ಸೇತುವೆಗಳನನ್ನೂ ಪ್ರಳಯ ಜಲ ಕೊಚ್ಚಿ ಕೊಂಡು ಹೋಗಿದೆ. ತಾನು ನಿರ್ಮಿಸಿದ ತೂಗು ಸೇತುವೆಗಳು ಪ್ರಳಯಕ್ಕೆ ಸಿಲುಕಿ ಕೊಚ್ಚಿ ಹೋಗಿರುವುದು ತಿಳಿದು ತೂಗು ಸೇತುವೆಗಳ ಸರದಾರ, ಪದ್ಮಶ್ರೀ ಪ್ರಶಸ್ತಿ ವಿಜೇತ ಸುಳ್ಯದ ಇಂಜಿನಿಯರ್ ಗಿರೀಶ್ ಭಾರದ್ವಾಜ್ ನೋವು ತೋಡಿಕೊಂಡಿದ್ದಾರೆ.
ಉಪ್ಪಿನಂಗಡಿ ಸಮೀಪ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಮುಗೇರಡ್ಕ ತೂಗು ಸೇತುವೆ ಸೇರಿ ರಾಜ್ಯದಲ್ಲಿ ಎಂಟರಿಂದ ಹತ್ತು ಸೇತುವೆಗಳಿಗೆ ಹಾನಿ ಸಂಭವಿಸಿದೆ ಎಂಬ ಮಾಹಿತಿ ಬಂದಿದೆ ಎಂದು ಗಿರೀಶ್ ಭಾರದ್ವಾಜ್ ತಿಳಿಸಿದ್ದಾರೆ. ಉತ್ತರ ಕನ್ನಡ ಮತ್ತು ಬೆಳಗಾವಿಯಲ್ಲಿ ಇವರು ನಿರ್ಮಿಸಿದ ಹಲವು ಸೇತುವೆಗಳಿಗೆ ಹಾನಿ ಉಂಟಾಗಿದೆ. ಮಳೆಗಾಲದಲ್ಲಿ ದ್ವೀಪವಾಗುವ ನೂರಾರು ಹಳ್ಳಿಗಳಿಗೆ ತೂಗು ಸೇತುವೆಗಳ ಮೂಲಕ ಸೇತು ಬಂಧ ಕಲ್ಪಿಸಿ ಜನರನ್ನು ಹೊರ ಜಗತ್ತಿಗೆ ಸಂಪರ್ಕ ಕಲ್ಪಿಸಿದವರು ಸುಳ್ಯದ ಗಿರೀಶ್ ಭಾರದ್ವಾಜ್. ತೂಗುಸೇತುವೆಗಳ ಸರದಾರನೆಂದು ಹೆಸರು ಮಾಡಿದ ಗಿರೀಶರ ಅಪೂರ್ವ ಸಾಧನೆಗೆ ದೇಶ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ತೂಗು ಸೇತುವೆಗಳು ಪ್ರಳಯಕ್ಕೆ ಸಿಲುಕಿ ಹಾನಿಯಾಗಿದೆ ಎಂದಾಗ ತುಂಬಾ ನೋವಾಯಿತು. ತನ್ನ ಕೃತಿಗಳು ನನ್ನ ಕಣ್ಣೆದುರಿನಲ್ಲೇ ನಾಶವಾಯಿತಲ್ಲಾ ಎಂಬ ನೋವಿನ ಜೊತೆಗೆ ತೂಗು ಸೇತುವೆ ಹಾನಿಯಾದ ಕಾರಣ ಆ ಹಳ್ಳಿಯ ಜನರ ಬದುಕು ಮತ್ತೆ ಸಂಕಷ್ಟಕ್ಕೆ ಸಿಲುಕಿಕೊಂಡಿತ್ತಲ್ಲ, ಜನರಿಗೆ ಮತ್ತೆ ಸಂಕಷ್ಟದ, ತೆಪ್ಪದ ಬದುಕು ಮರುಕಳಿಸುತ್ತದೆ ಅಲ್ವಾ ಎಂಬ ಬೇಷರ ಉಂಟಾಗಿದೆ ಎನ್ನುತ್ತಾರೆ ಗಿರೀಶ್ ಭಾರದ್ವಾಜ್.
50 ವರ್ಷದ ನೀರಿನ ಹರಿವು ಅಂದಾಜಿಸಿ ನಿರ್ಮಾಣ:
ಸಾಮಾನ್ಯವಾಗಿ ತೂಗು ಸೇತುವೆಗಳು ನದಿಯಲ್ಲಿ ಹರಿಯುವ ನೀರಿಗೆ ಸಿಲುಕಿ ಕೊಚ್ಚಿ ಹೋಗುವುದಿಲ್ಲ. ಮುಗಿಲೆತ್ತರದಲ್ಲಿ ನೀರಿಗೆ ಎಟಕದಷ್ಟು ಎತ್ತರದಲ್ಲಿ ಇವುಗಳನ್ನು ನಿರ್ಮಾಣ ಮಾಡಲಾಗುತ್ತದೆ. ಸೇತುವೆ ನಿರ್ಮಾಣ ಮಾಡುವ ಪ್ರದೇಶದಲ್ಲಿ 50 ವರ್ಷಗಳಲ್ಲಿ ನದಿಯ ನೀರಿನ ಹರಿವನ್ನು ಅಧ್ಯಯನ ನಡೆಸಿ ನೀರಿನ ಮಟ್ಟವನ್ನು ಅಂದಾಜಿಸಿ ಅತೀ ಹೆಚ್ಚು ನೀರು ಹರಿದಕ್ಕಿಂತ ಸುಮಾರು 10 ಅಡಿ ಮೇಲೆ ತೂಗು ಸೇತುವೆ ನಿರ್ಮಿಸಲಾಗುತ್ತದೆ. ಆದರೇ ಈ ಬಾರಿ ಉಕ್ಕಿ ಬಂದ ನೆರೆ ನೀರು ಅಷ್ಟೂ ಎತ್ತರಕ್ಕೆ ಹರಿದು ತೂಗು ಸೇತುವೆಗಳನ್ನು ಆಫೋಷನ ತೆಗೆದುಕೊಂಡಿದೆ. ನೀರಿನ ಹರಿವಿನ ರಭಸದ ಜೊತೆಗೆ ಮರ ಮಟ್ಟುಗಳು ಹರಿದು ಬಂದು ತೂಗು ಸೇತುವೆಯ ಕಂಬ ಮತ್ತಿತರ ಭಾಗಗಳಿಗೆ ಬಡಿದು ಹಾನಿ ಸಂಭವಿಸಿದೆ. ಒಟ್ಟಿನಲ್ಲಿ ಗ್ರಾಮೀಣ ಭಾಗದ ಜನರಿಗೆ ಹೊರ ಜಗತ್ತಿಗೆ ಸಂಪರ್ಕ ಕಲ್ಪಿಸುವ ತೂಗು ಸೇತುವೆಗಳಿಗೂ ಪ್ರಳಯ ಕಂಠಕವನ್ನು ತಂದಿದೆ.
ಮುಂದಿನ ಎರಡು ಮೂರು ದಿನಗಳಲ್ಲಿ ದೇಶದ ವಾಯುವ್ಯ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ…
ವಿಧಾತ್ರಿ ಎಂ, 6 ನೇ ತರಗತಿ, ರೋಟರಿ ಮಿಡ್ಟೌನ್ ಶಾಲೆ, ಮೈಸೂರು | …
ನೈನಿಕಾ.ಬಿ.ಸಿ , 4ನೇ ತರಗತಿ , ಸೈಂಟ್ ಆನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆ,…
ನಯೋನಿಕಾ.ಬಿ.ಸಿ., 4 ನೇ ತರಗತಿ, ಸೈಂಟ್ ಆನ್ಸ್ ಶಾಲೆ ಕಡಬ | -…
ನಿಪಾ ವೈರಸ್ ಹರಡುವಿಕೆಯ ವಿರುದ್ಧ ರಾಜ್ಯವು ತನ್ನ ತಡೆಗಟ್ಟುವ ಕ್ರಮಗಳನ್ನು ತೀವ್ರಗೊಳಿಸಿದೆ ಎಂದು…
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ದೇವರು ಹಾಗೂ ಗುರು…